ಲಂಚ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಕಾನೂನು ಮಾಹಿತಿ ಕಾರ್ಯಾಗಾರ

0

  • ಅದೊಂದು ಮಾರಕ ರೋಗ. ನಿವಾರಣೆಯಾಗಬೇಕು: ಎ.ಸೋಮಶೇಖರ್
  • ಜನಜಾಗೃತರಾದರೆ ಲಂಚ ನಿರ್ಮೂಲನೆ ಎ.ಸಿ. ಗಿರೀಶ್‌ನಂದನ್
  • ದೇಶಕ್ಕೆ ಅಂಟಿರುವ ಅನಿಷ್ಟ . ಮನಸ್ಸಿದ್ದರೆ ನಿಲ್ಲಿಸಬಹುದು ಎಸ್.ಅಂಗಾರ

 

                                               ಸಚಿವ ಅಂಗಾರರಿಂದ ವಾಹನ ಜಾಥಾಕ್ಕೆ ಚಾಲನೆ

 

ಕಳೆದ ಮೂರು ತಿಂಗಳಿನಿಂದ ಲಂಚ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಕಾರ್ಯ ಮಾಡುತ್ತಿರುವ ಸುದ್ದಿ ಜನಾಂದೋಲನಕ್ಕೆ ಬೆಂಬಲವಾಗಿ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ದ.ಕ. ಜಿಲ್ಲಾಡಳಿತದ ಸಹಯೋಗದೊಂದಿಗೆ ಲಂಚ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಕಾನೂನು ಮಾಹಿತಿ ಕಾರ್ಯಾಗಾರ ಹಾಗೂ ಅಧಿಕಾರಿಗಳೊಂದಿಗೆ ಜನರ ಸಂವಹನ ಕಾರ್ಯಕ್ರಮ ಎ.22ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು. ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್ ವಹಿಸಿದ್ದರು.

 

                                            ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಿಧಿ ಬೋಧನೆ – ಸ್ವೀಕಾರ

ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾನೂನು ಮಾಹಿತಿ ನೀಡಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ನ್ಯಾಯಾಽಶ ಸೋಮಶೇಖರ್ ಎ ಗಾಂಽಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಯಶ್ವಂತ್ ಕುಮಾರ್ ಕೆ ಕಾನೂನು ಮಾಹಿತಿ ನೀಡಿದರು. ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಸುಳ್ಯ ಕ್ಷೇತ್ರ ಶಿಕ್ಷಣಾಽಕಾರಿ ಎಸ್.ಪಿ. ಮಹಾದೇವ, ಸುಳ್ಯ ಸಿಡಿಪಿಒ ರಶ್ಮಿ ಅಶೋಕ್ ನೆಕ್ರಾಜೆ, ಸುಳ್ಯ ಸಹಾಯಕ ಸರಕಾರಿ ಅಭಿಯೋಜಕರಾದ ಜನಾರ್ದನ ಬಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಪ್ರಶ್ನೆಗಳನ್ನು ಅಧೀಕಾರಿಗಳ ಮುಂದೆ ಇರಿಸಲಾಯಿತು. ಅದಕ್ಕೆ ಅವರು ಉತ್ತರಿಸಿದರು.

 

                                ಲಂಚ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಗಾಗಿ ಏರ್ಪಡಿಸಲಾದ ವಾಹನ ಜಾಥಾದ ದೃಶ್ಯ

 

