ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಸನ್ಮಾನ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡು ಇದರ 24ನೇ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಗ್ರಾಮ ಸಮಿತಿಯ ಅಧ್ಯಕ್ಷರಾದ ನಾಗೇಶ್ ಸಾರಕರೆರವರ ಅಧ್ಯಕ್ಷತೆಯಲ್ಲಿ ಶಾಂತಿಗೋಡು ಶಾಲಾ ವಠಾರದಲ್ಲಿ ಮೇ 18 ರಂದು ನಡೆಯಿತು.

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ವಲಯ ಸಂಚಾಲಕ ಗ್ರಾಮ ಸಮಿತಿಯ ನಾರಾಯಣ ಪೂಜಾರಿ ಬೇರಿಕೆ, ಅತ್ತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಇಂಜಿನಿಯರಿಂಗ್ ವಿಭಾಗದಲ್ಲಿ ಲಿಖಿತ್ ಬಜಪ್ಪಳ, ಬಿಸಿಎ ಪದವಿಯಲ್ಲಿ ಶಾಂತಿಗೋಡು ವಿದ್ಯಾರ್ಥಿ ಘಟಕದ ಅಧ್ಯಕ್ಷ ಚಂದ್ರಾಕ್ಷ ಪೇರಡ್ಕ, ದ್ವಿತೀಯ ಪಿಯುಸಿಯಲ್ಲಿ ಚೈತನ್ಯ ಪೇರಡ್ಕರವರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ನಾಗೇಶ್ ಬಲ್ನಾಡುರವರು ನೆರವೇರಿಸಿದರು. ಎಲ್‌ಕೆಜಿಯಿಂದ ಪದವಿಯವರೆಗಿನ ಗ್ರಾಮ ಸಮಿತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಲೇಖನಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ಪುಸ್ತಕ ವಿತರಣೆಯನ್ನು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಅಶ್ವಿತಾ ಎಸ್‌ರವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಚಂದ್ರಕಲಾ ಮುಕ್ವೆ ಹಾಗೂ ನರಿಮೊಗರು ವಲಯ ಸಂಚಾಲಕ ಮಹೇಶ್ಚಂದ್ರ ಸಾಲ್ಯಾನ್ ಬಿ.ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ವೀಕ್ಷಾ ಕೈಂದಾಡಿ ಪ್ರಾರ್ಥಿಸಿದರು. ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಸ್ವಾಗತಿಸಿ, ಶಾಂತಿಗೋಡು ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಸಚ್ಚೀಂದ್ರ ಬೊಳ್ಳೆಕ್ಕುರವರು ವಂದಿಸಿದರು. ಸೌಮ್ಯ ದಿನೇಶ್ ವರದಿ ಮಂಡಿಸಿದರು. ಕೊರಗಪ್ಪ ಸಾಲ್ಯಾನ್ ಕುಕ್ಯಾನ ಲೆಕ್ಕಪತ್ರ ಮಂಡಿಸಿದರು. ಹಿರಿಯರಾದ ಕೃಷ್ಣಪ್ಪ ಪೂಜಾರಿ ಕೈಂದಾಡಿರವರ ಮಾರ್ಗದರ್ಶನದಲ್ಲಿ ಗ್ರಾಮ ಸಮಿತಿಯ ಎಲ್ಲಾ ಘಟಕದ ಪದಾಧಿಕಾರಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here