ಮೇ.8: ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಆಲಂಕಾರು: ಲಯನ್ಸ್ ಕ್ಲಬ್ ದುರ್ಗಾಂಬ, ಆಲಂಕಾರು, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಯಿಲ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ನಾಳೆ ಮೇ.8 ರಂದು ಬೆಳಿಗ್ಗೆ 9:30 ರಿಂದ 2:30 ರ ತನಕ ಶ್ರೀ ದುರ್ಗಾಂಬಾ ಪಿ.ಯು. ಕಾಲೇಜು ಆಲಂಕಾರಿನಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಣೆಯನ್ನು  ಇ. ವಿದ್ಯಾರಣ್ಯ ಲಕ್ಷ್ಮಿ ಪ್ರಸನ್ನಾ, ಆಲಂಕಾರು ನೇರವೆರಸಲಿದ್ದು ಲ| ದಯಾನಂದ ರೈ ಮನವಳಿಕೆ ಅಧ್ಯಕ್ಷರು, ಲಯನ್ಸ್ ಕ್ಲಬ್ ಆಲಂಕಾರು ಸಭಾಧ್ಯಕ್ಷತೆ ವಹಿಲಿದ್ದು ,ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ ,  ಡಾ. ದೀಪಕ್ ರೈ ತಾಲೂಕು ಆರೋಗ್ಯಾಧಿಕಾರಿ, ಮುತ್ತಪ್ಪ ಪೂಜಾರಿ ನೈಯಲ್ಗ ಅಧ್ಯಕ್ಷರು, ಮೂರ್ತೆದಾರರ ಸಹಕಾರಿ ಸಂಘ ಆಲಂಕಾರು,  ಶ್ರೀಪತಿ ರಾವ್ ಮುಖ್ಯಗುರುಗಳು, ದುರ್ಗಾಂಬಾ ಪ್ರೌಢಶಾಲೆ, ಆಲಂಕಾರು ಇವರ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ.

ಶಿಬಿರದಲ್ಲಿ ಜನರಲ್ ಮೆಡಿಸಿನ್, ಚರ್ಮರೋಗ ತಜ್ಞರು, ಸಿಹಿಮೂತ್ರ ಹಾಗೂ ಸಾಮಾನ್ಯ ರೋಗಗಳ ತಪಾಸಣೆ, ಇ.ಸಿ.ಜಿ. ಪರೀಕ್ಷೆ (ಅವಶ್ಯಕತೆ ಇದ್ದವರಿಗೆ ಮಾತ್ರ, ಎಲುಬು ಮತ್ತು ಕೀಲು ತಜ್ಞರಿಂದ ತಪಾಸಣೆ, ಸ್ತ್ರೀ ರೋಗ ತಜ್ಞರು, ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ, ಉಚಿತ ಔಷಧಿ ವಿತರಣೆ ಫಾದರ್ ಮುಲ್ಲರ್‍ಸ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಹಾಗು ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ಪ್ರಕಟಣೆಯಲ್ಲಿ ದುರ್ಗಾಂಬಾ ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಯಾನಂದ
ರೈ ಮನವಳಿಕೆ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಕೋಶಾಧಿಕಾರಿ ಭಗವತಿ ಕಿರಣ್, ಪಜ್ಯಡ್ಕ ಹಾಗು ಕೊಯಿಲ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಕಾಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here