ಸುದ್ದಿ ಜನಾಂದೋಲನದ ಕೆಲಸ ಶ್ಲಾಘನೀಯ ನ್ಯಾಯಾಧೀಶ ಸೋಮಶೇಖರ.ಎ

ಲಂಚ ಭ್ರಷ್ಟಾಚಾರ ಎನ್ನುವುದು ಮಾರಕ ರೋಗ. ಸಮಾಜಕ್ಕೆ ಇದು ಕೆಟ್ಟ ದುರ್ನಡತೆ. ಸರಕಾರಿ ಅಧೀಕಾರಿಗಳು ಸಾರ್ವಜನಿಕರಿಗೆ ಕೊಡುವ ಸೇವೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು. ಲಂಚ ಪಡೆಯಲು ಹಣವೇ ಆಗ ಬೇಕೆಂದಿಲ್ಲ. ಕೆಲಸ ಮಾಡಿಕೊಡಲು ವಸ್ತು ರೂಪದಲ್ಲಿ ಏನೇ ಪಡೆದುಕೊಂಡರು ಅದು ಲಂಚ ಎನಿಸಿಕೊಳ್ಳುತ್ತದೆ. ವಿಶ್ವ ಸಂಸ್ಥೆಯು ಭ್ರಷ್ಟಾಚಾರ ನಿರ್ಮೂಲನೆಯ ಕುರಿತು ಸಭೆ ನಡೆಸಿದ ಸಂದರ್ಭದಲ್ಲಿ ಲಂಚ ಭ್ರಷ್ಟಾಚಾರ ಏಡ್ಸ್ ಗಿಂತಲೂ ದೊಡ್ಡ ಮಾರಕ ರೋಗ ಎಂದು ಅಭಿಪ್ರಾಯ ಪಟ್ಟಿದೆ ಎಂದು ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ ಎ ಹೇಳಿದರು.

ಕಾರ್ಯಕ್ರಮದಲ್ಲಿ ಮಾಹಿತಿ ಅರಿವು ನೀಡಿದ ಅವರು, “ಲಂಚ ಭ್ರಷ್ಟಾಚಾರ ವಿರುದ್ಧ ಆಂದೋಲನ ನಡೆಸುವ ಪತ್ರಿಕೆ ದೇಶದಲ್ಲಿ ಇದ್ದರೆ ಅದು ಡಾ| ಶಿವಾನಂದರ ನೇತೃತ್ವದಲ್ಲಿ ನಡೆಯುವ ಸುದ್ದಿ ಮಾಧ್ಯಮವೊಂದೆ ಎಂದು ನಾನು ಕಂಡುಕೊಂಡಿದ್ದೇನೆ. ಕೆಲವು ಪತ್ರಿಕೆ, ಮಾಧ್ಯಮಗಳನ್ನು ಗಮನಿಸಿ ಅದು ಪಕ್ಷ, ಅವರಿಗೆ ಯಾರೂ ಬೇಕೋ ಯಾರಿಗೆ ಅನುಕೂಲವಾಗುತ್ತದೋ ಅವರಿಗೆ ಬೇಕಾದಂತೆ ಬಿಂಬಿಸುತ್ತಾರೆ. ಅಂತದರಲ್ಲಿ ಎಲ್ಲರನ್ನು ಎದುರು ಹಾಕಿಕೊಂಡು ಸುಳ್ಯದ ಸುದ್ದಿ ಜನಾಂದೋಲನ ವೇದಿಕೆ ಇಂದು ಮಾಡುತ್ತಿರುವ ಕೆಲಸವನ್ನು ಎಲ್ಲರೂ ಶ್ಲಾಸಬೇಕು ಎಂದು ಅವರು ಹೇಳಿದರು. ಒಬ್ಬ ಸರಕಾರಿ ನೌಕರ ಜನರ ಕೆಲಸವನ್ನು ಮಾಡಿಕೊಡುವುದರಲ್ಲಿ ವಿಳಂಬ ನೀತಿ ತೋರಿದರೆ ಏನು ಮಾಡಬಹುದು ? ಜಾತಿ, ಆದಾಯ ಇನ್ನಿತರ ಮಾಹಿತಿ ಕೇಳಿದಾಗ ಆ ಅಧಿಕಾರಿ ಕೊಡದಿದ್ದರೆ ಕೂಡಲೇ ಆ ಸಂಸ್ಥೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಅವರಿಗೆ ತಿಳಿಸಬೇಕು. ಅವರಿಗೆ ತಿಳಿಸಿಯೂ ಕೆಲಸ ಆಗದಿದ್ದರೆ ಮಾಹಿತಿ ಹಕ್ಕಲ್ಲಿ ಮಾಹಿತಿ ಕೇಳಬಹುದು. ಅಲ್ಲಿಯೂ ಸಿಗದಿದ್ದರೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ದೂರಿಕೊಂಡರೆ ಅವರು ಅದರ ವಿಚಾರಣೆ ಮಾಡುತ್ತಾರೆ. ೧ ರಸ್ತೆಗೆ ರೂ. ೧೦ಲಕ್ಷ ಅನುದಾನ ಸಿಕ್ಕಿ ಅಲ್ಲಿ ಸರಿಯಾದ ಕೆಲಸ ಆಗುವುದಿಲ್ಲವೆಂದಾದರೆ ಇಂಜಿನಿಯರ್ ಮೇಲೆ ಕಂಪ್ಲೈಂಟ್ ಫೈಲ್ ಮಾಡಿ ನೋಡಿ. ಲೋಕಾಯುಕ್ತದವರು ಯಾವ ರೀತಿ ಅದನ್ನು ತೆಗೆದುಕೊಳ್ಳತ್ತಾರೆಂದು ನಿಮಗೆ ಗೊತ್ತಾಗುತ್ತದೆ ಎಂದು ಸೋಮಶೇಖರ್ ವಿವರ ನೀಡಿದರು.

