ಉಪ್ಪಿನಂಗಡಿ ಮಾಂಡೋವಿ ಮೋಟಾರ್‍ಸ್‌ನಿಂದ ತಿಂಗಳಾಡಿ, ಗೇರುಕಟ್ಟೆಯಲ್ಲಿ ಇಫ್ಕೊ ಮಹೋತ್ಸವ

0

 

ಪುತ್ತೂರು : ಮಾರುತಿ ಸುಜುಕಿ ಇಂಡಿಯಾ ಇದರ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್‍ಸ್‌ನ ಉಪ್ಪಿನಂಗಡಿ ಶಾಖೆಯಿಂದ ತಿಂಗಳಾಡಿಯಲ್ಲಿರುವ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಗೇರುಕಟ್ಟೆ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮೇ.೯ರಂದು ಇಫ್ಕೋ ಮಹೋತ್ಸವ ಉದ್ಘಾಟನೆಗೊಂಡಿತು.
ತಿಂಗಳಾಡಿಯಲ್ಲಿ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ್ ರಾವ್ ಬೊಳಿಕಲ, ಸಿಇಒ ವಿನಯ ಕುಮಾರ್ ರೈ ದೇರ್ಲ, ಪುತ್ತೂರು ವಕೀಲ ವಿನಯ ಕುಮಾರ್ ರೈ ದೇರ್ಲ, ಆದರ್ಶ ರೈ ಎಚ್., ಸಿಎ ಬ್ಯಾಂಕ್ ಸಿಬಂದಿ ಸೂರಜ್ ಕುಮಾರ್, ಪ್ರೀತಂ, ಕಸಲ್ಲಿ, ವೆಂಕಪ್ಪ, ಅನ್ನು, ಮಾಂಡೋವಿ ಮೋಟಾರ್‍ಸ್‌ನ ಸೇಲ್ಸ್ ಆಫೀಸರ್ ಮನೋಹರ್ ಎಂ. ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ರೈ ಸ್ವಾಗತಿಸಿ ವಂದಿಸಿದರು.

 

ಗೇರುಕಟ್ಟೆ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉದ್ಯಮಿ ವೆಂಕಟರಮಣ ಪೈ, ಕಾರ್ಯಕ್ರಮ ನಿರೂಪಕ ದೀಕ್ಷಿತ್, ಮಾಂಡೋವಿ ಮೋಟಾರ್‍ಸ್‌ನ ಸೀನಿಯರ್ ಮ್ಯಾನೇಜರ್ ಅಕ್ಷಯ ಜೈನ್, ಸೇಲ್ಸ್ ಆಫೀಸರ್ ಗಿರೀಶ್ ಭಟ್ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು. ಹರಿಕಿರಣ್ ರೈ ಎಸ್. ಸ್ವಾಗತಿಸಿದರು. ನರೇಶ್ ದೇರ್ಕಜೆ ವಂದಿಸಿದರು. ಹಳೆಯ ಕಾರು ಇಭಾಗದ ನವೀನ್ ಕುಮಾರ್ ಉಪಸ್ಥಿತರಿದ್ದರು.

ಇಂದು ಕೊನೆ : ಇಫ್ಕೋ ಮಹೋತ್ಸವ ಮೇ.9ರಂದು ಆರಂಭಗೊಂಡಿದ್ದು ಮೇ.10ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here