ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಹುಣ್ಣಿಮೆ ದಿವಸ ಸಾರ್ವಜನಿಕ ಶ್ರೀ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾ ಪೂಜೆ, ಭಜನಾ ಕಾರ್ಯಕ್ರಮ

0

ಕಾಣಿಯೂರು: ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ ಹುಣ್ಣಿಮೆ ದಿವಸ ಪ್ರಯುಕ್ತ 14ರಂದು ಸಾರ್ವಜನಿಕ ಶ್ರೀ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾ ಪೂಜೆ, ಭಜನಾ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಒಂದು ದಿನದ ಮುಂಚಿತವಾಗಿ ಪೂಜಾ ರಶೀಧಿ ಮಾಡಿಸಿಕೊಳ್ಳಬೇಕು. ಪೂಜಾ ರಶೀಧಿ ಮಾಡಿಸಿದವರು ಬೆಳಿಗ್ಗೆ ಗಂಟೆ 9.00ಕ್ಕೆ ಗಣಹೋಮ ಸಂಕಲ್ಪ, ಬೆಳಿಗ್ಗೆ ಗಂಟೆ 10.00ಕ್ಕೆ ಶ್ರೀ ಸತ್ಯನಾರಾಯಣ ಪೂಜಾ ಸಂಕಲ್ಪ, ಹಾಗೂ ಶ್ರೀ ದುರ್ಗಾ ಪೂಜಾ ಸಂಕಲ್ಪ ಸಂಜೆ ಗಂಟೆ 6.30ಕ್ಕೆ ನಡೆಯಲಿದೆ. ಭಕ್ತಾಧಿಗಳು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಪೂಜಾ ಸಂಕಲ್ಪಗಳಲ್ಲಿ ಭಾಗವಹಿಸಬೇಕು. ವಿನಂತಿಸಿಕೊಳ್ಳುತ್ತಿದ್ದೇವೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಶ್ರೀ ಗಣಹೋಮಕ್ಕೆ ರೂ 150, ಶ್ರೀ ದುರ್ಗಾ ಪೂಜೆಗೆ ರೂ 200, ಶ್ರೀ ಸತ್ಯನಾರಾಯಣ ಪೂಜೆಗೆ ರೂ 300 ಪಾವತಿಸಿ, ಊರ ಹಾಗೂ ಪರವೂರ ಭಕ್ತರು ಪೂಜಾ ರಶೀಧಿಯನ್ನು ಮಾಡಿಸುವವರು 9108124729, 9741919196 ನ್ನು ಸಂಪರ್ಕಿಸಬೇಕು. ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಳಿಕ ಪ್ರತಿ ದಿನ ಮೂರು ಹೊತ್ತು ಪೂಜೆ ನಡೆಸಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here