ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 580 ಅಂಕ ಪಡೆದ ವಿದ್ಯಾರ್ಥಿ ಜೀವಿತರಿಗೆ ಕೊಳ್ನಾಡು ಬಿಜೆಪಿ ವತಿಯಿಂದ ಗೌರವಾರ್ಪಣೆ

0

ವಿಟ್ಲ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಳಾಲು ನರ್ಕಳ ನಿವಾಸಿ ಬಿಜೆಪಿ ಕುಳಾಲ್ ಬೂತ್ ಅಧ್ಯಕ್ಷ ಚೆನ್ನಪ್ಪ ಗೌಡ – ಕುಶಾಲರವರ ಪುತ್ರಿ ವಿಟ್ಲ ವಿಠ್ಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜೀವಿತ ರವರು ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ 580 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ತೇರ್ಗಡೆ ಹೊಂದಿದ್ದಾರೆ. ಅವರನ್ನು ಕೊಳ್ನಾಡು ಬಿಜೆಪಿ ವತಿಯಿಂದ ಅವರ ಮನೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೊಳ್ನಾಡು ಬಿಜೆಪಿ ಪ್ರಮುಖರಾದ ಬಾಲಕೃಷ್ಣ ಸೆರ್ಕಳ, ಕೊಳ್ನಾಡು ಬಿಜೆಪಿ ಸಂಚಾಲಕರು, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಮ್ ಹೆಗ್ಡೆ ಕುದ್ರಿಯ, ನಿವೃತ ಯೋಧರೂ, ಬಿಜೆಪಿ ಪ್ರಮುಖರೂ ಆದ ಅಗರಿ ವಿಠ್ಠಲ ಶೆಟ್ಟಿ ದಂಪತಿಗಳು, ಬಿಜೆಪಿ ಬಂಟ್ವಾಳ ಉಪಾಧ್ಯಕ್ಷರೂ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಅಗರಿ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರೂ, ಬಿಜೆಪಿ ಕೊಳ್ನಾಡು ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಹಿತ್ ಅಗರಿ, ಕುಳಾಲು 221ನೇ ಬೂತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಮಡ್ಯಲಮಾರು, ಕುಳಾಲು 222ನೇ ಬೂತ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ನಾಯ್ಕ್ ಕುಂಟ್ರಕಲ, ಬಿಜೆಪಿ ಪ್ರಮುಖರಾದ ಶಶಿಧರ್ ರೈ ಕುಳಾಲು, ಶೀನ ಗೌಡ ಬಂಡಮುಗೇರು, ಚಂದ್ರಹಾಸ ಶೆಟ್ಟಿ ಪಟ್ಲಕೋಡಿ, ರಘುನಾಥ ಆಳ್ವ ಪಟ್ಲಕೋಡಿ, ವೇಣುಗೋಪಾಲ ಆಚಾರ್ಯ ಮಂಕುಡೆ, ತಿಮ್ಮಪ್ಪ ನಾಯ್ಕ ಕಾನ, ಕೊಳ್ನಾಡು ಯುವಮೋರ್ಚಾ ಸಂಚಾಲಕರಾದ ಸುಜೀತ್ ಕುದ್ರಿಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here