1 ಗ್ರಾಂ ಗೋಲ್ಡ್, ಫ್ಯಾನ್ಸಿ ಐಟಂಗಳ ಮಳಿಗೆ ‘ಫ್ಯಾನ್ಸಿ ಪ್ಯಾಲೇಸ್’ ಕಲ್ಲಾರೆಯಲ್ಲಿ ಶುಭಾರಂಭ

0

  • ದರ್ಬೆ ಭಾಗದಲ್ಲಿ ಹೆಚ್ಚು ಉದ್ಯಮಗಳು ಪ್ರಾರಂಭಗೊಳ್ಳುತ್ತಿದೆ-ಮಹಮ್ಮದಾಲಿ
  • ಕಲ್ಲಾರೆ ಭಾಗಕ್ಕೆ ಫ್ಯಾನ್ಸಿ ಮಳಿಗೆಯ ಅವಶ್ಯಕತೆಯಿತ್ತು-ತಾರನಾಥ
  • ಪುತ್ತೂರಿನ ಸೌಂದರ್ಯಕ್ಕೆ ಇನ್ನಷ್ಟು ಮೆರುಗು-ಇಬ್ರಾಹಿಂ ಸಾಗರ್
  • ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲಿ-ಮುಸ್ತಫಾ ಫೈಝಿ

ಪುತ್ತೂರು: ಫ್ಯಾನ್ಸಿ ಐಟಂಗಳು ಹಾಗೂ 1 ಗ್ರಾಂ ಗೋಲ್ಡ್‌ನ ಮಳಿಗೆ ‘ಫ್ಯಾನ್ಸಿ ಪ್ಯಾಲೇಸ್’ ಕಲ್ಲಾರೆ ಬೆಳಿಯೂರು ದರ್ಬಾರ್ ಕಾಂಪ್ಲೆಕ್ಸ್‌ನಲ್ಲಿ ಜೂ.20ರಂದು ಶುಭಾರಂಭಗೊಂಡಿತು.

ಚಿತ್ರ: ಯೂಸುಫ್ ರೆಂಜಲಾಡಿ

ಕೂರ್ನಡ್ಕ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಚ್ ಖಾಸಿಂ ಹಾಜಿ ಉದ್ಘಾಟಿಸಿದರು. ಯೂಸುಫ್ ಫೈಝಿ ದುವಾ ನೆರವೇರಿಸಿದರು.
ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ದರ್ಬೆ, ಕಲ್ಲಾರೆ ಭಾಗದಲ್ಲಿ ಹೆಚ್ಚು ಉದ್ಯಮಗಳು ಪ್ರಾರಂಭಗೊಳ್ಳುತ್ತಿದ್ದು ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಇದು ವರದಾನವಾಗಿ ಪರಿಣಮಿಸಿದೆ ಎಂದು ಹೇಳಿ ಶುಭ ಹಾರೈಸಿದರು.

ಪದ್ಮಶ್ರೀ ಮೇಡಿಕಲ್ಸ್‌ನ ಮಾಲಕ ತಾರನಾಥ ಮಾತನಾಡಿ ಕಲ್ಲಾರೆ ಭಾಗಕ್ಕೆ ಅವಶ್ಯಕವಿದ್ದ ಫ್ಯಾನ್ಸಿ ಮಳಿಗೆಯನ್ನು ಹಮೀದ್‌ರವರು ಪ್ರಾರಂಭಿಸಿರುವುದು ಖುಷಿ ನೀಡಿದೆ ಎಂದು ಹೇಳಿದರು.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ ಕಲ್ಲಾರೆಯಲ್ಲಿ ಫ್ಯಾನ್ಸಿ ಪ್ಯಾಲೇಸ್ ಶುಭಾರಂಭಗೊಂಡಿರುವುದರಿಂದ ಪುತ್ತೂರಿನ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ಬಂದಿದೆ ಎಂದು ಹೇಳಿ ಶುಭ ಹಾರೈಸಿದರು.

ಮುಸ್ತಫಾ ಫೈಝಿ ಮಾತನಾಡಿ ಇಲ್ಲಿ ಶುಭಾರಂಭಗೊಂಡಿರುವ ಫ್ಯಾನ್ಸಿ ಶಾಪ್‌ನಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ದರ್ಬೆ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಹನೀಫಿ, ಉದ್ಯಮಿ ಯಹ್ಯಾ ಕೂರ್ನಡ್ಕ, ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ, ಕಿಡ್ಸ್ ಮಳಿಗೆಯ ಶರೀಫ್, ಹಮೀದ್ ರೋಯಲ್, ