ಪುತ್ತೂರು ನಗರ ವಲಯ ಬಂಟರ ಸಂಘದಿಂದ ಬಂಟ್ರೆ ಗೌಜಿ ಅಮಂತ್ರಣ ಪತ್ರ ಬಿಡುಗಡೆ- ಸಿದ್ಧತಾ ಸಭೆ

0

  • ಬಂಟ್ರೆ ಗೌಜಿ ಕಾರ‍್ಯಕ್ರಮ ಯಶಸ್ಸುಗೊಳಿಸಿ- ಶಶಿಕುಮಾರ್ ರೈ ಬಾಲ್ಯೊಟ್ಟು
  • ಬಂಟ್ರೆ ಗೌಜಿ ಹತ್ತೂರಲ್ಲಿ ಹೆಸರುಗಳಿಸಲಿ- ಶಿವರಾಮ ಆಳ್ವ ಬಳ್ಳಮಜಲುಗುತ್ತು

ಪುತ್ತೂರು: ಎ. 30 ರಂದು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಬಯಲು ರಂಗ ಮಂಟಪದಲ್ಲಿ ನಡೆಯಲಿರುವ ಬಂಟ್ರೆ ಗೌಜಿ ಕಾರ‍್ಯಕ್ರಮದಲ್ಲಿ ಎಲ್ಲಾ ಬಂಟ ಸಮುದಾಯ ಭಾಂದವರು ಭಾಗವಹಿಸುವ ಮೂಲಕ ಯಶಸ್ಸುಗೊಳಿಸುವಂತೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

 

ಅವರು ಎ. 22 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಿದ ಪುತ್ತೂರು ನಗರ ವಲಯ ಬಂಟರ ಸಂಘದ ವತಿಯಿಂದ ಬಂಟ್ರೆ ಗೌಜಿಯ ಸಿದ್ಧತಾ ಸಭೆ ಹಾಗೂ ಅಮಂತ್ರಣ ಪತ್ರ ಅನಾವರಣಗೊಳಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ ತಾಲೂಕು ಬಂಟರ ಸಂಘದ ವತಿಯಿಂದ ನಿರ್ಮಾಣವಾಗಲಿರುವ ಬಂಟರ ಭವನ ಜಾಗ ಖರೀದಿಗೆ ಈಗಾಗಲೇ 21 ಮಂದಿ ತಲಾ 10 ಲಕ್ಷ ರೂಪಾಯಿಯಂತೆ ವಾಗ್ದನ ನೀಡಿದ್ದು, 2 ಕೋಟಿ 10 ಲಕ್ಷ ರೂಪಾಯಿ ದೇಣಿಗೆ ಸಂಗ್ರಹ ಅಗಲಿದೆ. ಇನ್ನೂ 9 ಮಂದಿ ತಲಾ 10 ಲಕ್ಷ ರೂಪಾಯಿ ದೇಣಿಗೆ ನೀಡುವರಿದ್ದಾರೆ. ಜಾಗ ಖರೀದಿಗೆ ಎ. 30 ರೊಳಗೆ 3 ಕೋಟಿ ರೂಪಾಯಿ ಮೊತ್ತ ಸಂಗ್ರಹದ ಮಹತ್ವದ ಯೋಜನೆ ಪೂರ್ಣಗೊಳಲಿದೆ ಎಂದು ಹೇಳಿ, ಬಂಟ ಸಮುದಾಯದ ಮೂರು ಸಾವಿರ ಮಂದಿ ಭಾಗವಹಿಸುವ ಕಾರ‍್ಯಕ್ರಮ ಬಂಟ್ರೆ ಗೌಜಿ ಆಗಲಿದ್ದು, ಶಾಶ್ವತವಾದ ಯೋಜನೆಗೆ ಬಂಟ್ರೆ ಗೌಜಿಯ ಮೂಲಕ ಚಾಲನೆ ದೊರೆಯಲಿದ್ದು, ಮುಂಬರುವ ದಿನಗಳಲ್ಲಿ ಸುಂದರವಾದ ಬಂಟರ ಭವನವನ್ನು ಕಟ್ಟುವ ಕಾಯಕದಲ್ಲಿ ಬಂಟ ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ವಿನಂತಿಸಿದರು.

