ಪುತ್ತೂರಿನ ನೂತನ ತಹಶೀಲ್ದಾರ್ ನಿಸರ್ಗಪ್ರಿಯ ಈ ವಾರದಲ್ಲಿ ಕರ್ತವ್ಯಕ್ಕೆ ಹಾಜರು

0

ಪುತ್ತೂರು: ಕಳೆದ ಎರಡು ವರ್ಷಗಳಿಂದ ಪುತ್ತೂರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಟಿ.ರಮೇಶ್ ಬಾಬುರವರಿಗೆ ವರ್ಗಾವಣೆಯಾಗಲಿರುವ ಹಿನ್ನೆಲೆಯಲ್ಲಿ ನೂತನ ತಹಶೀಲ್ದಾರ್ ನಿಸರ್ಗಪ್ರಿಯರವರು ಈ ವಾರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.


ರಮೇಶ್ ಬಾಬುರವರು ಪುತ್ತೂರಿನಿಂದ ವರ್ಗಾವಣೆಯಾಗುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಆದೇಶ ಇನ್ನಷ್ಟೇ ಆಗಬೇಕಿದೆ. ರಮೇಶ್ ರವರ ವರ್ಗಾವಣೆಯಿಂದ ತೆರವಾಗಲಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಮತ್ತು ದಂಡಾಧಿಕಾರಿ ಹುದ್ದೆಗೆ ಮೈಸೂರಿನವರಾಗಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ನಿಸರ್ಗಪ್ರಿಯ ಜೆ.ರವರು ಆಗಮಿಸಲಿದ್ದಾರೆ. 2015ರ ಬ್ಯಾಚಿನ ಕೆ.ಎ.ಎಸ್.ಅಧಿಕಾರಿಯಾಗಿರುವ ನಿಸರ್ಗಪ್ರಿಯರವರು ಕೋವಿಡ್ ನಿರ್ವಹಣಾ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ದ.ಕ.ಜಿಲ್ಲಾಧಿಕಾರಿಯವರ ಕಛೇರಿಯ ಶಿಷ್ಟಾಚಾರ ವಿಭಾಗದ ತಹಶೀಲ್ದಾರ್ ಆಗಿದ್ದಾರೆ.

LEAVE A REPLY

Please enter your comment!
Please enter your name here