ವಿಟ್ಲ: ಲಾರಿ ಡಿಕ್ಕಿಯಾಗಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ – ಕಾಸರಗೋಡು ರಸ್ತೆಯ ಪ್ರಭಾ ವೈನ್ ಶಾಪ್ ಬಳಿ ನಡೆದಿದೆ. ಲಾರಿ ಉಕ್ಕುಡ ಭಾಗದಿಂದ ವಿಟ್ಲ ಕಡೆಗೂ ಬರುತ್ತಿತ್ತೆನ್ನಲಾಗಿದೆ. ಘಟನೆಯಿಂದ ಮೃತಪಟ್ಟ ವ್ಯಕ್ತಿಯ ಗುರುತು ಇನ್ಮಷ್ಟೆ ಪತ್ತೆಯಾಗಬೇಕಿದೆ. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿಡಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.