ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಮಾನ್ಯ ಸಭೆ: 2.10.836 ಲಾಭ- ಲೀಟರಿಗೆ 73 ಪೈಸೆ ಬೋನಸ್, 14% ಡಿವಿಡೆಂಡ್

0

ಪುತ್ತೂರು: ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಗದ ವಾರ್ಷಿಕ ಸಾಮಾನ್ಯ ಸಭೆಯು ಜೂ. 14ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಅಧ್ಯಕ್ಷರಾದ ರಕ್ಷಿತ್ ರೈ ಮುಗೇರು ಅಧ್ಯಕ್ಷತೆಯಲ್ಲಿ ನಡೆಯಿತು.
 
ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಲಾಯಿತು. ಸಂಘಕ್ಕೆ ೧೦೨೧-೨೨ ನೇ ಸಾಲಿನಲ್ಲಿ ೨. ೧೦, ೮೩೬ ರೂ ಸಂಘಕ್ಕೆ ನಿವ್ವಳ ಲಾಭವಾಗಿದ್ದು , ಸದಸ್ಯರಿಗೆ ಪ್ರತೀ ಲೀಟರ್ ಹಾಲಿಗೆ ೭೩ ಪೈಸೆಯಂತೆ ಬೋನಸ್ ನೀಡುವುದು ಮತ್ತು ೧೪ ಶೇ. ಡಿವಿಡೆಂಡ್ ನೀಡುವುದು ಎಂದು ತೀರ್ಮಾನಿಸಲಾಯಿತು.

ನೂತನ ಕಟ್ಟಡಕ್ಕೆ ಜಾಗ ಖರೀದಿಸಲು ನಿರ್ಣಯ
ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ರಕ್ಷಿತ್ ರೈ ಮುಗೇರುರವರು ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗುವ ಸಂದರ್ಭದಲ್ಲಿ ಸಂಗದ ಕಟ್ಟಡ ತೆರವು ಆಗುತ್ತದೆ. ಆ ವೇಳೆ ಸಂಘಕ್ಕೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕಿದೆ. ಸಂಘದ ಹೊಸ ಕೊಟ್ಟಡ ಕುಂಬ್ರ ಪೇಟೆಯ ಆಸುಪಾಸಿನಲ್ಲಿ ನಿರ್ಮಾಣ ಮಾಡಬೇಕಿದೆ. ಹೊಸ ಜಾಗ ಖರೀದಿಸುವ ವಿಚಾರವನ್ನು ಸಭೆ ಮುಂದಿಟ್ಟರು. ಸಭೆಯಲ್ಲಿದ್ದ ಸದಸ್ಯರು ಹೊಸ ಜಾಗ ಖರೀದಿ ಮಾಡಲು ಒಕ್ಕರೊಳಿನಿಂದ ಅನುಮೋದಿಸಿದ್ದು ಹೊಸ ಜಾಗ ಖರೀದಿ ಮಾಡುವುದೆಂದು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು. ಸದಸ್ಯರು ಸಂಘದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಮತ್ತು ಉತ್ತಮ ಗುಣಮಟ್ಟದ ಹಾಲು ನೀಡುವ ಮೂಲಕ ಸಂಘವನ್ನು ಅಭಿವೃದ್ದಿಪಡಿಸುವಲ್ಲಿ ಎಲ್ಲರೂ ಕೈಜೋಡಿಸುವುದು ಮತ್ತು ಪಾಲು ಬಂಡವಾಳವನ್ನು ಹೆಚ್ಚು ಮಾಡಿ ಸಂಘದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವಂತೆ ಸಭೆಯಲ್ಲಿ ಕೇಳಿಕೊಂಡಿದ್ದು ಇದಕ್ಕೆ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು.

ಗುಣಮಟ್ಟದ ಹಾಲನ್ನು ನೀಡುವಂತಾಗಬೇಕು: ನಾಗೇಶ್
ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ ಹಾಲಿಗೆ ೬ ಗಂಟೆಯ ಅವಧಿಯ ಆಯುಷ್ಯವಿದೆ. ಹಾಲು ಹಾಳಾಗದಂತೆ ಎಲ್ಲರೂ ಎಚ್ಚರವಹಿಸಬೇಕು. ಗುಣಮಟ್ಟದ ಹಾಲು ನೀಡುವಲ್ಲಿ ಪ್ರತೀಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು. ಸಭೆಗೆ ಬಾರದ ಸದಸ್ಯರನ್ನು ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಕೇಳಿಕೊಳ್ಳಬೇಕು. ಸಭೆಗೆ ಹಾಜರಾಗದೇ ಇರುವ ಅನೇಕ ಮಂದಿ ಸದಸ್ಯರು ಸಂಘದಲ್ಲಿರುವುದು ಸರಿಯಲ್ಲ, ಇದರಿಂದ ಸಂಘದ ಅಭಿವೃದ್ದಿಗೆ ತೊಂದರೆಯಾಗುತ್ತದೆ ಎಂದುಯ ಹೇಳಿದರು.ಪಾಲು ಬಂಡವಾಳವನ್ನು ಹೆಚ್ಚಿಸುವ ಮೂಲಕ ಸಂಘಕ್ಕೆ ಆರ್ಥಿಕ ಪುನಶ್ಚೇತನ ನೀಡಬೇಕು ಎಂದು ಮನವಿ ಮಾಡಿದರು.

ಒಕ್ಕೂಟದ ಪಶುವೈಧ್ಯಾಧಿಕಾರಿ ಡಾ. ಅನುದೀಪ್ ಮಾತನಾಡಿ ಹಾಲು ಕರೆಯುವ ದನಗಳು ಮತ್ತು ಕರುಗಳಿಗೆ ನೀಡಬೇಕಾದ ಆಹಾರಗಳ ಬಗ್ಗೆ ಮಾಹಿತಿ ನೀಡಿದರು. ದನ ಹೆಚ್ಚು ಹಾಲು ನೀಡಬೇಕಾದಲ್ಲಿ ನಾವು ಏನು ಮಾಡಬೇಕು ಮತ್ತು ಅವುಗಳಿಗೆ ಯಾವ ರೀತಿಯ ಪಶು ಆಹಾರ ಮತ್ತು ಹುಲ್ಲು, ನೀರನ್ನು ಯಾವ ರೀತಿಯಲ್ಲಿ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ಕೆ. ಶೇಖರ್ ರೈಯವರು ವಾರ್ಷಿಕ ವರದಿಯನ್ನು ಓದಿದರು. ಸಹಾಯಕಿ ನಳಿನಿ ರೈ, ಹಾಲು ಪರೀಕ್ಷಕಿ ಸುಷ್ಮಾ ಕುಮಾರಿಯವರು ವಾರ್ಷಿಕ ವರದಿ ಮಂಡಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ, ನಿರ್ದೇಶಕರಾದ ಸೋಮಪ್ಪಪೂಜಾರಿ, ಮೋಹನ್‌ದಾಸ್ ರೈ ಕೆ , ಕೆ ದಿನೇಶ್ ರೈ, ಕೆ.ವಸಂತ ಶೆಟ್ಟಿ, ವಾರಿಜಾಕ್ಷಿ ಪಿ ಶೆಟ್ಟಿ, ಅದ್ದಯಾನೆ ಅದ್ರಾಮ, ಕರುಣಾಕರ ಶೇನವ ಉಪಸ್ತಿತರಿದ್ದರು. ನಿರ್ದೇಶಕರಾದ ಚಂಧ್ರಶೇಖರ ಎಂ ವಂದಿಸಿದರು.ಸಿಬಂದಿಗಳಾದ ನಳಿನಿ ರೈ, ಸುಷ್ಮಾಕುಮಾರಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here