ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ಗುಡಿಗೆ ಶಿಲಾನ್ಯಾಸ ಹಾಗೂ ವಿಷ್ಣುಮೂರ್ತಿ ದೇವರ ಗರ್ಭಗುಡಿಯ ಪಾದುಕನ್ಯಾಸ ಕಾರ್ಯಕ್ರಮ

0

ಬಡಗನ್ನೂರುಃ ಶ್ರೀ ಕ್ಷೇತ್ರ ಪಡುಮಲೆ ಶ್ರೀ ಕೂವೆ ಶಾಸ್ತಾರ ಶಾಸ್ತಾರ ಗುಡಿಗೆ ಮಾರ್ಕಿಂಗ್  ಮಾಡುವ ಕೆಲಸ ಏ.  22 ರಂದು ನಡೆಯಿತು.  ಏ. 22 ರಂದು ಬೆಳಗ್ಗೆ 8.30 ರ ಶುಭ ಮುಹೂರ್ತದಲ್ಲಿ  ಕ್ಷೇತ್ರದ ಶಿಲ್ಪಿ ಬೆದ್ರಡ್ಕ ಶ್ರೀ ರಮೇಶ ಕಾರಂತರ ನೇತೃತ್ವದಲ್ಲಿ ಸ್ಥಳ ಗುರತು ಮಾಡಲಾಯಿತು.
  ಏ.24 ರಂದು ಶಿಲಾನ್ಯಾಸ ಮತ್ತು ಗರ್ಭಗುಡಿಯ ಪಾದುಕನ್ಯಾಸ ಕಾರ್ಯಕ್ರಮ:-   ಪಡುಮಲೆ  ಶ್ರೀ ಕೂವೆ ಶಾಸ್ತಾರ ಗುಡಿಗೆ ಶಿಲಾನ್ಯಾಸ ಹಾಗೂ  ವಿಷ್ಣುಮೂರ್ತಿ ದೇವರ  ಗರ್ಭಗುಡಿಯ ಪಾದುಕನ್ಯಾಸ ಕಾರ್ಯಕ್ರಮವು ಕ್ಷೇತ್ರ ತಂತ್ರಿವರ್ಯಾರಾದ  ಬ್ರಹ್ಮಶ್ರೀ ಕುಂಟಾರು ವೇದಮೂರ್ತಿ ವಾಸುದೇವ. ತಂತ್ರಿಯವರ ಮಾರ್ಗದರ್ಶನ   ಬ್ರಹ್ಮಶ್ರೀ  ಕುಂಟಾರು ವೇದಮೂರ್ತಿ ರವೀಶ ತಂತ್ರಿಗಳ ನೇತೃತ್ವದಲ್ಲಿ  ಏ.24 ರಂದು ಬೆಳಗ್ಗೆ ಗಂ 9 ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಾಚ್ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

LEAVE A REPLY

Please enter your comment!
Please enter your name here