ಇಂದು ಇಲಾಖೆಗಳಲ್ಲಿ ಭ್ರಷ್ಟರು ತುಂಬಿ ತುಳುಕಾಡುತ್ತಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಲಂಚ ಪಡೆಯುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸರಕಾರಿ ಅಧಿಕಾರಿಗಳು ಪ್ರಾಮಾಣಿಕರಾದರೆ ಆ ಸಮಸ್ಯೆಯೇ ಇರುವುದಿಲ್ಲ. ರಾಜಕೀಯ ನಾಯಕರೂ ಕೂಡಾ ಭ್ರಷ್ಟಾಚಾರ ತಡೆಯಲು ಇಚ್ಛಾಶಕ್ತಿ ತೋರಬೇಕು. ಭ್ರಷ್ಟ ಅಽಕಾರಿಯನ್ನು ರಕ್ಷಿಸುವ ಕೆಲಸ ಆಗಬಾರದು. ಇದರಿಂದ ಭ್ರಷ್ಟಾಚಾರ ವೇಗ ಪಡೆದುಕೊಳ್ಳುತ್ತದೆ. ನ್ಯಾಯಾಂಗ ವ್ಯವಸ್ಥೆಯೂ ದುರ್ಬಲ ಆಗಬಾರದು. ನ್ಯಾಯಾಲಯ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಸಂಸತ್ತಿನಲ್ಲಿಯೂ ಇದುವರೆಗೆ ಕಠಿಣ ಕಾನೂನು ಬಂದಿಲ್ಲ. ಆದ್ದರಿಂದ ಅಽಕಾರಿಗಳು ತಿಳಿದುಕೊಂಡು ಸಾರ್ವಜನಿಕರಿಗೆ ತಮ್ಮ ಮೇಲೆ ನಂಬಿಕೆ ಬರುವಂತ ಕೆಲಸ ಮಾಡಬೇಕು” ಎಂದು ಅವರು ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆಗೆ ಜನರ ಸಹಕಾರ ಮುಖ್ಯ ಎ.ಸಿ. ಗಿರೀಶ್ ನಂದನ್

