ಐತ್ತೂರು ಕಲ್ಲಾಜೆಯಲ್ಲಿ ವಾಹನಕ್ಕೆ ದಾರಿ ಕೊಡದ ವಿಚಾರದಲ್ಲಿ ಯಾತ್ರಾರ್ಥಿಗಳು ಮತ್ತು ಸ್ಥಳೀಯ ಯುವಕರ ಮಧ್ಯೆ ಮಾತಿನ ಚಕಮಕಿ-ಹೊಯ್ ಕೈ

0

ಕಡಬ: ಇಲ್ಲಿನ ಐತ್ತೂರು ಸಮೀಪ  ವಾಹನಕ್ಕೆ ದಾರಿ ಕೊಡದ ವಿಚಾರದಲ್ಲಿ ಯಾತ್ರಾರ್ಥಿಗಳು ಮತ್ತು ಯುವಕರ ನಡುವೆ ಮಾತಿನ ಚಕಮಕಿ ನಡೆದು ನಡುವೆ ಹೊಯ್‌ಕೈ  ನಡೆದಿದೆ.  

ಮೇ.10 ರಂದು  ಕಲ್ಲಾಜೆ ಬಳಿ ಸಾಯಂಕಾಲದ ವೇಳೆ ಈ ಘಟನೆ ನೆಡೆದಿದ್ದು ಮಾಹಿತಿ ತಿಳಿದು ಹೆಚ್ಚು  ಜನರು  ಜಮಾಯಿಸಿದ್ದರು. ಯಾತ್ರಾರ್ಥಿಗಳಿದ್ದ  ಬಸ್   ವಿರುದ್ಧ  ದಿಕ್ಕಿನಿಂದ ವೇಗವಾಗಿ  ಬಂದರೆಂಬ ಕಾರಣಕ್ಕೆ  ಸೈಡ್  ಕೊಡುವ ವಿಚಾರವಾಗಿ ಕಾರೊಂದರಲ್ಲಿದ್ದ  ಕೊಂಬಾರು ಭಾಗದ  ಯುವಕರು ವಾಗ್ವಾದ ಮಾಡಿದ್ದಾರೆ ಎನ್ನಲಾಗಿದೆ. ಕಡಬ ಪೊಲೀಸರ ಮದ್ಯ ಪ್ರವೇಶದಿಂದ ಈ ಪ್ರಕರಣ ಮಾತುಕತೆಯಲ್ಲಿ ಸುಖಾಂತ್ಯಗೊಂಡಿದೆ .

LEAVE A REPLY

Please enter your comment!
Please enter your name here