ಮರಳು ವ್ಯಾಪಾರ ಸಂಘದ ಅಧ್ಯಕ್ಷರ ಹೆಸರು ದುರ್ಬಳಕೆ ಮಾಡಿರುವ ಆರೋಪ – ಕಾನೂನು ಕ್ರಮಕ್ಕೆ ಸಂಘದ ನಿರ್ಧಾರ

0

ಪುತ್ತೂರು: ಮರಳು ವ್ಯಾಪಾರ ಸಂಘದ ಅಧ್ಯಕ್ಷ ದಿನೇಶ್ ಮೆದು ಅವರ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡಿಕೊಂಡು ಅವರ ತೇಜೋವಧೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಇದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ ಮತ್ತು ಅಪಪ್ರಚಾರ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಘ ನಿರ್ಧಾರ ಮಾಡಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.


ಮಾ.8ಕ್ಕೆ ಕುದ್ಮಾರು ಗ್ರಾಮದ ನೂಜಿ ಎಂಬಲ್ಲಿ ಚೆನ್ನಪ್ಪ ಗೌಡ ಮತ್ತು ಅಶೋಕ ಹಾಗು ಇತರರಿಗೆ ಸಂಬಂಧಿಸಿದಂತೆ ತಮ್ಮ ವರ್ಗ ಜಮೀನಿನಲ್ಲಿ ದಾಸ್ತಾನಾಗಿ ಪರವಾನಿಗೆ ಪಡೆದು ಮತ್ತು ರಾಜಸ್ವ ಧನವನ್ನು ಸರಕಾರಕ್ಕೆ ಕಟ್ಟಿದ್ದರೂ ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿ ವಾಹನ ಮತ್ತು ಮರಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನಮ್ಮ ಸಂಘದ ಅಧ್ಯಕ್ಷ ದಿನೇಶ್ ಮೆದು ಅವರನ್ನು ಸಿಲುಕಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಯಾವುದೇ ಸಂಬಂದವಿಲ್ಲದಿದ್ದರೂ ಪ್ರಥಮ ವರ್ತಮಾನ ವರದಿಯಲ್ಲಿ ದಿನೇಶ್ ಮೆದು ಅವರನ್ನು ಸೇರಿಸಿದ್ದಾರೆ. ದಾಸ್ತಾನು ಇರಿಸಿದ ಮರಳನ್ನು ಸ್ಥಳೀಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಪರವಾನಿಗೆ ಪಡೆದು ಕೊಂಡು ಹೋಗುತ್ತಿರುವುದನ್ನು ಮರೆಮಾಚಿ ಈ ರೀತಿಯ ಸುಳ್ಳು ಕೇಸು ದಾಖಲು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ದಿನೇಶ್ ಮೆದು ಅವರ ಹೆಸರನ್ನು ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನು ಸಂಘ ಖಂಡಿಸುತ್ತದೆ. ಅಪಪ್ರಚಾರ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಘ ನಿರ್ಧಾರ ಮಾಡಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here