ಎ.26-28:ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಮ್ಮನವರು, ಸ-ಪರಿವಾರ ದೈವಗಳ ವಾರ್ಷಿಕ ಮಾರಿಪೂಜೆ

0

ಪುತ್ತೂರು: ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ವಾರ್ಷಿಕ ಮಾರಿಪೂಜೆಯು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿ ಕೆಮ್ಮಿಂಜೆರವರ ನೇತೃತ್ವದಲ್ಲಿ ಎ.26 ರಿಂದ 28ರ ವರೆಗೆ ಜರಗಲಿದೆ.

ಮಂಗಳವಾರದಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ-ಪುಣ್ಯವಾಚನ ಶುದ್ಧಿ, ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ಸಾರ್ವಜನಿಕ ಸತ್ಯನಾರಾಯಣ ಪೂಜೆ ಬಳಿಕ ಶ್ರೀ ಅಮ್ಮನವರಿಗೆ ಕಲಶಾಭೀಷೇಕ, ಪರಿವಾರದೈಗಳಿಗೆ ತಂಬಿಲ, ಶ್ರೀ ಅಮ್ಮನವರಿಗೆ ಗುಡಾನ್ನ ಮತ್ತು ಹಾಲು ಪಾಯಸ ಸಮರ್ಪಣೆ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ `ಅಮ್ಮನ ಪ್ರಸಾದ’ ನಡೆಯಲಿದೆ. ಸಂಜೆ ಶ್ರೀ ಕಲ್ಲುರ್ಟಿ ದೈವದ ಅಭಯ ಸ್ವೀಕಾರ, ರಾತ್ರಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಯುವ ಕಲಾವಿದರಿಂದ ಪ್ರದೀಪ್ ಕುಮಾರ್ ರೈ ಕೆಕನಾಜೆ ನಿರ್ದೇಶನದ ಕೊಲ್ಲೂರು ಶ್ರೀ ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ತಾಳಮದ್ದಲೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಾದ ತುಳುನಾಡಿನ ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಏಕೈಕ ಆದಿದ್ರಾವಿಡ ಸಮಾಜ ಬಾಂಧವರಾದ ಬಂಟ್ವಾಳ ತಾಲೂಕಿನ ಕೃಷ್ಣಾಪುರ ಎಂಬಲ್ಲಿನ ಪರಮೇಶ್ವರ ಸಾಲಿಯಾನ್ ನಡುಮನೆ, ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಮತ್ತು ಪುನರ್‌ವಸತಿ ಕೇಂದ್ರವಾದ ಬೀರಮಲೆ ಪ್ರಜ್ಞಾ ಆಶ್ರಮದ ಪಿ.ಎನ್ ಅಣ್ಣಪ್ಪ ಹಾಗೂ ಜ್ಯೋತಿ ಅಣ್ಣಪ್ಪ ದಂಪತಿ ಅಲ್ಲದೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಜರಗಲಿದೆ. ರಾತ್ರಿ ಶ್ರೀ ಅಮ್ಮನವರಿಗೆ ಮಹಾಪೂಜೆ, ಕ್ಷೇತ್ರದ ಇತರೇ ದೈವಗಳಿಗೆ ಪೂಜೆ, ಶ್ರೀ ಅಮ್ಮನವರಿಂದ ಹಾಗೂ ಸ-ಪರಿವಾರ ದೈವಗಳಿಂದ ಅಭಯ ಸ್ವೀಕಾರ, ಶ್ರೀ ಅಮ್ಮನವರ ಭಂಡಾರ ತೆಗೆಯುವುದು ಉತ್ಸವ ಬಯಲು, ಆರ್ಯಾಪು ನೇರಳಕಟ್ಟೆ ಮೂಲಕ್ಷೇತ್ರಕ್ಕೆ ಶ್ರೀ ಅಮ್ಮನವರ ಭಂಡಾರವನ್ನು ಕೊಂಡೊಯ್ಯುವುದು ನಡೆಯಲಿದೆ.

ಬುಧವಾರದಂದು ಪ್ರಾತಃಕಾಲ ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರನ್ನು ಪ್ರತಿಸ್ಥಾಪಿಸುವುದು, ಶ್ರೀ ಅಮ್ಮನವರ ದೂತರಿಗೆ ಬಲಿ ನೀಡುವುದು, ಪೂರ್ವಾಹ್ನ ಕೈತೋಡು ಶ್ರೀ ಶಾರದಾಂಬ ಸೇವಾ ಸಮಿತಿ ಅದೂರು, ಕಾಸರಗೋಡು ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಶ್ರೀ ಅಮ್ಮನವರಿಗೆ ಮಹಾಪೂಜೆ, ಅನ್ನದ ಪಲ್ಲ ಪೂಜೆ, ಸ-ಪರಿವಾರ ದೈವಗಳಿಗೆ ಪೂಜೆ, ಮಡಸ್ಥಾನ ಸೇವೆ(ವಿಶೇಷ ಸೇವೆ), ಶ್ರೀ ಅಮ್ಮನವರ ಹಾಗೂ ಇತರೇ ದೈವಗಳಿಂದ ಅಭಯ ಸ್ವೀಕಾರ, ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರ ಮಹಾಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಅಮ್ಮನ ಪ್ರಸಾದ, ಸಂಜೆ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಭಂಡಾರವನ್ನು ಆರ್ಯಾಪು ನೇರಳಕಟ್ಟೆಯಿಂದ ದೇವಸ್ತಾನಕ್ಕೆ ಕೊಂಡೊಯ್ಯುವುದು ಹಾಗೂ ಪ್ರತಿಷ್ಠಾಪಿಸುವುದು.

ಗುರುವಾರದಂದು ಪೂರ್ವಾಹ್ನ ಶ್ರೀ ಅಮ್ಮನವರಿಗೆ ಶುದ್ಧಿ ಕಲಶ, ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಎಲ್ಲಾ ಧಾರ್ಮಿಕ, ವೈದಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ, ಅಧ್ಯಕ್ಷ ರವಿಚಂದ್ರ ಆಚಾರ್ಯ, ಅನುವಂಶಿಕ ಆಡಳತ ಮೊಕ್ತೇಸರ ಗಂಗಾಧರ್ ಸೀಗೆಬಲ್ಲೆ ವಿಟ್ಲ, ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಪ್ರಧಾನ ಸಂಚಾಲಕರಾದ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಕೋಶಾಧಿಕಾರಿ ಸುರೇಶ್ ಪಿ, ಶ್ರೀ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ಪಿ., ಕಾರ್ಯದರ್ಶಿ ಲೋಕೇಶ್ ರೈ ಮೇರ್ಲ, ಪ್ರಧಾನ ಅರ್ಚಕ ಸುನಿಲ್ ಮಚ್ಚೇಂದ್ರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here