ಪುತ್ತೂರು: ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ

0

ಪುತ್ತೂರು: ಮೇ.25ರಂದು ಅನುರಾಗ ವಠಾರದಲ್ಲಿ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪರೀಕ್ಷಿತ್ ತೋಳ್ಪಾಡಿಯವರು ಮಹಾವಿಷ್ಣುವಿನ ದಶಾವತಾರಗಳಲ್ಲಿ ಎಲ್ಲವೂ ಪುರುಷ ಅವತಾರಗಳೇ ಆಗಿವೆ. ಸ್ತ್ರೀ ಅವತಾರ ಯಾಕಿಲ್ಲ? ಎನ್ನುವ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸುತ್ತಾ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ಕಾರ್ಯಕ್ರಮದಲ್ಲಿ ಅನ್ನಪೂರ್ಣೇಶ್ವರಿ, ವಿ. ಬಿ. ಅರ್ತಿಕಜೆ, ಸುದಾಮ ಕೆದಿಲಾಯ, ಪಾರ್ವತಿ ಭಟ್, ಭಾಗ್ಯಲಕ್ಷ್ಮಿ ಅರ್ತಿಕಜೆ, ಸುಬ್ರಹ್ಮಣ್ಯ ಶರ್ಮ, ಕವಿತಾ ಅಡೂರು, ತುಳಸಿದಾಸ್ ಪಿಲಿಂಜ, ಶಂಕರಿ ಶರ್ಮ ಮೊದಲಾದವರು ತಮ್ಮ ಹಾಸ್ಯ ಭರಿತ ಮಾತುಗಳಿಂದ ಸಭಿಕರ ಮನರಂಜಿಸಿದರು. ಸಂಘದ ಅಧ್ಯಕ್ಷ ಸತ್ಯೇಶ್ ಕೆದಿಲಾಯರು ಸ್ವಾಗತಿಸಿದರು. ಉಪಾಧ್ಯಕ್ಷ ಸುಬ್ರಹ್ಮಣ್ಯ ಶರ್ಮ ಪ್ರಾರ್ಥಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿಗಳಾದ ಮಧುರಾ ನಾಗರಾಜ್ ಬೆಟ್ಟ ವಂದಿಸಿದರು.

LEAVE A REPLY

Please enter your comment!
Please enter your name here