ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನ ಜಾಗೃತಿ ಜಾಥಾ, ಮಾಹಿತಿ ಕಾರ್ಯಗಾರದ ಪೂರ್ವಭಾವಿ ಸಭೆ

0

  • ಜಾಗೃತಿ ಜಾಥಾ ಯಶಸ್ಸಿಗೆ ಸಭೆಯಲ್ಲಿ ಒಕ್ಕೊರಲ ಬೆಂಬಲ
  • ಸಭೆಯಲ್ಲಿ ಗಣ್ಯರು ನೀಡಿರುವ ಅಭಿಪ್ರಾಯ

 

ಪುತ್ತೂರು:ಲಂಚ,ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆಯಿಂದ ನಡೆಯುತ್ತಿರುವ ಜನಾಂದೋಲನದ ಮುಂದಿನ ಭಾಗವಾಗಿ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಕುರಿತ ಮಾಹಿತಿ ಕಾರ್ಯಾಗಾರ, ಜಾಗೃತಿ ಜಾಥಾ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಎ.೨೬ರಂದು ಸಂಜೆ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿ ಲಂಚ, ಭ್ರಷ್ಟಾಚಾರದ ವಿರುದ್ಧ ಉzಶಿತ ಸುದ್ದಿ ಜನಾಂದೋಲನ ಜಾಗೃತಿ ಜಾಥಾದ ಯಶಸ್ಸಿಗೆ ಒಕ್ಕೊರಲ ಬೆಂಬಲ, ಪ್ರೋತ್ಸಾಹದ ಭರವಸೆ ವ್ಯಕ್ತಪಡಿಸಿದರು.

 

ಲಂಚ, ಭ್ರಷ್ಟಾಚಾರ ವಿರುದ್ಧ ಪ್ರತಿಜ್ಞೆ ಸ್ವೀಕಾರ

 

ಲಂಚ, ಭ್ರಷ್ಟಾಚಾರದ ವಿರುದ್ಧ ಸಭೆಯಲ್ಲಿದ್ದ ಎಲ್ಲರೂ ಘೋಷಣೆ ಹಾಗೂ ಪ್ರತಿಜ್ಞೆ ಸ್ವೀಕಾರ ಮಾಡಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಾಗೃತಿ ಜಾಥಾದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಜನಾಂದೋಲನದ ರೂವಾರಿ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದರವರು, ಸುದ್ದಿಯ ಮೂಲಕ ನಡೆಯುವ ಜನಾಂದೋಲನದಿಂದ ವಾತಾವರಣ ಬದಲಾಗಿದೆ.ಆಂದೋಲನ ಜನ ಸಾಮಾನ್ಯರಿಗೆ ಪ್ರಯೋಜನವಾಗಿದೆ.ಅಧಿಕಾರಿಗಳಲ್ಲಿ ಜನರು ರೊಚ್ಚಿಗೇಳುವ ಭೀತಿ ಉಂಟಾಗಿದೆ.ಲಂಚ, ಭ್ರಷ್ಟಾಚಾರದ ವಿರುದ್ಧ ಫಲಕ,ಬ್ಯಾನರ್‌ಗಳ ಅಳವಡಿಕೆ, ಪ್ರತಿಜ್ಞೆ ಪರಿಣಾಮ ಬೀರಿದೆ.ಪರಿಹಾರದ ದಾರಿ ಜನರಲ್ಲಿ ಕಾಣುತ್ತಿದೆ ಎಂದರು. ಆಂದೋಲನದ ಮುಂದಿನ ಭಾಗವಾಗಿ ಜಾಗೃತಿ ಜಾಥಾ ನಡೆಸಲಾಗುತ್ತಿದ್ದು, ಸುಳ್ಯದಲ್ಲಿ ಈಗಾಗಲೇ ಜಾಥಾವು ಯಶಸ್ವಿಯಾಗಿ ನಡೆದಿದೆ.ಅದಕ್ಕೆ ಜನರ ಬೆಂಬಲ ದೊರೆತಿದೆ.ಜಾಥಾ ಬರುವಾಗ ಜನರು ನಗುಮುಖದಿಂದ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.ಜಾಥಾವು ವಿವಿಧ ಸಂಘ ಸಂಸ್ಥೆಗಳ ಮುಖಂಡರ ನೇತೃತ್ವದಲ್ಲಿ ನಡೆದಿದೆ.ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸಿ, ಭ್ರಷ್ಟಾಚಾರವನ್ನು ಬಹಿಷ್ಕರಿಸುವುದೇ ಜಾಥಾದ ಉzಶ ಎಂದು ಹೇಳಿದ ಡಾ.ಶಿವಾನಂದರು, ಆಂದೋಲನವು ಯಾವುದೇ ಆಡಳಿತ, ಪಕ್ಷ, ವ್ಯಕ್ತಿ, ವಿರುದ್ಧ ಅಲ್ಲ.ಭ್ರಷ್ಟಾಚಾರದ ವಿರುದ್ಧ ಮಾತ್ರ.ಉತ್ತಮ ಕೆಲಸಕ್ಕೆ ಸನ್ಮಾನವಿದೆ.ಮುಂದೆ ಶಾಸಕರು ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಜಾಥಾವನ್ನು ಉದ್ಘಾಟಿಸಲು ಸಂತೋಷದಿಂದ ಒಪ್ಪಿಕೊಂಡು ಪ್ರೋತ್ಸಾಹಿಸಿದ್ದಾರೆ. ಅವರ ಸಲಹೆಯಂತೆ ಆಂದೋಲನವನ್ನು ಗ್ರಾಮ ಗ್ರಾಮಗಳಿಗೆ ವಿಸ್ತರಿಸಲಾಗುವುದು.ಇದು ನಮ್ಮ ಆಂದೋಲನವಲ್ಲ ಜನರ ಆಂದೋಲನವಾಗಿದೆ.ನಾವು ಮಾಧ್ಯಮವಾಗಿ ಮಾತ್ರ ಕೆಲಸ ಮಾಡಲಿzವೆ ಎಂದರು.ಪುತ್ತೂರಿನಲ್ಲಿಯೂ ಜನ ಜಾಗೃತಿ ಜಾಥಾವು ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಡೆಯಲಿದೆ.ಬಳಿಕ ನಡೆಯುವ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ನ್ಯಾಯಾಧೀಶರು, ಶಾಸಕರು, ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಜನರ ಪ್ರಶ್ನೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು.ಲಂಚ, ಭ್ರಷ್ಟಾಚಾರ ಪಿಡುಗಿನ ವಿರುದ್ಧ ಜನರಿಗೆ ಧೈರ್ಯ ತುಂಬಿಸುವುದೇ ಜಾಥಾದ ಉzಶ. ತಾಲೂಕಿನ ಜನರನ್ನು ತೊಡಗಿಸಿಕೊಳ್ಳಲು ಆಂದೋಲನ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಜಾಥಾ ನಡೆಸಲಾಗುತ್ತಿದೆ ಎಂದರು.

ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದಭಗವಾನ್ ರೈ, ವಿವೇಕ ಜಾಗೃತ ಬಳಗದ ಟಿ.ಆರ್.ಕಲ್ಲೂರಾಯ, ಪಡೀಲು ಚೈತನ್ಯ ಮಿತ್ರವೃಂದದ ಮಾಜಿ ಸಂಚಾಲಕ ರವಿಪ್ರಸಾದ್ ಶೆಟ್ಟಿ ಬನ್ನೂರು, ವಕೀಲರ ಸಂಘದ ಕೋಶಾಧಿಕಾರಿ ಚಾಣಕ್ಯ ಲಾ ಛೇಂಬರ್‍ಸ್‌ನ ಮುಖ್ಯಸ್ಥ ಶ್ಯಾಮ್‌ಪ್ರಸಾದ್ ಕೈಲಾರ್,ಸುದ್ದಿ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನರೇಂದ್ರ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿ ಉzಶಿತ ಸುದ್ದಿ ಜನಾಂದೋಲನ ಜಾಗೃತಿ ಜಾಥಾಕ್ಕೆ ಬೆಂಬಲ ವ್ಯಕ್ತಪಡಿಸಿದರು.ಸುದ್ದಿ ಜನಾಂದೋಲನ ವೇದಿಕೆ ಪುತ್ತೂರು ತಾಲೂಕು ಮುಖ್ಯಸ್ಥ ಗಣೇಶ್ ಕಲ್ಲರ್ಪೆ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ವಂದಿಸಿದರು. ಸೇರಿದ ಹಲವರು ಭ್ರಷ್ಟಾಚಾರ ವಿರೋಧದ ಫಲಕವನ್ನು ಕೊಂಡೊಯ್ದರು.

ಹಿಂದೆ ವಕೀಲರು ಮಾತ್ರ ಧ್ವನಿ ಎತ್ತುತ್ತಿದ್ದರು. ಭ್ರಷ್ಟಾಚಾರವನ್ನು ವಿರೋಧಿಸುವವರೊಂದಿಗೆ ಉತ್ತಮ ಕೆಲಸ ಮಾಡುವವರನ್ನು ಗುರುತಿಸುವ ಕೆಲಸವೂ ಆಗಬೇಕು -ಮನೋಹರ್ ಕೆ.ವಿ, ಅಧ್ಯಕ್ಷರು ವಕೀಲರ ಸಂಘ ಪುತ್ತೂರು

ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನದ ಜಾಥಾಕ್ಕೆ ಶಾಸಕ ಸಂಜೀವ ಮಠಂದೂರುರವರ ಬೆಂಬಲ ಆಂದೋಲನವನ್ನು ಗ್ರಾಮ ಗ್ರಾಮಕ್ಕೆ ವಿಸ್ತರಿಸಲು ಸಲಹೆ

ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಬೃಹತ್ ವಾಹನಾ ಜಾಥಾಕ್ಕೆ ಸಿದ್ಧತೆ

ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ. ಉತ್ತಮ ಸೇವೆಗೆ ಪುರಸ್ಕಾರ ಜನಾಂದೋಲನ ಸಂಘಟಿತವಾಗಿ ಜನ ಶಕ್ತಿಯಾಗಿ ಹೊರಹೊಮ್ಮಿದರೆ ಯಾವುದೇ ಕಛೇರಿಯಲ್ಲಿ ಅಧಿಕಾರಿಗಳಿಗೆ ಲಂಚ, ಭ್ರಷ್ಟಾಚಾರ ಮಾಡಲು ಧೈರ್ಯ ಬರಲಾರದು. ತಾಲೂಕು ಭ್ರಷ್ಟಾಚಾರ ಮುಕ್ತ ಆಗಿಯೇ ಆಗುತ್ತದೆ. ಅದಕ್ಕಾಗಿ ಪುತ್ತೂರು ನಗರದಲ್ಲಿ ಬೃಹತ್ ವಾಹನಾ ಜಾಥಾವನ್ನು ಏರ್ಪಡಿಸಲಿzವೆ. ಈ ಜಾಥಾ ಇಡೀ ತಾಲೂಕಿನ ಜನರ ಜಾಥಾವಾಗಲು ಪ್ರತೀ ಗ್ರಾಮದಿಂದ ವಾಹನ ಜಾಥಾ ನಗರಕ್ಕೆ ಬಂದು ನಗರದ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಈ ಜಾಥಾದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಜಾಥಾದಲ್ಲಿ ಭಾಗವಹಿಲು ಇಚ್ಛಿಸುವವರು ಮತ್ತು ಬೆಂಬಲ ನೀಡುವವರು ತಮ್ಮ ತಮ್ಮ ಹೆಸರು, ಫೋನ್ ನಂಬ್ರ, ವಿಳಾಸವನ್ನು (9620372389)ಗೆ ಕಳುಹಿಸಿಕೊಡಬೇಕಾಗಿ ವಿನಂತಿ.

ಗ್ರಾಮ ಗ್ರಾಮಗಳಿಂದ, ವಾರ್ಡ್‌ನಿಂದ ಜಾಥಾದಲ್ಲಿ ಭಾಗವಹಿಸಲು ಇಚ್ಚಿಸುವವರು ಸಂಪರ್ಕಿಸಿ

 

 

 

 

 

ಗ್ರಾಮ ಮಟ್ಟದಲ್ಲಿಯೇ ನಡೆಯಲಿ-ಜತೀಂದ್ರ ಶೆಟ್ಟಿ

ನಮ್ಮೂರು ನೆಕ್ಕಿಲಾಡಿಯ ಅಧ್ಯಕ್ಷ ಎ.ಜತೀಂದ್ರ ಶೆಟ್ಟಿ ಮಾತನಾಡಿ, ನಾನು ಕಳೆದ 16ವರ್ಷಗಳಿಂದ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತ್ತಿದ್ದೇ ನೆ.ಪ್ರಾರಂಭದಿಂದಲೇ ಉದ್ಯೋಗ ಖಾತರಿ ಯೋಜನೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇನೆ.ಇಂತಹ ಹೋರಾಟಗಳು ಗ್ರಾಮ ಮಟ್ಟದಲ್ಲಿ ನಡೆಯಬೇಕು.ತಳಮಟ್ಟದಿಂದ ಹೋರಾಟ ನಡೆದರೆ ನಿರ್ಮೂಲನೆ ಮಾಡಲು ಸಾಧ್ಯ.ನಾವು ನಮ್ಮ ಗ್ರಾಮ, ಪಂಚಾಯತ್ ಮಟ್ಟದಲ್ಲಿ ಹೋರಾಟ ನಡೆಸಲಿದ್ದೇ ವೆ.ಸುದ್ದಿ ಜನಾಂದೋಲನ ಜಾಗೃತಿ ಜಾಥಾಕ್ಕೆ ನಮ್ಮ ಪೂರ್ಣ ಬೆಂಬಲವಿದೆ ಎಂದರು.

 

ಸುದ್ದಿ ಜನಾಂದೋಲನ ಪರಿಣಾಮ ಬೀರಿದೆ-ರಾಧಾಕೃಷ್ಣ ನಾಯಕ್:

ವಿಜಯಾ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ರಾಧಾಕೃಷ್ಣ ನಾಯಕ್ ಮಾತನಾಡಿ, ನಮ್ಮ ಕೆಲಸವನ್ನು ನಾವೇ ಕಚೇರಿಗಳಿಗೆ ಹೋಗಿ ಮಾಡಿಸಿಕೊಳ್ಳಬೇಕು.ನನ್ನ ಜಮೀನಿನ ಖಾತೆಯೊಂದನ್ನು ಮಾಡಿಸಲೆಂದು ನಾನು ಗೊತ್ತಿರುವ ಓರ್ವರ ಬಳಿ ವಿಚಾರಿಸಿದಾಗ 5ಸಾವಿರ ರೂ.ಖರ್ಚಾಗಬಹುದು ಎಂದಿದ್ದರು.ಆದರೆ ಬಳಿಕ ನಗರ ಸಭೆಗೆ ನಾನೇ ಹೋಗಿ ಸರಕಾರ ನಿಗದಿಪಡಿಸಿದ್ದ ನಿರ್ಧಿಷ್ಟ ಮೊತ್ತ ಪಾವತಿಸಿ ಖಾತೆ ಮಾಡಿಸಿದ್ದೇನೆ.ಅದೇ ರೀತಿ ಕಟ್ಟಡ ಲೈಸೆನ್ಸ್ ಮೊದಲಾದ ಕೆಲಸಗಳು ಸುಲಭವಾಗಿ ಆಗಿದ್ದು ಸುದ್ದಿ ಜನಾಂದೋಲನ ಪರಿಣಾಮ ಬೀರಿದೆ.ಇದು ಶಿವಾನಂದರ ಆಂದೋಲನದ ಪ್ರಭಾವದಿಂದ ಇದು ಸಾಧ್ಯವಾಗಿದೆ ಎಂದರು.

 

 

ವರ್ತಕ ಸಂಘದ ಪೂರ್ಣ ಬೆಂಬಲ-ಜಾನ್ ಕುಟಿನ್ಹಾ

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಮಾತನಾಡಿ, ಲಂಚ, ಭ್ರಷ್ಟಾಚಾರದ ವಿರುದ್ಧರ ಹೋರಾಟ ಇನ್ನೂ ಉತ್ತಮ ರೀತಿಯಲ್ಲಿ ನಡೆಯಬೇಕು. ತಾಲೂಕು ಮಟ್ಟದಲ್ಲಿ ನಡೆಯುವ ಹೋರಾಟ ಇನ್ನು ಗ್ರಾಮ ಗ್ರಾಮಗಳಲ್ಲಿ ನಡೆಯಬೇಕಾದ ಅವಶ್ಯಕತೆಯಿದೆ.ಜಾಗೃತಿ ಜಾಥಾಕ್ಕೆ ವರ್ತಕ ಸಂಘದ ಸಂಪೂರ್ಣ ಬೆಂಬಲವಿದೆ. ಜಾಥಾದಲ್ಲಿ ಸಂಘದ ವತಿಯಿಂದ ವಾಹನಗಳಲ್ಲಿ ಭಾಗವಹಿಸಲಾಗುವುದು.ಜನಾಂದೋಲನ ಹೋರಾಟವನ್ನು ಶಿಖರಕ್ಕೆ ಮುಟ್ಟಿಸಬೇಕಾಗಿದೆ ಎಂದರು.

 

ಪ್ರಾಮಾಣಿಕರನ್ನು ಸಮಾಜ ಗುರುತಿಸಬೇಕು-ಮನೋಹರ್ ಕೆ.ವಿ

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ.ಮಾತನಾಡಿ ಲಂಚ, ಭ್ರಷ್ಟಾಚಾರದ ವಿರುದ್ಧ ಹಿಂದೆ ವಕೀಲರು ಮಾತ್ರ ಧ್ವನಿ ಎತ್ತುತ್ತಿದ್ದರು.ಈಗ ಆ ಕೆಲಸವನ್ನು ಸುದ್ದಿಯವರು ಮಾಡುತ್ತಿದ್ದು ಸುದ್ದಿಯ ಮೂಲಕ ಜನರ ಧ್ವನಿ ಮೊಳಗುತ್ತಿದೆ.ಭ್ರಷ್ಟರೂ ಬುದ್ದಿವಂತರಾಗಿದ್ದಾರೆ.ಆದರೆ ಪ್ರಾಮಾಣಿಕರು ಎಲ್ಲಿಯೂ ಪ್ರಚಾರಕ್ಕೆ ಬರುವುದಿಲ್ಲ.ಹಾಗಾಗಿ ಪ್ರಾಮಾಣಿಕರನ್ನು ಸಮಾಜ ಗುರುತಿಸಬೇಕು.ಅವರ ಪ್ರಾಮಾಣಿಕತೆಗೆ ಬೆಲೆ ನೀಡಬೇಕು.ಆಂದೋಲನದಿಂದ ಭ್ರಷ್ಟ ಅಧಿಕಾರಿಗಳಲ್ಲಿ ಹಿಂಜರಿಕೆ ಉಂಟಾಗಿದ್ದು ಸುದ್ದಿಗೆ ಅಭಿನಂದನೆ ಎಂದರು.ಜನ ಸಾಮಾನ್ಯರಿಗೆ ಪೂರಕವಾದ ಆಂದೋಲನಕ್ಕೆ ನಮ್ಮ ಸಂಪೂರ್ಣ ಸಹಕಾರ ಬೆಂಬಲವಿದೆ ಎಂದು ಹೇಳಿದ ಅವರು, ಪುತ್ತೂರಿನ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಇಲ್ಲ.ಜನಸಾಮಾನ್ಯರಿಗೆ ಅನಗತ್ಯ ಕಿರುಕುಳ ನೀಡುವುದು ಜಾಗೃತಿ ಜಾಥಾದಿಂದ ತಪ್ಪುತ್ತದೆ.ಈ ನಿಟ್ಟಿನಲ್ಲಿ ಜಾಥಾಕ್ಕೆ ನಮ್ಮ ಬೆಂಬಲವಿದೆ ಎಂದರು.

 

ಭ್ರಷ್ಟರನ್ನು ಗುರುತಿಸಬೇಕು -ಜಯಪ್ರಕಾಶ್ ಬದಿನಾರು

ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ,ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸುವ ಮೂಲಕ ಉತ್ತಮ ಕಾರ್ಯಕ್ರಮ ಅಳವಡಿಸಿಕೊಂಡಿದ್ದೀರಿ.ಆಂದೋಲನದಲ್ಲಿ ಭ್ರಷ್ಟ ಅಧಿಕಾರಿಗಳನ್ನು ಗುರುತಿಸುವ ಕಾರ್ಯವಾಗಬೇಕು.ಜಾಥಾದಲ್ಲಿ ಭ್ರಷ್ಟಾಚಾರವನ್ನು ಬಿಂಬಿಸುವ ಟ್ಯಾಬ್ಲೋವನ್ನು ಜೋಡಿಸಿಕೊಳ್ಳಬೇಕು ಎಂದರು.

 

ಭ್ರಷ್ಟಾಚಾರ ನಿರ್ನಾಮವಾಗಲಿ-ಚಿದಾನಂದ ಬೈಲಾಡಿ

ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ ಬಲಾತ್ಕಾರದ ಬಂದ್ ವಿರುದ್ಧ ಆಂದೋಲನ ನಡೆಸಿ ಯಶಸ್ವಿಯಾಗಿರುವ ಸುದ್ದಿಯವರು ಬಂದ್‌ಗೆ ಕರೆಕೊಡುವುದನ್ನೇ ಬಂದ್ ಮಾಡಿಸಿದ್ದಾರೆ.ಇದೀಗ ಭ್ರಷ್ಟಾಚಾರದ ವಿರುದ್ಧ ಆಂದೋಲನದ ಮೂಲಕ ನಿರ್ನಾಮ ಮಾಡುವ ಕಾರ್ಯವಾಗಲಿ.ಭ್ರಷ್ಟಾಚಾರ ಮಾಡುವವರು ಹಾಗೂ ಪ್ರಾಮಾಣಿಕರನ್ನು ಗುರುತಿಸಬೇಕು ಎಂದರಲ್ಲದೆ, ಜಾಥಾಕ್ಕೆ ನಮ್ಮ ಬೆಂಬಲವಿದೆ ಎಂದರು.

ಭ್ರಷ್ಟ ಅಧಿಕಾರಿಗಳ ಮಾಹಿತಿ ನೀಡಲು ಫಲಕ ಅಳವಡಿಸಬೇಕು-ಡಾ|ಹರ್ಷ ಕುಮಾರ್ ರೈ

ಜನ್ಮ ಫೌಂಡೇಶನ್ ಟ್ರಸ್ಟ್‌ನ ಡಾ| ಹರ್ಷ ಕುಮಾರ್ ರೈ ಮಾಡಾವು ಮಾತನಾಡಿ ಸರಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರ ಮಾಡುವವರ ಮಾಹಿತಿ ನೀಡುವಂತೆ ಫಲಕಗಳನ್ನು ಅಳವಡಿಸಿ ಅದರಲ್ಲಿ ದೂರವಾಣಿ ನಂಬರ್ ನೀಡುವ ಮೂಲಕ ಜಾಗೃತಿ ಮೂಡಿಸಬೇಕು.ಜನಾಂದೋಲನ ಜಾಗೃತಿ ಜಾಥಾಕ್ಕೆ ರೋಟರಿ ಕ್ಲಬ್‌ನಿಂದ ಬೆಂಬಲವಿದೆ ಎಂದರು.

 

98ಶೇ. ಜನ ಮೌನವಾಗಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ- ಮಹಮ್ಮದ್ ಆಲಿ:
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಮಾತನಾಡಿ ಸುಳ್ಯದಲ್ಲಿ ಆಂದೋಲನದ ಮೂಲಕ ಪ್ರಾರಂಭವಾದ ಸುದ್ದಿ ಪತ್ರಿಕೆ ನೊಂದವರ ಪರವಾದ ಹೋರಾಟ ನಡೆಸುತ್ತಿದೆ. ಲಂಚ, ಭ್ರಷ್ಟಾಚಾರದ ವಿರುದ್ಧ ಜನರ ಆಂದೋಲನವಾದರೆ ಅದು ಸಾರ್ಥಕವಾಗಲು ಸಾಧ್ಯ.ಇದಕ್ಕೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ.ಕೇವಲ ೨ಶೇ. ಭ್ರಷ್ಟ ಅಧಿಕಾರಿಗಳಿದ್ದರೂ ೯೮ಶೇ.ಜನರು ಮೌನವಾಗಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ.ಅದರಲ್ಲೂ ವಿದ್ಯಾವಂತರೇ ಹಿಂಜರಿಕೆಯಿಂದ ಇದನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ.ರಾಜಕೀಯ ಪಕ್ಷ, ಧರ್ಮ ಭೇದ ಬಿಟ್ಟು ಹೋರಾಟ ಮಾಡಬೇಕು.ಆಂದೋಲನವು ಜನರಿಗೆ ಅಗತ್ಯವಾದ ಕಾರ್ಯಕ್ರಮ.ಜಾಗೃತಿ ಜಾಥಾದ ಜೊತೆಗೆ ಅಲ್ಲಲ್ಲಿ ಸಾರ್ವಜನಿಕ ಸಮಿತಿ ಮಾಡಿ ಆಂದೋಲನವನ್ನು ಬೆಳೆಸಲು ಎಲ್ಲರೂ ಬೆಂಬಲ ನೀಡಬೇಕು.ಸಮಿತಿ ಮೂಲಕ ಜನರು ಮತ್ತು ಅಧಿಕಾರಿಗಳ ಸಭೆ ನಡೆಸಬೇಕು ಎಂದರು.ಜಾಹೀರಾತು ಪ್ರಕಟಿಸಿದರೆ ಲಕ್ಷಾಂತರ ರೂ.ಗಳಿಸಬಹುದಾದ ಪತ್ರಿಕೆಯ ಜಾಗವನ್ನು ಆಂದೋಲನದ ಬಗ್ಗೆ ಸಂಪಾದಕೀಯ, ಇತರ ವರದಿ ಲೇಖನಗಳಿಗಾಗಿ ನೀಡುವ ಮೂಲಕ ಸುದ್ದಿಯ ಸಂಪಾದಕರು ಲಕ್ಷಾಂತರ ಸಂಪಾದನೆಯನ್ನು ಕಳೆದುಕೊಳ್ಳುತ್ತಿರುವುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಸುದ್ದಿಯ ವಾಹನ ಜಾಥಕ್ಕೆ ಮತ್ತು ಆಂದೋಲನಕ್ಕೆ ಪೂರ್ಣ ಬೆಂಬಲ ನೀಡುತ್ತೇವೆ. ಎಂದವರು ಹೇಳಿದರು.

 


ಪ್ರಾಮಾಣಿಕರನ್ನು ಹೈಲೈಟ್ ಮಾಡಬೇಕು-ದುರ್ಗಾಪ್ರಸಾದ್ ರೈ

ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿಯ ಮುಖಾಂತರ ಉತ್ತಮ ಕಾರ್ಯ ಪ್ರಾರಂಭಗೊಂಡಿದೆ.ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕ ಕೆಲಸ ಮಾಡಿದವರನ್ನು ಹೈಲೈಟ್ ಮಾಡಿ ಗುರುತಿಸುವ ಕೆಲಸವಾಗಬೇಕು.ಜೊತೆಗೆ ಭ್ರಷ್ಟಾಚಾರ ಮಾಡುವ ಅಧಿಕಾರಿಗಳನ್ನೂ ಸಮಾಜಕ್ಕೆ ತೋರಿಸುವ ಕೆಲಸವಾಗಬೇಕು ಎಂದರಲ್ಲದೆ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಿಂದೆ ಬಹಳಷ್ಟು ಸಾಧನೆಯಿದೆ.ಇನ್ನಷ್ಟು ಉತ್ತಮವಾಗಿ ನಡೆಯಲಿ ಎಂದು ಹೇಳಿದರು.

