ಬಂಟ್ರೆ ಗೌಜಿ ಕಾವಿನಲ್ಲಿ ಸಮಾಲೋಚನಾ ಸಭೆ, ಸಾಧಕರಿಗೆ ಸನ್ಮಾನ

0

ಪುತ್ತೂರು; ಎ.30 ರಂದು ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ನಡೆಯಲಿರುವ ಬಂಟ್ರೆಗೌಜಿ ಕಾರ್ಯಕ್ರಮದ ಪ್ರಯುಕ್ತ ಜಾತಿ ಬಾಂಧವರ ಸಮಾಲೋಚನಾ ಸಭೆಯು ಕಾವು ಸಮುದಾಯ ಭವನದಲ್ಲಿ ಎ.21 ರಂದು ನಡೆಯಿತು.

ಸಭೆಯಲ್ಲಿ ಕಾವು ಮಾಡ್ನೂರು, ಅರಿಯಡ್ಕ,ಪಡುವನ್ನೂರು,ಬಡಗನ್ನೂರು,ನೆಟ್ಟಣಿಗೆ ಮುಡ್ನೂರು,ಕೊಳ್ತಿಗೆ ಗ್ರಾಮ ವಲಯಕ್ಕೆ ಸಂಬಂಧಿಸಿದ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರತೀ ಗ್ರಾಮದಿಂದ ಓರ್ವ ಸಾಧಕನನ್ನು ಗುರುತಿಸಿ ಗೌರವಿಸಲಾಯಿತು. ಪುತ್ತೂರು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿದ್ದರು.

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿ ಸಂಚಾಲಕರಾದ ದಯಾನಂದ ರೈ ಮನವಳಿಕೆ ಗುತ್ತು, ಸಹ ಸಂಚಾಲಕರಾದ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ರೈ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ, ಮಡಿಕೇರಿ ಬಂಟರ ಸಂಘದ ಅಧ್ಯಕ್ಷೆ ಜಯಂತಿ ಶೆಟ್ಟಿ, ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಂ ಸುಂದರ್ ರೈ ಉಪಸ್ಥಿತರಿದ್ದರು.

ಬಂಟರ ಸಂಘದ ನಿರ್ದೇಶಕ ದಿವ್ಯನಾಥ ಶೆಟ್ಟಿ ಕಾವು ಸ್ವಾಗತಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ ನಿರ್ದೇಶಕರಾದ ರಮೇಶ್ ರೈ ಸಾಂತ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಗ್ರಾಮದ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ನಯನ ವಿ ರೈ ಕುಡ್ಕಾಡಿ, ಜಯಪ್ರಕಾಶ್ ರೈ ನೂಜಿಬೈಲು, ಅಬ್ರತಾ ರೈ ಅರಿಯಡ್ಕ, ಬಾಲಕೃಷ್ಣ ಶೆಟ್ಟಿ ಕಾವು, ಕಾಂತಪ್ಪ ರೈ ಉರುಂಬಿ ಕೊಳ್ತಿಗೆಯವರನ್ನು ವಿವಿಧ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಸನ್ಮಾನಿಸಲಾಯಿತು. ಶಾಲು ಸ್ಮರಣಿಕೆ ಹಾಗೂ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here