ಉಪ್ಪಿನಂಗಡಿ: ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡದಿಂದ ಅಪಾಯಕಾರಿ ಮರದ ಗೆಲ್ಲುಗಳ ತೆರವು

0

ಉಪ್ಪಿನಂಗಡಿ: ಇಲ್ಲಿನ ಲಕ್ಷ್ಮೀನಗರ ಪರಿಸರದಲ್ಲಿದ್ದ ಅಪಾಯಕಾರಿಯಾಗಿ ಮರದ ಗೆಲ್ಲುಗಳು ರಸ್ತೆಗೆ ವಾಲಿಕೊಂಡಿದ್ದು ಇದು ಪಾದಚಾರಿಗಳು ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಸ್ಥಳೀಯರು ಪುತ್ತೂರು ತಹಶೀಲ್ದಾರ್‌ರವರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ತಹಶೀಲ್ದಾರ್ ಸೂಚನೆಯಂತೆ ಉಪ್ಪಿನಂಗಡಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡ ಅಪಾಯಕಾರಿ ಮರದ ಗೆಲ್ಲುಗಳನ್ನು ಮರಕತ್ತರಿಸುವ ಯಂತ್ರ ಬಳಸಿ ತೆರವುಗೊಳಿಸಿದರು. ಮರ ತೆರವು ಕಾರ್ಯದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್, ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ಅಣ್ಣು.ಬಿ,ಗೃಹರಕ್ಷಕರಾದ ಸೋಮನಾಥ್, ಸಮದ್, ಪ್ರಶಾಂತ್ ಸಂದರ್ಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ತಾಲೂಕು ಕಚೇರಿ ಸಿಬ್ಬಂದಿ ಸುನೀಲ್ ಹಾಗೂ ಸದಸ್ಯ ಸಣ್ಣಣ್ಣ, ಸ್ಥಳೀಯ ಶಾಮು ಸ್ಥಳದಲ್ಲಿ ಇದ್ದು ಸಹಕರಿಸಿದರು. ಲಕ್ಷ್ಮೀ ನಗರ ಅಪಾಯಕಾರಿ ಮರದ ಗೆಲ್ಲುಗಳ ತೆರವು ಬಗ್ಗೆ ಮೊನ್ನೆ ನಡೆದ ಪ್ರವಾಹ ಮುಂಜಾಗ್ರತಾ ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಪ್ರಸ್ತಾಪಿಸಿ ತೆರವುಗೊಳಿಸಲು ಆಗ್ರಹಿಸಿದ್ದರು.

LEAVE A REPLY

Please enter your comment!
Please enter your name here