ಮೇ.8:ವಿಶ್ವ ರೆಡ್‌ಕ್ರಾಸ್ ದಿನದ ಪ್ರಯುಕ್ತ ಯುವ ರೆಡ್‌ಕ್ರಾಸ್ ಸದಸ್ಯರಿಗೆ `ಒಂದು ದಿನದ ಮಾಹಿತಿ, ತರಬೇತಿ ಕಾರ್ಯಾಗಾರ’

0

ಪುತ್ತೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕ ವತಿಯಿಂದ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ವಾರಣಾಸಿ ಡೆವಲಪ್‌ಮೆಂಟ್ ಆಂಡ್ ರಿಸರ್ಚ್ ಫೌಂಡೇಶನ್ ಇದರ ಸಹಯೋಗದಲ್ಲಿ ವಿಶ್ವ ರೆಡ್‌ಕ್ರಾಸ್ ದಿನದ ಪ್ರಯುಕ್ತ ಯುವ ರೆಡ್‌ಕ್ರಾಸ್ ಸದಸ್ಯರಿಗೆ `ಒಂದು ದಿನದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ’ವು ಮೇ. 8 ರಂದು ನೆಹರುನಗರ ವಿವೇಕಾನಂದ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಜರಗಲಿದೆ.

ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತ ಗಿರೀಶ್ ನಂದನ್, ವಿವೇಕಾನಂದ ಪಾಲಿಟೆಕ್ನಿಕ್‌ನ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕರವರು ಭಾಗವಹಿಸಲಿದ್ದಾರೆ. ಸಂಜೆ ನಡೆಯವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ತರಶೀಲ್ದಾರ್ ರಮೇಶ್‌ಬಾಬು ಟಿ, ವಿವೇಕಾನಂದ ಪಾಲಿಟೆಕ್ನಿಕ್‌ನ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲರವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವ ರೆಡ್‌ಕ್ರಾಸ್ ಸಂಸ್ಥೆಗಳಾದ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು, ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ನೆಹರುನಗರ, ವಿವೇಕಾನಂದ ಕಾನೂನು ಕಾಲೇಜು ಪುತ್ತೂರು, ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಭಾಗವಹಿಸಲಿವೆ ಎಂದು ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಎಂ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ತಾಲೂಕು ಘಟಕದ ಕಾರ್ಯದರ್ಶಿ ಆಸ್ಕರ್ ಆನಂದ್, ಸಭಾಪತಿ ಸಂತೋಷ್ ಶೆಟ್ಟಿ ಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಷಯ-ಮಾಹಿತಿ..
ಉದ್ಘಾಟನಾ ಸಮಾರಂಭದ ಬಳಿಕ ನ್ಯಾಯವಾದಿ ಸಿಲ್ವಿಯಾ ಡಿ’ಸೋಜರವರಿಂದ ರೆಡ್‌ಕ್ರಾಸ್ ಇತಿಹಾಸದ ಬಗ್ಗೆ, ರೆಡ್‌ಕ್ರಾಸ್ ಪುತ್ತೂರು ಇದರ ಕಾರ್ಯಕ್ರಮ ಉಪಸಮಿತಿ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್‌ರವರಿಂದ ಯವ ರೆಡ್‌ಕ್ರಾಸ್ ಚಟುವಟಿಕೆಗಳ ಬಗ್ಗೆ, ಮಂಗಳೂರು ಅರಣ್ಯವಿಚಕ್ಷಣಾ ಸಳದ ಎಸಿಎಫ್ ಶ್ರೀಧರ್ ಪಿರವರಿಂದ ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿರವರಿಂದ ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಪ್ರಥಮ ಚಿಕಿತ್ಸೆ..
ಮಧ್ಯಾಹ್ನದಿಂದ ಸಂಜೆಯವರೆಗೆ ವಾರಣಾಸಿ ಡೆವಲಪ್‌ಮೆಂಟ್ ಆಂಡ್ ರಿಸರ್ಚ್ ಫೌಂಡೇಶನ್‌ನ ರೋಹಿತ್ ಪಿ. ಮತ್ತು ತಂಡದಿಂದ ಪ್ರಥಮ ಚಿಕಿತ್ಸೆ ತರಬೇತಿ ಹಾಗೂ ಜೀವ ಉಳಿಸುವ ಕೌಶಲ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಲಿದೆ.

LEAVE A REPLY

Please enter your comment!
Please enter your name here