ವಿಟ್ಲದಲ್ಲಿ ಬೃಹತ್ ಹಿಂದು ಜಾಗೃತಿ ಸಭೆ

0

ವಿಟ್ಲ:ದೇಶಕ್ಕೆ ಬಂದಿರುವ ಎಲ್ಲರನ್ನೂ ಸ್ವೀಕಾರ ಮಾಡಿರುವ ಹಿಂದೂ ಸಮಾಜವನ್ನು ಜಿಹಾದಿನ ಹೆಸರಿನಲ್ಲಿ ಒಡೆಯುವ ಪಿತೂರಿ ನಡೆಯುತ್ತಿದೆ.ಹಿಂದೂ ಸಮಾಜ ಒಟ್ಟಾಗಿ ಸಿಂಹ ಘರ್ಜನೆ ಹಾಕುವಂತಹ ಕಾಲ ಸನ್ನಿಹಿತವಾಗಿದೆ.ಹಿಂದೂ ಸಮಾಜಕ್ಕೆ ತನ್ನದೇ ಆಗಿರುವ ಬದ್ಧತೆ ಇದೆ.ಆಕ್ಷನ್‌ಗೆ ರಿಯಾಕ್ಷನ್ ಹಿಂದೂ ಸಮಾಜದ ಧರ್ಮ ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಸಹ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

ಲವ್ ಜಿಹಾದ್, ಮತಾಂತರ, ಗೋಹತ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ನಾಯಕರ ಅವಹೇಳನದ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂ.೬ರಂದು ವಿಟ್ಲದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ವಿಶ್ವ ಹಿಂದು ಪರಿಷದ್, ಬಜರಂಗದಳ ವಿಟ್ಲ ಪ್ರಖಂಡ ಮತ್ತು ಹಿಂದು ಜಾಲತಾಣ ವೇದಿಕೆ ವಿಟ್ಲ ಆಶ್ರಯದಲ್ಲಿ ನಡೆದ ಬೃಹತ್ ಹಿಂದು ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.ಹಿಂದೂ ಸಮಾಜ ಜಾಗೃತವಾಗ್ತಿದೆ.ಜಗತ್ತಿನ ಜನರನ್ನು ಪ್ರೀತಿಸಲು ಕಲಿಸಿರತಕ್ಕಂತಹ ಧರ್ಮ ಸನಾತನ ಹಿಂದೂ ಧರ್ಮ.ಕಣಿಯೂರಿನಲ್ಲಿ ನಡೆದ ಬಾಲಕಿಯ ಸಾವು ಅದು ಆತ್ಮಹತ್ಯೆಯಲ್ಲ ಅದೊಂದು ಕೊಲೆ.ಅದೊಂದು ಘೋರ ಅನ್ಯಾಯವಾಗಿದೆ.ಹಿಂದೂ ಸಮಾಜ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಘಟನೆಯದು.ಯಾರೂ ಅವರಿಗೆ ಸಾಂತ್ವನ ಹೇಳಲು ಬಂದಿಲ್ಲ.ಮೊನ್ನೆ ಮೊನ್ನೆ ಭಾಷಣಗಳನ್ನು ಮಾಡಿರುವ ವ್ಯಕ್ತಿಗಳು ಅಲ್ಲಿ ಬಂದು ಸಾಂತ್ವನ ಹೇಳಿಲ್ಲ.ದಲಿತರು ನಮ್ಮ ಜೊತೆ ಇದ್ದಾರೆ ಅಂತ ಭಾಷಣ ಮಾಡಿದ್ರು.ದಲಿತರು ನಾವು ಒಟ್ಟಾಗ್ತೀವಿ ಭಾಯಿ ಭಾಯಿ ಅಂತ ಹೇಳಿದ್ರು.ಅದರೆ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವ ಬಾಲಕಿಯನ್ನು ಲವ್ ಜಿಹಾದ್ ನಡೆಸಿ ಕೊಲೆ ಮಾಡಿರುವಂತಹ ಸಂದರ್ಭದಲ್ಲಿ ಯಾವೊಬ್ಬನೂ ಸಾಂತ್ವನ ಹೇಳಿಲ್ಲ.ಆಗ ಹಿಂದೂ ಸಮಾಜ ಅವರಿಗೆ ಧೈರ್ಯ ತುಂಬಿತು ಎಂದ ಅವರು, ಹಿಂದು ಸಮಾಜದ ಮೇಲೆ ಹಲವು ರೀತಿಯ ಸಂಚುಗಳನ್ನು ಮಾಡಲಾಗುತ್ತಿದೆ.ದೇಶದ ಸವಲತ್ತುಗಳು ಬೇಕು, ಸಂವಿಧಾನ ಬೇಡ ಎನ್ನುವ ಕಾರ್ಯವಾಗುತ್ತಿದೆ.ಹಿಂದೂ ಸಮಾಜ ಎಚ್ಚರಗೊಂಡು ಜಾಗೃತವಾಗಬೇಕು ಎಂದರಲ್ಲದೆ,ಹಿಂದು ಸಮಾಜದ ಜನರ ಮಾನಸಿಕತೆಯಲ್ಲಿ ಪರಿವರ್ತನೆಯಾಗುತ್ತಿದೆ.ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಪ್ರಯತ್ನಿಸುವ ರಾಜಕೀಯಕ್ಕೆ ಬೆಂಬಲ ನೀಡುವ ಕಾರ್ಯವಾಗಬಾರದು.ಲವ್ ಜಿಹಾದ್‌ಗೆ ತಕ್ಕ ಪ್ರತ್ಯುತ್ತರ ನೀಡುವ ಕಾರ್ಯ ಸಮಾಜ ಮಾಡಬೇಕಾಗುತ್ತದೆ ಎಂದರು.

ವಿಶ್ವ ಸಂವಾದ ವಿಭಾಗ ಪ್ರಚಾರ ಪ್ರಮುಖ್ ತನ್ಮಯಿ ಮಾತನಾಡಿ ವಿವಿಧ ರೀತಿಯಲ್ಲಿ ಹಿಂದು ಯುವತಿಯರನ್ನು ಸಿಲುಕಿ ಹಾಕಿಸುವ ಕಾರ್ಯ ಮಾಡಲಾಗುತ್ತದೆ.ಜ್ಞಾನದ ಕೇಂದ್ರಗಳ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ.ಹಿಂದುಗಳಿಗೆ ಭಾರತವೊಂದೇ ಮಾತೃಭೂಮಿಯಾಗಿದ್ದು, ಷಡ್ಯಂತ್ರಗಳನ್ನು ನಾವು ಅರಿತುಕೊಂಡು ಎಚ್ಚೆತ್ತುಕೊಳ್ಳಬೇಕು.ಜಾಗೃತ ಸಮಾಜದಿಂದ ಅದ್ಭುತ ದೇಶ ಕಟ್ಟಲು ಸಾಧ್ಯ.ಇಡೀ ಹಿಂದೂ ಸಮಾಜ ಯಾವತ್ತು ಷಂಡರಂತೆ ಮಲಗಿಲ್ಲ.ನಮ್ಮ ಧರ್ಮ ಉಳಿಯಲು ಹೆಣ್ಣು ಮಕ್ಕಳು ಜಾಗೃತರಾಗಬೇಕು.ನಾವು ಜಾಗೃತರಾಗದಿದ್ದಲ್ಲಿ ಮುಂದೊಂದು ದಿನ ನಾವು ಇಡೀ ಸಮಾಜವನ್ನು ಕಳ್ಕೊಳ್ಳಬೇಕಾಗಬಹುದು ಎಂದರು.


ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಶಿಕ್ಷಣ್ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯರವರು ಮಾತನಾಡಿ ಇಡೀ ಜಗತ್ತನ್ನು ಸ್ವೀಕಾರ ಮಾಡಿದವರು ನಾವು.ಹಿಂದೂ ಎಂದರೆ ಸಕಲ ಸದ್ಗುಣಗಳ ಗಣಿ.ಪ್ರತಿಯೊಬ್ಬರು ಭಾರತದ ಇತಿಹಾಸವನ್ನು ಅಧ್ಯಯನ ಮಾಡುವ ಕೆಲಸವಾಗಬೇಕು.ಜಗತ್ತನ್ನು ಉಳಿಸಲು ಹಿಂದು ಸಮಾಜ ಶಕ್ತಿಶಾಲಿಯಾಗಬೇಕು.ಹಿಂದು ಭಾವನೆ ಹೃದಯದಿಂದ ಬೆಳಗಬೇಕು.ಉತ್ತಮ ಕೆಲಸ ಮಾಡಿದವರನ್ನು ಆದರ್ಶವಾಗಿಟ್ಟುಕೊಳ್ಳಬೇಕು.ಪಿಶಾಚಿಗಳ ಉಚ್ಚಾಟನೆಗೆ ಸರಿಯಾದ ಸಿದ್ಧತೆ ಮಾಡಬೇಕಾಗಿದೆ.ಹಿಂದು ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು ಎಂದರಲ್ಲದೆ, ಜಗತ್ತನ್ನು ಉಳಿಸಲು ಹಿಂದೂ ಸಮಾಜ ಶಕ್ತಿಶಾಲಿಯಾಗಬೇಕು ಎಂದರು.

ವಿಟ್ಲ ಅರಮನೆಯ ಪ್ರತಿನಿಧಿಯಾಗಿ ಜಯರಾಮ ವಿಟ್ಲ, ವಿಶ್ವ ಹಿಂದು ಪರಿಷದ್ ಜಿಲ್ಲಾ ಅಧ್ಯಕ್ಷ ಡಾ.ಕೆ.ಪ್ರಸನ್ನ ಉಪಸ್ಥಿತರಿದ್ದರು.ಚರಣ್ ಧರ್ಮನಗರ ವೈಯಕ್ತಿಕ ಗೀತೆ ಹಾಡಿದರು.ವಿಶ್ವ ಹಿಂದು ಪರಿಷದ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ ಸ್ವಾಗತಿಸಿದರು.ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್ ವಂದಿಸಿದರು.ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಕಾರ್ಯಕ್ರಮ ನಿರೂಪಿಸಿದರು.ಆರಂಭದಲ್ಲಿ ಪುತ್ತೂರು ರಸ್ತೆಯ ಮೇಗಿನ ಪೇಟೆಯ ಜೈನಬಸದಿ ಬಳಿಯಿಂದ ಸಭಾ ವೇದಿಕೆಯವರೆಗೆ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here