ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉದ್ಯೋಗಿ ಸಬಿತಾ ಶೆಟ್ಟಿಗೆ ಬೀಳ್ಕೊಡುಗೆ

0

 

ಪುತ್ತೂರು : ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಕಳೆದ ಹಲವಾರು ವರ್ಷಗಳಿಂದ ಗುಮಾಸ್ತೆಯಾಗಿ ಬಳಿಕ ಕ್ಯಾಶಿಯರ್ ಆಗಿ ಸೇವೆ ಸಲ್ಲಿಸಿ ಮೇ.31ರಂದು ಕರ್ತವ್ಯದಿಂದ ನಿವೃತ್ತಿಗೊಂಡ ಸಬಿತಾ ಶೆಟ್ಟಿ ಬೊಳುವಾರುರವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಅಧ್ಯಕ್ಷತೆಯಲ್ಲಿ ಬೊಳುವಾರುನಲ್ಲಿರುವ ಸಂಘದ ಕಛೇರಿಯಲ್ಲಿ ನಡೆದ ಸಮಾರಮಭದಲ್ಲಿ ಬೀಳ್ಕೊಡಲಾಯಿತು. ಬಳಿಕ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ ಸವಿತಾ ಶೆಟ್ಟಿರವರು ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅವರ ಮುಂದಿನ ನಿವೃತ್ತಿ ಜೀವನ ಸುಖ ಸಮೃದ್ಧಿಯಿಂದ ಕೂಡಲಿ ಎಂದು ಹಾರೈಸಿದರು. ಉಪಾಧ್ಯಕ್ಷ ರಾಜಶೇಖರ ಜೈನ್ ಮಾತನಾಡಿ ವೃತ್ತಿಯಲ್ಲಿ ನಿವೃತ್ತಿ ಸಹಜ. ನಮ್ಮ ಸಂಸ್ಥೆಗೆ ಸವಿತಾ ಶೆಟ್ಟಿಯವರನ್ನು ಯಾವ ರೀತಿಯಲ್ಲಿ ಸೇರಿಸಿಕೊಂಡಿದ್ದೇವೆಯೋ ಅದೇರೀತಿ ಅವರು ಸೇವಾ ನಿವೃತ್ತಿಯಾಗಿ ತೆರಳುವಾಗ ಅವರನ್ನು ಸಂತೋಷದಿಂದ ಬೀಳ್ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರ ಮುಂದಿನ ನಿವೃತ್ತ ಜೀವನ ಯಶಸ್ವಿಯಾಗಲಿ ಎಂದು ಹಾರೈಸಿದರು. ಸಂಘದ ವ್ಯವಸ್ಥಾಪಕಿ ರಾಧಾ ಬಿ.ರೈ ಮತ್ತು ಸಂಘದ ನಿರ್ದೇಶಕ ಸುಂದರ ಪೂಜಾರಿ ಬಡಾವುರವರು ಮಾತನಾಡಿ ಶುಭಹಾರೈಸಿದರು.

ಸಂಘದ ನಿರ್ದೇಶಕರುಗಳಾದ ಸುಭಾಷ್ ನಾಯಕ್, ದೇವಾನಂದ ಕೆ., ಮೋಹನ ಪಕ್ಕಳ ಕುಂಡಾಪು, ಸುಂದರ ಪೂಜಾರಿ ಬಡಾವು, ಜಯಲಕ್ಷ್ಮಿಸುರೇಶ್, ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ ನಾಯಕ್, ಸಿಬಂದಿಗಳಾದ ಪುರಂದರ ನಾಯ್ಕ, ಎನ್.ಈಶ್ವರ ಪೂಜಾರಿ, ಪ್ರತಿಮಾ, ಪ್ರಮೋದ್ ಕುಮಾರ್, ಮಾಲತಿ, ಯಶವಂತ ಟಿ.ಬಿ., ದಿವಾಕರ ಗೌಡ, ಉದಯ ಕುಮಾರ್, ರಂಜಿತ್ ಕುಮಾರ್, ಕಾರ್ತಿಕ್ ಗೌಡ, ದಿಲೀಪ್, ಭರತ್, ಅನಿಶ, ನವೋದಯ ಪ್ರೇರಕ ಮಾಲತಿ, ಗೀತಾರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here