ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ: ಸರ್ವೆ ಎಸ್.ಜಿ.ಎಂ ಪ್ರೌಢ ಶಾಲಾ ವಿದ್ಯಾರ್ಥಿನಿ ಯಜ್ಞಾ ಎಸ್.ಕೆ.ಯವರಿಗೆ 622 ಅಂಕ-ರಾಜ್ಯದಲ್ಲಿ ನಾಲ್ಕನೇ ಸ್ಥಾನ

0

  • ಶಾಲೆಗೆ 93.6% ಫಲಿತಾಂಶ

ಪುತ್ತೂರು: 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಎಸ್.ಜಿ.ಎಂ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶಾಲಾ ಫಲಿತಾಂಶ 90.6% ದಿಂದ 93.8% ಏರಿಕೆಯಾಗಿದೆ.

619 ಅಂಕ ಗಳಿಸಿದ್ದ ಯಜ್ಞಾ ಎಸ್.ಕೆ.ಯವರಿಗೆ ಇಂಗ್ಲಿಷ್‌ನಲ್ಲಿ 3 ಅಂಕಗಳು ಹೆಚ್ಚುವರಿ ಲಭಿಸಿದ್ದು ಒಟ್ಟು 622 ಅಂಕಗಳೊAದಿಗೆ ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾಳೆ. 596 ಅಂಕ ಗಳಿಸಿದ್ದ ಹಸ್ಮಿತಾ ಬಿ ಯಚ್ 598 ಅಂಕ, 574 ಅಂಕ ಗಳಿಸಿದ್ದ ಅಶ್ವಿನಿ 592 ಅಂಕ, 572 ಅಂಕ ಗಳಿಸಿದ್ದ ಹರ್ಷಿತ್ ಎ ಕೆ 574 ಅಂಕ, 573 ಅಂಕ ಗಳಿಸಿದ್ದ ಹೇಮಂತ್ 581 ಅಂಕ ಗಳಿಸಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here