ಪುತ್ತೂರು ರೋಟರ್‍ಯಾಕ್ಟ್‌ಗೆ ಅತ್ಯುತ್ತಮ ಕ್ಲಬ್ ಪ್ರಶಸ್ತಿ: ನಿಕಟಪೂರ್ವ ಅಧ್ಯಕ್ಷ ನವೀನ್ ರೈ ಅತ್ಯುತ್ತಮ ಅಧ್ಯಕ್ಷ

0

ಪುತ್ತೂರು: ಮೈಸೂರು, ಚಾಮರಾಜನಗರ, ಮಡಿಕೇರಿ, ಮಂಗಳೂರು 4 ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರ್‍ಯಾಕ್ಟ್ ಜಿಲ್ಲೆ 3181ರ ರೋಟರ್‍ಯಾಕ್ಟ್ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಅಡ್ಯಾರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ನೇತ್ರಾವತಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ್ದು, ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ನಿಕಟಪೂರ್ವ ಅಧ್ಯಕ್ಷ ನವೀನ್ ರೈ ಅವರು ಪ್ರಶಸ್ತಿ ಪಡೆದುಕೊಂಡರು.

ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ನವೀನ್ ರೈ ಬನ್ನೂರು ಅವರು ಜಿಲ್ಲಾ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಗೆ ಭಾಜನರಾದರು. ಇದೇ ಸಂದರ್ಭ ಕ್ಲಬ್‌ಗೆ 2020-21 ನೇ ಸಾಲಿನ ಡಿಆರ್‌ಆರ್ ಸಿಟೇಷನ್ ಅವಾರ್ಡ್, ಲಕ್ಕಿ ರೋಟರ್‍ಯಾಕ್ಟ್ ಅವಾರ್ಡ್, ಬೆಸ್ಟ್ ಕ್ಲಬ್ ಅವಾರ್ಡ್, ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್, ಬೆಸ್ಟ್ ಬುಲೆಟಿನ್ ಅವಾರ್ಡ್, ಬೆಸ್ಟ್ ಝಡ್‌ಆರ್‌ಆರ್ ಅವಾರ್ಡ್, ಟಗ್ ಆಫ್ ವಾರ್ ಅವಾರ್ಡ್ ಹಾಗೂ 2021-22ನೇ ಸಾಲಿನ ಅರ್‍ಲಿ ಬರ್ಡ್ ಅವಾರ್ಡ್ ಲಭಿಸಿತು.

ನವೀನ್ ರೈ ಬನ್ನೂರು

ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಪ್ರಶಸ್ತಿ ವಿತರಿಸಿದರು. ೨೦೨೩-೨೪ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ಜಿಲ್ಲಾ ಪ್ರತಿನಿಧಿ ಡೆರಿಲ್ ಸ್ಟೀವನ್ ಡಿಸೋಜಾ, ನಿಕಟಪೂರ್ವ ಜಿಲ್ಲಾ ಪ್ರತಿನಿಧಿ ಅಭಿಜಿತ್ ಎಂ.ಎಸ್. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here