ಬಂಟ್ರೆ ಗೌಜಿ ಹತ್ತೂರಲ್ಲಿ ಹೆಸರುಗಳಿಸಲಿ- ಶಿವರಾಮ ಆಳ್ವ ಬಳ್ಳಮಜಲುಗುತ್ತು
ಪುತ್ತೂರು ನಗರ ವಲಯ ಬಂಟರ ಸಂಘದ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು ರವರು ಮಾತನಾಡಿ ಎ. 30 ರಂದು ನಡೆಯುವ ಬಂಟ್ರೆ ಗೌಜಿ ಕಾರ‍್ಯಕ್ರಮದಲ್ಲಿ ಪುತ್ತೂರು ನಗರ ವ್ಯಾಪ್ತಿಯ ಎಲ್ಲಾ ಬಂಟ ಭಾಂದವರು ಭಾಗವಹಿಸವಂತೆ ವಿನಂತಿಸಿದರು. ಬಂಟ್ರೆ ಗೌಜಿ ಕಾರ‍್ಯಕ್ರಮ ಹತ್ತೂರಲ್ಲಿ ಹೆಸರುಗಳಿಸುವಂತೆ ಆಗುವ ಮೂಲಕ ಪುತ್ತೂರಿನ ಬಂಟರ ಸಂಘಕ್ಕೆ ಮತ್ತಷ್ಟು ಕೀರ್ತಿ ಬರಲಿ ಎಂದು ಆಶಿಸಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷರುಗಳಾದ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ರೋಶನ್ ರೈ ಬನ್ನೂರು, ಪ್ರಧಾನ ಕಾರ‍್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ನಿರ್ದೇಶಕರುಗಳಾದ ಸಂತೋಷ್ ಶೆಟ್ಟಿ ಸಾಜ, ಸುಧೀರ್ ಶೆಟ್ಟಿ ತೆಂಕಿಲ, ನಿತ್ಯಾನಂದ ಶೆಟ್ಟಿ ಮನವಳಿಕೆ, ಪದ್ಮನಾಭ ಶೆಟ್ಟಿ ಬೊಳುವಾರು, ಡಾ.ದೀಪಕ್ ರೈ, ಬಂಟರ ಸಂಘ ಪುತ್ತೂರು ನಗರ ವಲಯದ ಪ್ರಧಾನ ಕಾರ‍್ಯದರ್ಶಿ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪ್ರಧಾನ ಕಾರ‍್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಕೋಶಾಧಿಕಾರಿ ವಾಣಿ ಶೆಟ್ಟಿ ನೆಲ್ಯಾಡಿ, ಬಂಟರ ಸಂಘದ ಪ್ರಮುಖರಾದ ಎಂ. ಆರ್.ಜಯಕುಮಾರ್ ರೈ ಮಿತ್ರಂಪಾಡಿ, ಸುರೇಶ್‌ಚಂದ್ರ ರೈ ಬೆಳ್ಳಿಪ್ಪಾಡಿ, ಬಾಲಚಂದ್ರ ರೈ ಕುರಿಯ ಏಳ್ನಾಡುಗುತ್ತು, ಕೃಷ್ಣ ಪ್ರಸಾದ್ ಭಂಡಾರಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ಮಾಜಿ ಪ್ರಧಾನ ಕಾರ‍್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಮಹಿಳಾ ಬಂಟರ ಸಂಘದ ಮಾಜಿ ಪ್ರಧಾನ ಕಾರ‍್ಯದರ್ಶಿ ವತ್ಸಲಾ ಪದ್ಮನಾಭ ಶೆಟ್ಟಿ, ಸ್ವರ್ಣಾಲತಾ ಜೆ ರೈ, ಬಂಟರ ಭವನದ ಭಾಸ್ಕರ್ ರೈ, ರವಿಚಂದ್ರ ರೈ ಕುಂಬ್ರ, ಶಿಕ್ಷಕಿ ನಯನಾ ವಿ. ರೈ ಕುದ್ಕಾಡಿ, ಗೀತಾ ಮೋಹನ್ ರೈ, ಕುಸುಮಾ ಪಿ.ಶೆಟ್ಟಿ ಕೆರೆಕೋಡಿ ಸೇರಿದಂತೆ, ಬಂಟರ ಸಂಘ, ಮಹಿಳಾ ಹಾಗೂ ಯುವ ಬಂಟರ ಸಂಘ ಹಾಗೂ ಬಂಟರ ಸಂಘದ ನಗರ ವಲಯದ ಪದಾಧಿಕಾರಿಗಳು ಸೇರಿದಂತೆ ಅನೇಕ ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here