ನರಿಮೊಗರು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಕೊಠಡಿ ಉದ್ಘಾಟನೆ

0


ಪುತ್ತೂರು: ನರಿಮೊಗರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಕೊಠಡಿ ಉದ್ಘಾಟನೆ ಜೂ.3ರಂದು ನಡೆಯಿತು.

 

ಶಾಲಾ ದಾನಿಯಾಗಿರುವ ಲೋಕಪ್ಪ ಗೌಡ ಹಾಗೂ ನಳಿನಿ ಲೋಕಪ್ಪ ಗೌಡರ ಪುತ್ರಿ ಅನಿತಾರವರು ತರಗತಿ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ ಜೈನ್, ಸದಸ್ಯರಾದ ಪ್ರವೀಣ್ ಆಚಾರ್ಯ, ಸೌಮ್ಯ, ನಸೀಮ ಬಾನು, ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಜುಸ್ತಿನ್ ಲಿಡ್ವಿನ್ ಡಿಸೋಜಾ ಸ್ವಾಗತಿಸಿದರು. ದೈ.ಶಿ.ಶಿಕ್ಷಕಿ ಶ್ರೀಲತಾ ವಂದಿಸಿದರು. ಶಿಕ್ಷಕಿ ಸ್ನೇಹಲತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು, ದಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here