ಆಲಂತ್ತಡ್ಕ ತರವಾಡು ಕುಟುಂಬದ ಧರ್ಮದೈವ ರುದ್ರಾಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಪುತ್ತೂರು:  ಬಡಗನ್ನೂರು ಆಲಂತ್ತಡ್ಕ ತರವಾಡು ಕುಟುಂಬದ ಧರ್ಮದೈವ ರುದ್ರಾಂಡಿ ಹಾಗೂ ಪರಿವಾರ   ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ  ಏ 27 ಮತ್ತು 28 ರಂದು ಜರುಗಿತು.

ಏ.27 ರಂದು ಬೆಳಿಗ್ಗೆ ಗಂಟೆ 8-00ಕ್ಕೆ ಗಣಪತಿ ಹೋಮ, ನಾಗ ತಂಬಿಲ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಗಂಟೆ 6-00ಕ್ಕೆ ದೈವಗಳ ಭಂಡಾರ ತೆಗೆಯುವುದು ವರ್ಣರ  ಪಂಜುರ್ಲಿ ನೇಮೋತ್ಸವ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.ರಾತ್ರಿ ಗಂಟೆ 10-00ರಿಂದ ಜೋಡು ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ಕೊರತ್ತಿ, ಗುಳಿಗೆ ದೈವಗಳ ನೇಮೋತ್ಸವ ನಡೆಯಿತು.
 
ಏ.28 ರಂದು ಕಕ್ಕರೆ ಚಾಮುಂಡಿ ನೇಮೋತ್ಸವ 9 ರಿಂದ  ಧರ್ಮದೈವ ರುದ್ರಾಂಡಿ ದೈವದ ನೇಮೋತ್ಸವ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಅಲಂತ್ತಡ್ಕ ತರವಾಡು ಮನೆಯವರಾದ ಗಿರಿಯಪ್ಪ ಗೌಡ, ಕುಟುಂಬದ ಹಿರಿಯರಾದ ರಾಮಣ್ಣ ಗೌಡ ಹೊಸ ಮನೆ ಹಾಗೂ ಅಲಂತ್ತಡ್ಕ ಕುಟುಂಬಸ್ತರು ಮತ್ತು ಊರಿನವರು ಭಾಗವಹಿಸಿದರು. 
ಅನ್ನದಾನ
ಏ27 ಮತ್ತು 28 ಎರಡು ದಿವಸದ ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ   ಅನ್ನ ಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here