ಎಸ್.ಎಸ್.ಎಲ್.ಸಿ. ಮರುಮೌಲ್ಯ ಮಾಪನ :ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹೆಚ್ಚಿದ ಅಂಕ

0

ವಿಟ್ಲ: 2022 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದ ಮರುಮೌಲ್ಯ ಮಾಪನದಲ್ಲಿ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷ ಎಸ್ ರವರು ಸಮಾಜವಿಜ್ಞಾನ ವಿಷಯದಲ್ಲಿ ಮೊದಲ ಅಂಕವು 98 ಆಗಿದ್ದು ಇದೀಗ 2 ಅಂಕ ಸೇರ್ಪಡೆಯಾಗಿ ಒಟ್ಟು 100 ಅಂಕ ಗಳಿಸಿ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ . ಇವರು ಸಾಂತಪದವು ಶ್ರೀಕೃಷ್ಣ ಭಟ್ ಎಸ್ ಮತ್ತು ಜಯಶ್ರೀ ಕೆ ಆರ್ ರವರ ಪುತ್ರಿಯಾಗಿರುತ್ತಾರೆ.

ಅಪೂರ್ವ ಭಟ್ ಡಿ ರವರು ಹಿಂದಿ ಯಲ್ಲಿ 2 ಮತ್ತು ಗಣಿತದಲ್ಲಿ 1 ಹೆಚ್ಚುವರಿ ಅಂಕ ಪಡೆದು ಮರುಮೌಲ್ಯಮಾಪನದಲ್ಲಿ 624 ಅಂಕವನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಹೆಗ್ಡೆಕೂಡಿ ರಾಜೇಶ್ ಡಿ ಮತ್ತು ಸೌಮ್ಯ ದಂಪತಿಯ ಪುತ್ರಿ.

ಆರಂಭದಲ್ಲಿ ಖತೀಜತ್ ರಾಹಿಲ ರವರಿಗೆ 605 ಅಂಕ ಲಭಿಸಿದ್ದು, ಮರು ಮೌಲ್ಯಮಾಪನದಲ್ಲಿ ಕನ್ನಡ ವಿಷಯದಲ್ಲಿ 4 ಅಂಕ ಹೆಚ್ಚುವರಿ ಪಡೆದು ಒಟ್ಟು 609 ಅಂಕ ಪಡೆದಿದ್ದಾರೆ. ಇವರು ದೇಲಂತಬೆಟ್ಟು ಅಬ್ದುಲ್ ರೆಹಿಮಾನ್ ಡಿ ಬಿ ಮತ್ತು ಜಮೀಲ ದಂಪತಿಯ ಪುತ್ರಿಯಾಗಿದ್ದಾರೆ.

ಮೇಘಶ್ರೀ ರವರು ಆರಂಭದಲ್ಲಿ 598 ಅಂಕ ಪಡೆದಿದ್ದು ಮರು ಮೌಲ್ಯಮಾಪನದಲ್ಲಿ ವಿಜ್ಞಾನ ವಿಷಯದಲ್ಲಿ 2 ಅಂಕದ ಸೇರ್ಪಡೆಯೊಂದಿಗೆ ಒಟ್ಟು 600 ಅಂಕ ಪಡೆದಿರುತ್ತಾರೆ. ಇವರು ಅಡ್ಕಸ್ಥಳ ರಘು ಮತ್ತು ಬಿಂದು ದಂಪತಿಯ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here