ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸರ್ಪಸಂಸ್ಕಾರ, ಸುದರ್ಶನ ಹೋಮ

0

 

ಕಾಣಿಯೂರು: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಅಷ್ಠಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರವಾಗಿ ಕ್ಷೇತ್ರದಲ್ಲಿ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜೂ 4ರಂದು ಸರ್ಪಸಂಸ್ಕಾರ, ಜೂ 6ರಂದು ಸಂಜೆ ದೇವತಾ ಪ್ರಾರ್ಥನೆ,ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಅಘೋರ ಹೋಮ, ಪ್ರೇತವಾಹನೆ, ಉಚ್ಚಾಟನೆ, ಮಹಾಸುದರ್ಶನ ಹೋಮ, ಪ್ರಸಾದ ವಿತರಣೆ, ಜೂ 7ರಂದು ಬೆಳಿಗ್ಗೆ ಸ್ವಸ್ತಿ| ಪುಣ್ಯಾಹವಾಚನ, ಮಹಾಗಣಪತಿ ಹೋಮ, ತಿಲಹೋಮ, ಸಂಸ್ಕಾರ ಮಂಗಲ ಹೋಮ, ಪವಮಾನ ಹೋಮ, ಹಂಸವಾಗೀಶ್ವರಿ ಹೋಮ, ಆಶ್ಲೇಷಾ ಬಲಿ, ಅಷ್ಟ ವಟು ಆರಾಧನೆ, ನಾಗತಂಬಿಲ ಸೇವೆ, ದೇವರಿಗೆ ಸಾನಿಧ್ಯ ಕಲಶ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

 

ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್, ರಾಘವೇಂದ್ರ ಭಟ್, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವಿಠಲ ಗೌಡ ಬರೆಪ್ಪಾಡಿ, ಸದಸ್ಯರಾದ ರಮೇಶ್ ಕೆ.ಎನ್ ಕಾರ್ಲಾಡಿ, ಜತ್ತಪ್ಪ ರೈ ಬರೆಪ್ಪಾಡಿ, ನಿರ್ಮಲಕೇಶವ ಗೌಡ ಅಮೈ, ಪುಷ್ಪಾವತಿ ಪಿ. ಗೌಡ, ಶ್ರೀಧರ ಗೌಡ ಕೊಯಕ್ಕುಡೆ, ಐತ್ತಪ್ಪ ಗೌಡ ಕೊಯಕ್ಕುಡೆ, ದರ್ಖಾಸು, ಯಶೋದ ಏರ್ಕಮೆ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ರಾಜದೀಪಕ್ ಕುಮಾರ್ ಜೈನ್ ಕುದ್ಮಾರುಗುತ್ತು, ಬೆಳಂದೂರು ಗ್ರಾ.ಪಂ. ಸದಸ್ಯರಾದ ಪ್ರವೀಣ್ ಕೆರೆನಾರು, ತಾರಾ ಅನ್ಯಾಡಿ, ಚಂದ್ರಶೇಖರ್ ಬರೆಪ್ಪಾಡಿ, ನಾಗೇಶ್ ಕೆಡೆಂಜಿ, ಶೂರಪ್ಪ ಗೌಡ ಪಟ್ಟೆತ್ತಾನ, ಮೇದಪ್ಪ ಕುವೇತ್ತೋಡಿ, ಲೋಕೇಶ್ ಬಿ.ಎನ್ ಮತ್ತೀರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here