ಮೇ.8: ಸುನಾದ ಸಂಗೀತ ಕಲಾ ಶಾಲೆಯ ಶಿಷ್ಯವೃಂದ ನಾದ ವೈಭವಂ ಕಾರ್ಯಕ್ರಮ

0

ಆಲಂಕಾರು: ಸುನಾದ ಸಂಗೀತ ಶಾಲೆಯ ಶಿಷ್ಯವೃಂದದವರಿಂದ ನಾದ ವೈಭವಂ ಕಾರ್ಯಕ್ರಮ ಮೇ.8 ರಂದು  ಸಂಜೆ 5:30ರಿಂದ ಸುದಾನ ವಸತಿಯುತ ಶಾಲಾ ಆವರಣ, ಪುತ್ತೂರಿನಲ್ಲಿ ನಡೆಯಲಿದೆ. ಶ್ರೀ ಸುಬ್ರಹ್ಮಣ್ಯ ನರ ಸಿಂಹ ಸ್ವಾಮಿ ಮಠದ ಸ್ವಾಮಿಜೀಗಳಾದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮದ ಉದ್ಘಾಟನೆ ಮತ್ತು        ಆರ್ಶಿವಚನ ಮಾಡಲಿದ್ದು ಕೆ. ಆರ್. ಆಚಾರ್ಯ, ಹಿರಿಯ ನ್ಯಾಯವಾದಿಗಳು, ಪುತ್ತೂರು ಇವರು ಸಭಾಧ್ಯಕ್ಷತೆ ವಹಿಸಲಿದ್ದು, ವಿದ್ವಾನ್ ಕಾಂಚನ ಎ. ಈಶ್ವರ್ ಭಟ್ ನಿರ್ದೇಶಕರು, ಸುನಾದ ಸಂಗೀತ ಕಲಾ ಶಾಲೆ , ಶ್ರೀ ಪ್ರಕಾಶ ಹಾಸ್ನಡ್ಕ, ಅಧ್ಯಕ್ಷರು ನಾದ ವೈಭವಂ ಇವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆದು ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ ಹಾಡುಗಾರಿಕೆ ಯಲ್ಲಿ ವಿದ್ವಾನ್ ಸಂದೀಪ್ ನಾರಾಯಣ್ , ಚೆನ್ನೈ ವಯಲಿನ್ ನಲ್ಲಿ ವಿದ್ವಾನ್ ಮೈಸೂರು ವಿ. ಶ್ರೀಕಾಂತ್ , ಚೆನ್ನೈ ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ್ ಭಟ್ ಘಟಂ ನಲ್ಲಿ ವಿದ್ವಾನ್ ಉಡುಪಿ ಶ್ರೀಧರ್, ತ್ರಿವೇಂಡ್ರಂ ಭಾಗವಹಿಸಲಿದ್ದಾರೆಂದು ಸುನಾದ ಸಂಗೀತ ಶಾಲೆಯ ಎಲ್ಲಾಶಾಖೆಗಳ ವಿದ್ಯಾರ್ಥಿ ಗಳು ಹಾಗು ಪೋಷಕರು ಪ್ರಕಟಣೆಯಲ್ಲಿ ತಿಳಿಸಿದ್ದು ಸಹೃದಯೀ ಸಂಗೀತ ರಸಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here