“ಲಂಚ ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ನಡೆಸುತ್ತಿರುವ ಈ ಆಂದೋಲನ ತುಂಬಾ ಉತ್ತಮ ಕಾರ್ಯಕ್ರಮ. ಲಂಚ ನಿರ್ಮೂಲನೆಗೆ ಜನರ ಸಹಕಾರ ಅತೀ ಮುಖ್ಯಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ನಮ್ಮ ಕೆಲಸ ಮೊದಲು ಆಗಬೇಕೆನ್ನುವುದು ಕೂಡಾ ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ. ನೂರಾರು ಜನರು ಒಂದು ಕೆಲಸಕ್ಕೆ ಅರ್ಜಿ ಹಾಕಿ ಕ್ಯೂನಲ್ಲಿ ನಿಂತಿರುತ್ತಾರೆ. ಆದ್ದರಿಂದ ಜನರು ಜಾಗೃತರಾಗಬೇಕು. ನಿಮ್ಮ ಸಹಕಾರ ನಮಗೆ ಅತೀ ಮುಖ್ಯ. ಮೇಲಾಽಕಾರಿಗಳಲ್ಲಿ ಹೇಳಿದರೇನೆ ಕೆಲಸ ಆಗುವುದು ಎನ್ನುವುದು ಸರಿಯಲ್ಲ. ಎಲ್ಲರಿಗೂ ಅವರವರ ಜವಾಬ್ದಾರಿ ಇರುತ್ತದೆ. ಜನರು ನೀಡಿದ ಕೆಲಸ ಆ ಅಧಿಕಾರಿ ಮಾಡದಿದ್ದ ಪಕ್ಷದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ. ಅಲ್ಲಿಯೂ ಆಗದಿದ್ದರೆ ಎ.ಸಿ., ಡಿ.ಸಿ., ಲೋಕಾಯುಕ್ತ, ಭ್ರಷ್ಟಾಚಾರ ದಳ ಹೀಗೆ ಕಂಪ್ಲೈಂಟ್ ಫೈಲ್ ಮಾಡಬಹುದು. ಸುದ್ದಿಯವರು ನಡೆಸುವ ಈ ಆಂದೋಲನ ಒಳ್ಳೆಯದು. ನಮಗೂ ಅನೇಕ ಮಾಹಿತಿಗಳು ಸಿಗುತ್ತಿರುತ್ತದೆ. ಕೆಲವು ಕಡೆ ಕೆಲಸಗಳಾಗದಿರುವ ವಿಚಾರ ಮತ್ತು ಊರಿನ ಸಮಸ್ಯೆಗಳು ನಮಗೆ ಗೊತ್ತಾಗುತ್ತದೆ ಎಂದು ಎ.ಸಿ.ಯವರು ಹೇಳಿದರು. “ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಕೆಲವು ಕೆಲಸಗಳು ತಡವಾಗುತ್ತಿದೆ. ಪಹಣಿಯಲ್ಲಿರುವ ದೋಷ, ಪೋಡಿ ಮುಕ್ತ ಕಾರ್ಯಗಳು ನಡೆಯುತ್ತಿದೆ. ೧೧ ಇ ಕರೆಕ್ಷನ್ ಗೆ ಬಂದ ಅರ್ಜಿಗಳು ಪೆಂಡಿಂಗ್ ಇದೆ. ಅದರ ಕೆಲಸವನ್ನು ಮಾಡಿ ಮುಗಿಸಲಾಗುವುದು ಎಂದು ಅವರು ಹೇಳಿದರು.

