ಬಿದ್ದು ಸಿಕ್ಕಿದ ಚಿನ್ನ, ನಗದು, ಐಫೋನ್‌ಗಳಿದ್ದ ಬ್ಯಾಗ್ ಅನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್

0

ಪುತ್ತೂರು: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ್ಧ ಎರಡು ಐಫೋನ್ ಮೊಬೈಲ್ ಸೆಟ್, ನಗದು ಹಾಗೂ ಚಿನ್ನದ ಆಭರಣಗಳಿದ್ದ ಲೇಡಿಸ್ ಬ್ಯಾಗನ್ನು ವಾರಿಸುದಾರರಿಗೆ ಹಿಂದಿರಿಗಿಸುವ ಮೂಲಕ ಕುಂಬ್ರದ ಅಟೋ ಚಾಲಕ ಅಬೂಬಕ್ಕರ್‌ರವರು ಮಾನವೀಯತೆ ಮರೆದಿದ್ದಾರೆ.


ಶೇಖಮಲೆಯಿಂದ ಕಟ್ಟತ್ತಾರು ಕಡೆಗೆ ಕುಟುಂಬವೊಂದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ರಸ್ತೆ ತಿರುವಿನಲ್ಲಿ ಯುವತಿಯ ಕೈಯಲ್ಲಿದ್ದ ಬ್ಯಾಗ್ ಅಟೋದಿಂದ ರಸ್ತೆಗೆ ಬಿದ್ದಿದ್ದು ಮನೆಗೆ ತಲುಪಿದ ಯುವತಿಗೆ ಬ್ಯಾಗ್ ಕಳೆದುಕೊಂಡ ಬಗ್ಗೆ ಗೋಚರವಾಗಿದೆ. ಬ್ಯಾಗ್ ಕಳೆದುಕೊಂಡ ಯುವತಿ ಮತ್ತು ಮನೆಯವರು ತಿರುಗಿ ಅದೇ ದಾರಿಯಲ್ಲಿ ಹುಡುಕಾಡಿದರೂ ಬ್ಯಾಗ್ ಸಿಗಲಿಲ್ಲ ಎನ್ನಲಾಗಿದೆ. ಈ ಮಧ್ಯೆ ರಿಕ್ಷಾ ಚಾಲಕ ಅಬೂಬಕ್ಕರ್ ಈ ರಸ್ತೆಯಲ್ಲಿ ರಿಕ್ಷಾದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಅವರಿಗೆ ರಸ್ತೆ ಬದಿಯಲ್ಲಿ ಬ್ಯಾಗ್ ಕಂಡು ಬಂದಿದ್ದು ಅದರಲ್ಲಿರುವ ಮೊಬೈಲ್ ಫೋನ್ ರಿಂಗಣಿಸುತ್ತಿರುವುದು ಕಂಡು ಬಂದು ತಕ್ಷಣ ಅವರು ಬ್ಯಾಗ್ ಎತ್ತಿಕೊಂಡು ಮೊಬೈಲ್ ನೋಡಿದಾಗ ಅದರ ಡಿಸ್‌ಪ್ಲೆನಲ್ಲಿದ್ದ ಫೋಟೋವನ್ನು ನೋಡಿ ವ್ಯಕ್ತಿಯ ಗುರುತು ಪತ್ತೆ ಮಾಡಿದ್ದಾರೆ. ಆ ಬಳಿಕ ವ್ಯಕ್ತಿಯನ್ನು ಪತ್ತೆ ಮಾಡಿ ಅವರಿಗೆ ಬ್ಯಾಗ್ ಅನ್ನು ಹಿಂತಿರುಗಿಸಿದ್ದಾರೆ. ಬ್ಯಾಗ್‌ನಲ್ಲಿ ಸುಮಾರು ಎರಡೂವರೇ ಲಕ್ಷ ಬೆಲೆಬಾಳುವ ಎರಡು ಐಫೋನ್ ಮೊಬೈಲ್ ಸೆಟ್ ಸಹಿತ ಚಿನ್ನದ ಆಭರಣ ಮತ್ತು ನಗದು ಇತ್ತು. ಬ್ಯಾಗ್ ಅನ್ನು ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಅಬೂಬಕ್ಕರ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಚಿತ್ರ: ಅಬೂಬಕ್ಕರ್

LEAVE A REPLY

Please enter your comment!
Please enter your name here