ಶಾಲಾ ಪ್ರಾರಂಭೋತ್ಸವ ಹಿನ್ನೆಲೆ: ಸರ್ವೆ ಷಣ್ಮುಖ ಯುವಕ ಮಂಡಲದಿಂದ ಭಕ್ತಕೋಡಿ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

0

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭಕ್ತಕೋಡಿ ಇದರ ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವಭಾವಿ ಸಿದ್ಧತಾ ಕಾರ್ಯಗಳಲ್ಲಿ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡರು. ಯುವಕ ಮಂಡಲದ ವತಿಯಿಂದ ಶಾಲಾ ಆವರಣ, ಕುಡಿಯುವ ನೀರಿನ ಟ್ಯಾಂಕ್, ಶಾಲಾ ಕಟ್ಟಡ ಮೇಲ್ಚಾವಣಿ ಸ್ವಚ್ಛಗೊಳಿಸಿ ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿದರು. ಶ್ರಮದಾನದಲ್ಲಿ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು, ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಪದಾಧಿಕಾರಿಗಳಾದ ಚಿರಾಗ್ ರೈ ಮೇಗಿನಗುತ್ತು, ನಾಗೇಶ್ ಪಟ್ಟೆಮಜಲು, ಕಿರಣ್ ಸರ್ವೆದೋಳಗುತ್ತು, ಗೌತಮ್ ಪಟ್ಟೆಮಜಲು, ಲಕ್ಷ್ಮಣ ಆಚಾರ್ಯ ಭಕ್ತಕೋಡಿ, ಅಶೋಕ್ ಸರ್ವೆದೋಳಗುತ್ತು, ಸಂತೋಷ್ ಪರಂಟೊಲು, ತಿಲಕ್‌ರಾಜ್ ಕರಂಬಾರು, ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಸುರೇಶ್ ಎಸ್ ಡಿ, ಕಮಲೇಶ್ ಸರ್ವೆದೋಳಗುತ್ತು, ಎಸ್‌ಡಿಎಂಸಿ ಅಧ್ಯಕ್ಷ ವಸಂತ ಕೈಪಂಗಳದೋಳ, ಶಾಲಾ ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕ ಅನಂತ್ ಪಾಲ್ಗೊಂಡರು.

LEAVE A REPLY

Please enter your comment!
Please enter your name here