ಸೆಂಟ್ಯಾರ್‌ನಲ್ಲಿ ನಿಂತಿದ್ದ ಅನುಮಾನಾಸ್ಪದ ವ್ಯಕ್ತಿಯ ಬಂಧನ

0

  • ಕಳವು ಪ್ರಕರಣ ಬೆಳಕಿಗೆ-ಆರೋಪಿಯಿಂದ ಸೊತ್ತುಗಳ ವಶ

ಪುತ್ತೂರು:ಸೆಂಟ್ಯಾರ್ ಬಳಿ ಎ.24ರ ರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದ ಮತ್ತು ಬಂಧಿತ ಆರೋಪಿ ಕಳವು ಮಾಡಿದ್ದ ಮೊಬೈಲ್ ಫೋನ್‌ಗಳು ಮತ್ತು ಸ್ಕೂಟರ್‌ನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ.ಕಾಸರಗೋಡು ತಾಲೂಕಿನ ಎಣ್ಮಕಜೆ ಗ್ರಾಮದ ಅಡ್ಕಸ್ಥಳ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಇರುವ ಉಮೈದ್(24ವ.)ಬಂಧಿತ ಆರೋಪಿ.

ಈತ ಸೆಂಟ್ಯಾರ್ ಬಳಿ ಸ್ಕೂಟರ್ ಸಮೀಪ ನಿಂತುಕೊಂಡಿದ್ದು ಪೊಲೀಸರು ಬರುವುದನ್ನು ನೋಡಿ ಪರಾರಿಯಾಗಲುಯತ್ನಿಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಬಂಧಿತನ ವಿಚಾರಣೆ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.ಆರಂಭದಲ್ಲಿ, ತಾನು ವಿಟ್ಲದ ಮೊಹಮ್ಮದ್, ಉಪ್ಪಿನಂಗಡಿಯ ಆಸೀಫ್ ಎಂದು ಹೇಳಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ.ಬಳಿಕ ಪೊಲೀಸರು ಕೂಲಂಕುಶವಾಗಿ ವಿಚಾರಿಸಿದಾಗ ಆತನ ಬಳಿ 5 ಮೊಬೈಲ್
ಫೋನ್‌ಗಳಿದ್ದುದು ಮತ್ತು ಆತನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್‌ನ (ಕೆಎ19 ಹೆಚ್‌ಕೆ1041)ದಾಖಲೆಯೂ ಇಲ್ಲದೇ ಇದ್ದುದರಿಂದ ವಿಚಾರಣೆ ತೀವ್ರಗೊಳಿಸಿದಾಗ ಪ್ರಕರಣ ಬಯಲಾಗಿದೆ.ತಾನು ಕಾಸರಗೋಡು ನಿವಾಸಿಯಾಗಿದ್ದು ಬೆಳ್ಳಾರೆ ಕಡೆಯಿಂದ ಕಳವು ಮಾಡಿ ಬಂದಿರುವುದಾಗಿ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನ ಬಳಿಯಿದ್ದ 5 ಮೊಬೈಲ್ ಫೋನ್‌ಗಳನ್ನು ಮತ್ತು ಸ್ಕೂಟರ್‌ನ್ನು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here