ಆಲಂಕಾರು ಜೇಸಿಐನಿಂದ ರಕ್ತದಾನ ಶಿಬಿರ

0

 

ಆಲಂಕಾರು: ಜೇಸಿಐ ಆಲಂಕಾರು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲಂಕಾರು ವಲಯ, ಗ್ರಾಮ ಪಂಚಾಯತ್ ಆಲಂಕಾರು, ಕೋಟಿ ಚೆನ್ನಯ ಮಿತ್ರ ವೃಂದ ಆಲಂಕಾರು ಇದರ ಸಹಯೋಗದಲ್ಲಿ ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಆಚಾರ್ಯ ಉದ್ಘಾಟಿಸಿ ಶುಭಾಹಾರೈಸಿದರು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲಂಕಾರು ಒಕ್ಕೂಟ ಇದರ ಅಧ್ಯಕ್ಷೆ ಮೀನಾಕ್ಷಿ, ರೋಟರಿ ಬ್ಲಡ್ ಸೆಂಟರ್ ಪುತ್ತೂರಿನ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ರಕ್ತದಾನದ ಮಾಹಿತಿ ತಿಳಿಸಿದರು. ಆಲಂಕಾರು ಜೆ.ಸಿ.ಐ ಘಟಕದ ಅಧ್ಯಕ್ಷ ಜೇಸಿ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಜೇಸಿಐ ಆಲಂಕಾರು ಘಟಕದ ವತಿಯಿಂದ ಮೆ.೮ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂತೂರು ಇಲ್ಲಿ ಉಚಿತ ದಂತ ಹಾಗೂ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ನಡೆಯಲಿದೆ ಎಂದು ತಿಳಿಸಿದರು. ಕಾರ್ಯದರ್ಶಿ ಜೇಸಿ ಚೇತನ್ ಮೊಗ್ರಾಲ್ ವಂದಿಸಿದರು. ಪೂರ್ವಾಧ್ಯಕ್ಷ ಜೇಸಿ ಪ್ರದೀಪ್ ಬಾಕಿಲ, ಘಟಕದ ಲೇಡಿ ಜೇಸಿ ಸಂಯೋಜಕಿ ಮಮತಾ ಶೆಟ್ಟಿ ಅಂಬರಾಜೆ, ಘಟಕದ ಪೂರ್ವಾಧ್ಯಕ್ಷರುಗಳಾದ ಪ್ರಶಾಂತ್ ಕುಮಾರ್ ರೈ, ಪ್ರದೀಪ್ ರೈ ಮನವಳಿಕೆ, ಗುರುಪ್ರಸಾದ್ ರೈ, ಗುರುಕಿರಣ್ ಶೆಟ್ಟಿ, ಲಯನ್ಸ್ ಕ್ಲಬ್ ಆಲಂಕಾರು ಅಧ್ಯಕ್ಷ ದಯಾನಂದ ರೈ ಮನವಳಿಕೆ, ಘಟಕದ ಸದಸ್ಯರುಗಳು ಪಂಚಾಯತ್ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು. ೪೦ ಕ್ಕಿಂತಲೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಯಿತು.

LEAVE A REPLY

Please enter your comment!
Please enter your name here