ವೀರಮಂಗಲ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು: ವೀರಮಂಗಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಮುಖ್ಯ ಗುರು ಮೋನಪ್ಪ ಗೌಡ ವೀರಮಂಗಲ ಇವರು ಗಿಡಗಳಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ಮತ್ತು ಬದುಕಿನ ಕುರಿತು ಮಾತನಾಡಿ ಆರೋಗ್ಯಕರವಾದ ಪರಿಸರದ ನಿರ್ಮಾಣದ ಪಣ ವಿದ್ಯಾರ್ಥಿ ದೆಸೆಯಿಂದಲೇ ಅಗತ್ಯವಿದೆ. ಮರಗಿಡಗಳನ್ನು ಬೆಳೆಸಿ ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲರಾದ ಮಹೇಶ್ ಕೆ ಸವಣೂರು ಅವರು ಮಾತನಾಡಿ ಪ್ರಕೃತಿಯ ಅಸಮತೋಲನಕ್ಕೆ ನಾವು ಕಾರಣರಾಗದಂತೆ ಎಚ್ಚರ ವಹಿಸಬೇಕು, ವೀರಮಂಗಲ ಪರಿಸರ ಸೌಂದರ್ಯತೆಯನ್ನು ಕಾಪಾಡಿಕೊಳ್ಳೋಣ ಎಂದರು. ಪೋಷಕರು ವಿದ್ಯಾರ್ಥಿಗಳು ವಿವಿಧ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಹೊಸ ವಿದ್ಯಾರ್ಥಿಗಳು ಶಾಲೆಗೊಂದು ಹೂವಿನ ಕುಂಡ ನೀಡಿ ಸಹಕರಿಸಿದರು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ೬೦ ನೇ ವರ್ಷಾಚರಣೆಯ ಅಧ್ಯಕ್ಷ ವೀರಮಂಗಲ ಗೋಪಾಲಕೃಷ್ಣ, ಗ್ರಾಮ ಪಂಚಾಯತ್ ಸದಸ್ಯೆ ಪದ್ಮಾವತಿ, ಶಾಲಾಭಿವೃದ್ಧಿ ಸಮಿತಿಯ ನಿಕಟ ಪೂರ್ವಾಧ್ಯಕ್ಷ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿ, ಶಾಲಾ ಮುಖ್ಯಗುರು ತಾರಾನಾಥ ಸವಣೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ಶೋಭಾ ವಂದಿಸಿ, ಶಾಲಾನಾಯಕಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು .ಕು.ಹಂಸಿನಿ, ಭವಿಷ್ಯ,ಕೃತಿಕಾ ಪರಿಸರ ಗೀತೆ ಹಾಡಿದರು. ಶಿಕ್ಷಕಿಯರಾದ ಶ್ರೀಮತಿ ಹೇಮಾ ಶ್ರೀಮತಿ ಶ್ರೀಲತಾ ಶ್ರೀಮತಿ ಕವಿತಾ ಶ್ರೀಮತಿ ಗಾಯತ್ರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪೋಷಕರ ಸಭೆಯಲ್ಲಿ ಶಾಲೆಯ ಸೌಂದರ್ಯೀಕರಣಕ್ಕೆ ಹಾಗೂ ಅಡುಗೆ ಕೋಣೆಯ ಶೀಟು ಅಳವಡಿಕೆಗೆ ೫ಸಾವಿರ ವೆಚ್ಚದ ಆಯವ್ಯಯ ಮಾಡಿ ಶಾಲಾಭಿವೃದ್ದಿ ಸಮಿತಿಗೆ ದೇಣಿಗೆ ನೀಡಿದರು.

LEAVE A REPLY

Please enter your comment!
Please enter your name here