ಕಂದಾಯ ಇಲಾಖೆಯಲ್ಲಿ ಲಂಚ ಕೇಳಿದರೆ ನನಗೆ ತಿಳಿಸಿ: ತಹಶೀಲ್ದಾರ್ -ಅನಿತಾ ಲಕ್ಷ್ಮೀ

`’ಲಂಚ ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ನಡೆಸುತ್ತಿರುವ ಆಂದೋಲನ ಒಳ್ಳೆಯ ಕಾರ್ಯಕ್ರಮ. ಸುಳ್ಯ ತಾಲೂಕು ಶೇ.೧೦೦ ಭ್ರಷ್ಟಾಚಾರ ಮುಕ್ತ ತಾಲೂಕಾಗಲಿ” ಎಂದು ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಹೇಳಿದರು. ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿದೆ. ಯಾರಿಗೂ ಯಾವುದೇ ತೊಂದರೆಗಳು ಆಗುತ್ತಿಲ್ಲ. ಹಾಗೊಂದು ವೇಳೆ ಲಂಚ ಕೇಳಿ ತೊಂದರೆಗಳಾ ಗುತ್ತಿದ್ದರೆ ಜನರು ನೇರವಾಗಿ ಬಂದು ಹೇಳಿ. ಬೇರೆ ಇಲಾಖೆಯಿಂದ ಸಮಸ್ಯೆಗಳಾಗುತ್ತಿದೆ ಎಂದರೂ ಗಮನಕ್ಕೆ ತನ್ನಿ. ಅಲ್ಲಿಯ ಮುಖ್ಯಸ್ಥರಿಗೆ ನಾನು ತಿಳಿಸುತ್ತೇನೆ” ಎಂದು ತಹಶೀಲ್ದಾರರು ಹೇಳಿದರು. ಕಂದಾಯ ಇಲಾಖೆಯಲ್ಲಿ ಆರ್‌ಆರ್‌ಟಿ, ಎನ್‌ಸಿಆರ್ ಕಡತಗಳು ಬಾಕಿ ಇದೆ. ನಿಯಮಗಳನ್ನು ಬ್ರೇಕ್ ಮಾಡಿ ಕೆಲಸ ಮಾಡಲು ಬರೋದಿಲ್ಲ. ಸುತ್ತೋಲೆ ಪ್ರಕಾರ ಕೆಲಸ ಮಾಡುತ್ತೇವೆ. ಪಿಂಚಣಿಯಂತ ಕೆಲಸದಲ್ಲಿ ಮಾನವೀಯತೆಯನ್ನು ತೋರುತ್ತೇವೆ ಎಂದು ಹೇಳಿದ ಅವರು, “ತಮ್ಮ ಕೆಲಸ ಆಗಬೇಕೆಂದು ಬ್ರೋಕರ್‌ಗಳ ಜತೆಗೆ ಬರಬೇಡಿ. ಹಣ ವ್ಯರ್ಥ ಮಾಡಿಕೊಳ್ಳಬೇಡಿ” ಎಂದು ಅವರು ಹೇಳಿದರು.

 

ದೇಶಕ್ಕೆ ಅಂಟಿರುವ ಅನಿಷ್ಟ. ಮನಸ್ಸಿದ್ದರೆ ನಿಲ್ಲಿಸಬಹುದು: ಎಸ್.ಅಂಗಾರ

`’ಲಂಚ ಭ್ರಷ್ಟಾಚಾರ ಈ ದೇಶದಲ್ಲಿ ಅಂಟಿಕೊಂಡಿರುವ ಅನಿಷ್ಟ ಪದ್ಧತಿ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ನಡೆಸುತ್ತಿರುವುದು ಅತ್ಯಂತ ಮಹತ್ವದ ಕಾರ್ಯ. ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ನಾನು ಶುಭ ಹಾರೈಸುತ್ತೇವೆ” ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು. ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡ ಬೃಹತ್ ವಾಹನ ಜಾಥಾಕ್ಕೆ ಚಾಲನೆ ನೀಡಿದ ಸಚಿವ ಅಂಗಾರರು ಬಳಿಕ ಮಾತನಾಡಿದರು. ಲಂಚ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಟ ಮಾಡಬಹುದು. ಅದಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಆ ರೀತಿಯ ಮನಸ್ಸಿದ್ದರೆ. ಅದನ್ನು ನಾವೇ ನಿಲ್ಲಿಸಬಹುದು. ಇಂದು ತಾಲೂಕಿನಾದ್ಯಂತ ಈ ರೀತಿಯ ಜಾಗೃತಿ ಮೂಡಿಸುವುದು ಒಳ್ಳೆಯ ಕಾರ್ಯ ಎಂದು ಸಚಿವರು ಹೇಳಿದರು.

ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ರಾಜರ ಆಳ್ವಿಕೆಯಲ್ಲಿಯೂ ಇತ್ತು ; ಈ ಕುರಿತು ಜಾಗೃತಿ ಕೈಗೊಂಡ ಸುದ್ದಿ ಕಾರ್ಯ ಒಳ್ಳೆಯದು

ಭ್ರಷ್ಟಾಚಾರ ಇವತ್ತು ನಿನ್ನೆ ಹುಟ್ಟಿಕೊಂಡಿರುವುದು ಅಲ್ಲ. ರಾಜರ ಆಳ್ವಿಕೆಯಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿತ್ತೆಂದು ಕೌಟಿಲ್ಯ ತನ್ನ ಅರ್ಥಶಾಸ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ಆದರೆ ಇಂದಿನ ದಿನದಲ್ಲಿ ಎಲ್ಲ ಕಡೆಯಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಕಳೆದ ಎರಡೂವರೆ ತಿಂಗಳಿನಿಂದ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸಿ ಅದರ ವಿರುದ್ಧ ಧ್ವನಿ ಎತ್ತುವ ಕಾರ್ಯ ಸುದ್ದಿ ಸಂಸ್ಥೆಯ ಡಾ| ಶಿವಾನಂದರ ನೇತೃತ್ವದಲ್ಲಿ ಆಗುತ್ತಿರುವುದು ತುಂಬಾ ಒಳ್ಳೆಯ ಕಾರ್ಯ ಎಂದು ಸುಳ್ಯ ನ್ಯಾಯಾಲಯದ ನ್ಯಾಯಾಧೀಶರಾದ ಯಶ್ವಂತ್ ಕುಮಾರ್ ಹೇಳಿದರು.

೧೯೮೮ರಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಕಾನೂನು ಜಾರಿಗೆ ಬಂತು. ಅದರ ಪ್ರಕಾರ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಯಿತು. ಭ್ರಷ್ಟಾಚಾರ ದ ಆರೋಪ ಸಾಬೀತಾದರೆ ಆ ವ್ಯಕ್ತಿಗೆ ೩ರಿಂದ ೭ ವರ್ಷ ಶಿಕ್ಷೆ ನೀಡಬಹುದಾಗಿದೆ. ಈ ಕಾಯ್ದೆಯನ್ವಯ ಒಬ್ಬ ವ್ಯಕ್ತಿಯಲ್ಲಿ ತನ್ನ ಸಂಬಳಕ್ಕಿಂತ ಹೆಚ್ಚಿಗೆ ಹಣ ಇದ್ದರೆ ಅದು ಭ್ರಷ್ಟಾಚಾರದಿಂದ ಪಡೆದದ್ದು ಅಲ್ಲ ಎಂದು ಅದನ್ನು ರುಜು ಮಾಡುವ ಭಾರವೂ ಆತನ ಮೇಲೆ ಇದೆ. ಹಲವು ಮಂದಿ ಹೇಳುವುದುಂಟು. ಲಂಚ ಪಡೆಯುವುದು ಹಾಗೂ ಲಂಚ ಕೊಡುವುದು ಕೂಡಾ ತಪ್ಪೆಂದು. ಆದರೆ ಅಽಕಾರಿ ಕೇಳಿದ ಕಾರಣಕ್ಕೆ ಲಂಚ ಕೊಟ್ಟನೆಂದರೆ ಅದು ಕೊಟ್ಟವನ ಮೇಲೆ ಪ್ರಕರಣ ದಾಖಲು ಮಾಡಲಾಗುವುದಿಲ್ಲ. ಈ ಮಾಹಿತಿ ಹಲವರಿಗೆ ಇಲ್ಲ. ಲಂಚ ಕೊಡುವ ವ್ಯಕ್ತಿ ಅಧೀಕಾರಿಗೆ ಒತ್ತಾಯ ಪೂರ್ವಕವಾಗಿ ಹಣ ಕೊಟ್ಟು ಕೆಲಸ ಮಾಡಲು ಹೇಳಿದರೆ ಮಾತ್ರ ಅದು ಅಪರಾಧ ಎನಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು. ಇಂದು ಶಿವಾನಂದರು ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ನಿರ್ಮೂಲನೆಗೆ ಕೆಲವು ವರ್ಷ ಬೇಕಾಗಬಹುದೆಂದು ನನಗನಿಸುತ್ತದೆ. ಸರಕಾರಗಳು ಕೂಡಾ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿವೆ. ಹಿಂದೆ ತಪ್ಪು ಮುಚ್ಚಿ ಹಾಕಿಕೊಳ್ಳಲು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಇಂದು ದಾಖಲೆಗಳು ಸರಿ ಇದ್ದರೂ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ಕೊಡುವುದಕ್ಕಿಂತಲೂ ಅದನ್ನು ನೋಡಿಕೊಂಡು ಸುಮ್ಮನೆ ಇರೋದು ದೊಡ್ಡ ತಪ್ಪಾಗುತ್ತದೆ” ಎಂದು ಅವರು ಹೇಳಿದರು.