 

 

ಲಂಚ ಕೊಟ್ಟರೆ ಬೇಗ ಕೆಲಸ ಎನ್ನುವ ಭಾವನೆ ದೂರವಾಗಬೇಕು-ಜೀವಂಧರ್ ಜೈನ್

ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ ಸುದ್ದಿ ಮೂಲಕ ಲಂಚ, ಭ್ರಷ್ಟಾಚಾರದ ವಿರುದ್ಧ ಉತ್ತಮ ಆಂದೋಲನ ನಡೆಯುತ್ತಿದ್ದು ಡಾ.ಶಿವಾನಂದರು ಇಡೀ ಸಮಾಜಕ್ಕೆ ವೈದ್ಯರಾಗಿದ್ದಾರೆ.ನೂರು ದಿನಗಳಲ್ಲಿ ಬದಲಾವಣೆ ತರುವ ಪ್ರಯತ್ನ ನಡೆಯುತ್ತಿದೆ.ಲಂಚ ಕೊಟ್ಟರೆ ನಮ್ಮ ಕೆಲಸ ಬೇಗ ಆಗುತ್ತದೆ ಎಂದು ಜನರಲ್ಲಿರುವ ಭಾವನೆಗಳು ದೂರವಾದಾಗ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದರು.ಕಾನೂನಿನ ಮೂಲಕ ಪ್ರಯತ್ನಿಸಿದರೂ ಜನರಿಗೆ ಮನವರಿಕೆ ಮಾಡಿದರೂ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನಗಳು ನಡೆಯುತ್ತಿದೆ.ಅಧಿಕಾರಿಗಳು ಜೊತೆಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಿದಾಗ ಆಂದೋಲನ ಯಶಸ್ವಿಯಾಗಲಿದೆ. ಜಾಗೃತಿ ಜಾಥಾಕ್ಕೆ ನಮ್ಮಿಂದಾಗುವ ಸಹಕಾರ ನೀಡಲಾಗುವುದು ಎಂದವರು ಹೇಳಿದರು. ಉತ್ತಮ ಕೆಲಸ ಮಾಡುವವರನ್ನು ಗುರುತಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಜಾಥಾಕ್ಕೆ ಪೂರ್ಣ ಬೆಂಬಲ-ಬಗ್ಗುಮೂಲೆ
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ ಮಾತನಾಡಿ, ಇಲಾಖೆಗಳಲ್ಲಿ ನಡೆಯುವ ಲಂಚ ಭ್ರಷ್ಟಾಚಾರದಿಂದ ಜನರು ಅನುಭವಿಸುವ ತೊಂದರೆಗಳ ಬಗ್ಗೆ ವಿವರಿಸಿ, ಜಾಥಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.

 

ಟೀಕೆಗಳನ್ನು ಮೆಟ್ಟಿನಿಂತು ಆಂದೋಲನ ಮುಂದುವರಿಯಲಿ-ದಿನೇಶ್ ಮೆದು
ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ, ಜನರ ಸಮಸ್ಯೆಗಳನ್ನು ಅರಿತುಕೊಂಡ ಡಾ.ಯು.ಪಿ.ಶಿವಾನಂದರವರು ಜನಾಂದೋಲನ ನಡೆಸುವುದು ಅಭಿನಂದನೀಯ.ಈ ಆಂದೋಲನವು ಪರಿಣಾಮಕಾರಿಯಾಗಿ ನಡೆಯುತ್ತಿದೆ.ಈ ಆಂದೋಲನವು ಮುಳ್ಳಿನ ಮೇಲೆ ಕೈಯಿಟ್ಟಂತೆ.ಇದನ್ನು ಮಟ್ಟ ಹಾಕಲು ಎಲ್ಲ ರಂಗದಲ್ಲಿರುವವರು ಪ್ರೋತ್ಸಾಹ ನೀಡಿದಾಗ ಯಶಸ್ವಿಯಾಗಲಿದೆ.ಉತ್ತಮ ಕೆಲಸಗಳಿಗೆ ಟೀಕೆಗಳು ಸಹಜ.ಅದನ್ನು ಮೆಟ್ಟಿನಿಂತು ಆಂದೋಲನ ನಡೆಯಲಿ.ಡಾ.ಯು.ಪಿ ಶಿವಾನಂದರವರು ಪತ್ರಿಕೆ ಮುಟ್ಟಿಸುವ ಜೊತೆಗೆ ಕಷ್ಟದಲ್ಲಿರುವ ಜನರ ಮನ ಮುಟ್ಟುವ ರೀತಿಯಲ್ಲಿ ಆಂದೋಲನ ನಡೆಯುತ್ತಿದೆ.ಜಾಥಾಕ್ಕೆ ಎಪಿಎಂಸಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

 

 

