ಜೂ 4-6, ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ದೇವರ ಶಿಲಾ ವಿಗ್ರಹ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ

0

  • ಜೂ 4 ಹೊರೆಕಾಣಿಕೆ ಸಮರ್ಪಣೆ
  • ಜೂ 6- ಬ್ರಹ್ಮಕಲಶೋತ್ಸವ

ಕಾಣಿಯೂರು: ಮುರುಳ್ಯ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಶ್ರೀ ದೇವರ ಶಿಲಾ ವಿಗ್ರಹ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವು ಜೂ 4ರಿಂದ ಜೂ೬ರವರೆಗೆ ಮೂಡಬಿದಿರೆ ಶ್ರೀ ಎನ್. ಕೇಶವ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.

 

 

 

ಜೂ ೪ರಂದು ತಂತ್ರಿಗಳ ಋತ್ವಿಜರ ಸ್ವಾಗತ ಶಿಲ್ಪಿಗಳಿಂದ ಆಲಯಪರಿಗ್ರಹ, ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ, ಅಂಕುರಾರ್ಪಣೆ, ಕಂಕಣಧಾರಣೆ, ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಸಂಜೆ ಉಗ್ರಾಣ ಮುಹೂರ್ತ, ಮಂಟಪ ಸಂಸ್ಕಾರಯಾಗ, ಮಂಟಪ ಪ್ರವೇಶ, ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಸಾದ ಶುದ್ಧಿ, ಅಘೋರ ಹೋಮ, ವಾಸ್ತು ಪೂಜೆ ಹೋಮ, ದಿಗ್ಬಲಿರಕ್ಷೆ ನಡೆಯಲಿದೆ. ಜೂ 5ರಂದು ಬೆಳಿಗ್ಗೆ ಅಗ್ನಿಜನನ, ಗಣಪತಿಹೋಮ, ಮೃತ್ಯುಂಜಯ ಹೋಮ, ದುರ್ಗಾಹೋಮ, ಐಕ್ಯಮತ್ಯಹೋಮ, ಶಾಂತಿ ಹೋಮಾದಿಗಳು, ಬ್ರಹ್ಮಮಂಡಲರಚನೆ ನಡೆದು, ಸಂಜೆ ಬಿಂಬ ಶುದ್ಧಿ, ಜಲಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ಶಯ್ಯಾಧಿವಾಸ, ಬ್ರಹ್ಮಕಲಶ ಪೂರಣ, ಅಧಿವಾಸ ಹೋಮ, ಪೀಠನ್ಯಾಸ, ರತ್ನನ್ಯಾಸ, ಯಂತ್ರನ್ಯಾಸ ನಡೆಯಲಿದೆ. ಜೂ ೬ರಂದು ಆವಾಹಿತ ದೇವತಾ ಪೂಜೆ, ಪ್ರಧಾನ ಹೋಮ, ಪೂರ್ಣಾಹುತಿ, ಶಿಖರ ಪ್ರತಿಷ್ಠೆ, ಬೆಳಿಗ್ಗೆ ೮.೨೭ರಿಂದ ೯.೦೪ರವರೆಗೆ ಮಿಥುನ ಲಗ್ನದಲ್ಲಿ ಶ್ರಿ ದೇವರ ಶಿಲಾ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಜೀವನ್ಯಾಸ, ಆಯುಧನ್ಯಾಸ, ಶಕ್ತಿನ್ಯಾಸ, ಮಹಾಕುಂಭಾಭಿಷೇಕ, ಪ್ರಸನ್ನ ಪೂಜೆ, ವಿಧಿನಿಯಮಗಳ ವಾಗ್ದಾನ, ಅಲಂಕಾರ ಪೂಜೆ, ಮಹಾಪೂಜೆ, ಅಷ್ಟಾವಾಧನ ಸೇವೆ, ಪ್ರಾರ್ಥನೆ, ಲೋಕಾರ್ಪಣೆ, ಮಂತ್ರಾಕ್ಷತೆ, ವೈದಿಕರ ಸಂಭಾವನೆ, ಬ್ರಹ್ಮಾರ್ಪಣೆ, ಪ್ರಸಾದ ವಿತರಣೆ ನಡೆಯಲಿದೆ. ಜೂ ೬ರಂದು ಸಂಜೆ ಶ್ರಿ ದೇವಿಗೆ ವಿಶೇಷ ದೀಪ ನಮಸ್ಕಾರ ಪೂಜೆ ನಡೆಯಲಿದೆ. ಜೂ ೪ರಿಂದ ಜೂ ೬ರವರೆಗೆ ಭಜನಾ ಸಂಕೀರ್ತನೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಜೂ 8ರಂದು ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ, ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇವಸ್ಥಾನದ ವಿವಿಧ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here