ವಾಹನ ಜಾಥಾ : ಸಚಿವ ಅಂಗಾರರು ವಾಹನ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡ ವಾಹನ ಜಾಥಾ ಶ್ರೀರಾಂ ಪೇಟೆಯಾಗಿ ಸುಳ್ಯದ ಮುಖ್ಯ ರಸ್ತೆಯಲ್ಲಿ ಗಾಂಽನಗರಕ್ಕೆ ಹೋಗಿ ಅಲ್ಲಿಂದ ತಿರುಗಿ ರಥಬೀದಿ, ಸುಳ್ಯ ತಾಲೂಕು ಕಚೇರಿ ಮುಂಭಾಗದಿಂದ ಮೆಸ್ಕಾಂ ರಸ್ತೆ, ವಿವೇಕಾನಂದ ವೃತ್ತ, ತಾ.ಪಂ. ಕಚೇರಿ, ನ.ಪಂ. ಕಚೇರಿ, ಸುಳ್ಯ ಜೂನಿಯರ್ ಕಾಲೇಜು ರಸ್ತೆಯಾಗಿ ಮತ್ತೆ ಸುಳ್ಯ ಮುಖ್ಯ ರಸ್ತೆಗೆ ಬಂದು ಸೇರಿತು. ಅಲ್ಲಿಂದ ಖಾಸಗಿ ಬಸ್ ನಿಲ್ದಾಣವಾಗಿ ಸಭಾ ಕಾರ್ಯಕ್ರಮ ನಡೆಯುವ ಶಿವಕೃಪಾ ಕಲಾಮಂದಿರದ ಎದುರಿಗೆ ಬಂದು ಜಾಥಾ ಸಮಾಪನ ಗೊಂಡಿತು. ದ್ವಿಚಕ್ರ, ತ್ರಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿದ್ದ ಈ ಮೆರವಣಿಗೆಯನ್ನು ಹಲವು ವರ್ತಕರು ತಮ್ಮ ಅಂಗಡಿಯ ಎದುರುಗಡೆ ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ನಾಸಿಕ್ ಬ್ಯಾಂಡ್ ವಾಹನದೊಂದಿಗೆ ಸಾಗಿದ ಜಾಥಾವನ್ನು ಜನ ರಸ್ತೆಯ ಇಕ್ಕೆಲಗಳಲ್ಲಿರುವ ಕಟ್ಟಡಗಳಲ್ಲಿ ನಿಂತು ವೀಕ್ಷಿಸಿದರು.

ಎಪಿಪಿ ಜನಾರ್ದನ್ ಬಿ., ತಹಶೀಲ್ದಾರ್ ಅನಿತಾಲಕ್ಷ್ಮೀ, ಸಹಾಯಕ ಆಯುಕ್ತ ಗಿರೀಶ್ ನಂದನ್, ನ್ಯಾಯಮೂರ್ತಿ ಸೋಮಶೇಖರ್ ಎ., ನ್ಯಾಯಮೂರ್ತಿ ಯಶ್ವಂತ್ ಕುಮಾರ್ ಕೆ., ಬಿಇಓ ಎಸ್.ಪಿ. ಮಹಾದೇವಪ್ಪ, ಸಿಡಿಪಿಒ ರಶ್ಮಿ ಅಶೋಕ್ ನೆಕ್ರಾಜೆ, ಡಾ.ಯು.ಪಿ.ಶಿವಾನಂದ್ ವೇದಿಕೆಯಲ್ಲಿದ್ದರು.

LEAVE A REPLY

Please enter your comment!
Please enter your name here