ಡಾ.ಶಿವಾನಂದರು ಪುತ್ತೂರಿನ ಅಣ್ಣಾ ಹಜಾರೆ-ಉಮೇಶ್ ನಾಯಕ್
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ನಮ್ಮ ದೇಶದಲ್ಲಿ ಪ್ರಜೆಗಳೇ ಪ್ರಭುಗಳು.ಹಾಗಿದ್ದರೂ ತಮ್ಮ ಕೆಲಸಗಳಿಗೆ ಕಚೇರಿಗೆ ಹೋಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನು ನಿರ್ಮೂಲನೆ ಮಾಡಲು ಶಿವಾನಂದರ ಮುಖಾಂತರ ದೊಡ್ಡ ಚಳುವಳಿ ನಡೆಯುತ್ತಿದೆ. ಲಂಚ, ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸುವ ಮೂಲಕ ಡಾ.ಶಿವಾನಂದರು ಪುತ್ತೂರಿನ ಅಣ್ಣಾ ಹಜಾರೆಯಾಗಿದ್ದಾರೆ.ಅವರ ಆಂದೋಲನದ ಮುಖಾಂತರ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು.ಶಿವಾನಂದರ ಆಂದೋಲನದಿಂದಾಗಿ ಕಚೇರಿಗಳಲ್ಲಿ ಲಂಚ ಪಡೆಯುವುದು ಕಡಿಮೆಯಾಗಿದೆ.ಅಧಿಕಾರಿಗಳಲ್ಲಿ ಭಯದ ವಾತಾವರಣ ಮೂಡಿದೆ. ಸುದ್ದಿಯ ಜಾಥ ಮುಂತಾದ ಎಲ್ಲಾ ಕೆಲಸಗಳಿಗೂ ನಮ್ಮ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

 

ಅಂಬಿಕಾದಿಂದ ಬೆಂಬಲ-ಸುರೇಶ್ ಶೆಟ್ಟಿ
ಅಂಬಿಕಾ ವಿದ್ಯಾ ಸಂಸ್ಥೆಗಳ ನಿರ್ದೇಶಕ ಸುರೇಶ್ ಶೆಟ್ಟಿ ಮಾತನಾಡಿ, ಲಂಚ, ಭ್ರಷ್ಟಾಚಾರದ ವಿರುದ್ಧ ಜಾಗೃತಿ ಜಾಥಾಕ್ಕೆ ಅಂಬಿಕಾ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಸೇರಿಸಿಕೊಳ್ಳುವ ಮುಖಾಂತರ ಬೆಂಬಲ ನೀಡಲಾಗುವುದು ಎಂದರು.

 

ಪಾದಯಾತ್ರೆ ಮೂಲಕ ನಡೆದರೆ ಉತ್ತಮ-ಅಭಿಷೇಕ್ ಬೆಳ್ಳಿಪ್ಪಾಡಿ

ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ ಮಾತನಾಡಿ ಲಂಚ, ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸುವ ಸುದ್ದಿಯು ಅಭಿನಂದನೀಯ ಕೆಲಸ ಮಾಡುತ್ತಿದೆ. ಜಾಗೃತಿ ಜಾಥಾವು ಪಾದಯಾತ್ರೆಯ ಮೂಲಕ ನಡೆದರೆ ಉತ್ತಮ, ಲಂಚ, ಭ್ರಷ್ಟಾಚಾರದ ವಿರುದ್ಧ ತಳಮಟ್ಟದಿಂದ ಆಂದೋಲನ ನಡೆಯಬೇಕು.ಹೀಗೆ ನಡೆದರೆ ಅಧಿಕಾರಿಗಳಲ್ಲಿ ಭಯ ಹುಟ್ಟುವುದು ಖಂಡಿತಾ ಸಾಧ್ಯ ಎಂದರು.

 

ಜನರು-ಅಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕೆಲಸವಾಗಲಿ-ನವೀನ್ ಕುಲಾಲ್
ತಾಲೂಕು ಕುಲಾಲ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಮಾತನಾಡಿ ಲಂಚ, ಭ್ರಷ್ಟಾಚಾರದ ವಿರುದ್ಧ ಜಾಗೃತಿ ಜಾಥಾ ಜನಮೆಚ್ಚುವಂಥ ಕಾರ್ಯಕ್ರಮವಾಗಿದೆ.ಇದರ ಮೂಲಕ ಜನರಲ್ಲಿರುವ ತಪ್ಪು ಕಲ್ಪನೆಗಳು ದೂರವಾಗಬೇಕು.ಆಂದೋಲನದ ಮೂಲಕ ಅಧಿಕಾರಿಗಳು ಹಾಗೂ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕೆಲಸವಾಗಲಿ ಎಂದರು.

 

LEAVE A REPLY

Please enter your comment!
Please enter your name here