ಊಜಂಪಾಡಿ-ಮಣಿಯೂರು ಶ್ರೀಶಾಸ್ತಾರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ

0

 

ದೇಲಂಪಾಡಿ: ಊಜಂಪಾಡಿ-ಮಣಿಯೂರು ಶ್ರೀಶಾಸ್ತಾರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಭೆ ಸಮಿತಿಯ ಅಧ್ಯಕ್ಷ ಮುಗೇರು ಗೋಪಾಲರಾವ್‌ಡಿವರ ಅಧ್ಯಕ್ಷತೆಯಲ್ಲಿ ದೇವಾಲಯದಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಮಿತಿ ಕೋಶಾಧಿಕಾರಿ ಮೆಣಸಿನಕಾನ ಗೋಪಾಲಕೃಷ್ಣ ಕುಂಜತ್ತಾಯ ಹಾಗೂ ಮೊಕ್ತೇಸರ ಎ. ನಾರಾಯಣ ನಾಕ್ ಊಜಂಪಾಡಿ ಮಾತನಾಡಿ ಧನಸಂಗ್ರಹ ಕಾರ್ಯದ ಬಗ್ಗೆ ಕಾರ್ಯಕರ್ತರಿಗೆ ಕ್ಷೇತ್ರ ವಿಂಗಡಿಸುವ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು. ಕ್ರೇಂದ್ರ ಸಮಿತಿ ಹಾಗೂ ಪ್ರಾದೇಶಿಕ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಬಿ. ಬಾಲಕೃಷ್ಣ ಗೌಡ ಊಜಂಪಾಡಿ, ಮುದಿಯಾರು ಸಂಜೀವ ರೈ, ಕುತ್ತಿಮುಂಡ ಹರೀಶ್ ಗೌಡ, ಮಣಿಯೂರು ಲಂಬೋದರ ಶೆಟ್ಟಿ, ಕಲ್ಲಡ್ಕ ರಾಮಯ್ಯ ರೈ, ಮಣಿಯೂರು ವಿಶ್ವನಾಥ ರೈ, ಶಾಂತಿಮಲೆ ವೇಣು, ಊಜಂಪಾಡಿ ವಿಶ್ವನಾಥ ರೈ, ಕುತ್ತಿಮುಂಡ ಕೇಶವ ಗೌಡ, ಮಿತ್ತಂತರ ವಿನಯ ಪ್ರಸಾದ್ ಮಾತನಾಡಿ ಸಲಹೆ ಸೂಚನೆ ನೀಡಿದರು. ಆರಂಭದಲ್ಲಿ ಸ್ವಾಗತಿಸಿದ ಸಮಿತಿಯ ಕಾರ್ಯಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಸಮಿತಿಯ ಕಾರ್ಯ ಚಟುವಟಿಕೆ ಹಾಗೂ ಶಿಲ್ಪಿಗಳ ಭಾಗದಿಂದ ಆಗುತ್ತಿರುವ ಕೆಲಸ ಮತ್ತು ಶ್ರಮದಾನಿಗಳ ಸಹಕಾರ ಹಾಗೂ ಸಂಗ್ರಹ ಕಾರ್ಯಗಳ ಅಭಿವೃದ್ಧಿಯ ಬಗ್ಗೆ ವಿವರಿಸಿದರು. ಸಮಿತಿ ಕಾರ್ಯದರ್ಶಿ ವೆಂಕಟರಮಣ ಭಟ್ ಮಾಸ್ತರ್ ವಂದಿಸಿದರು.

LEAVE A REPLY

Please enter your comment!
Please enter your name here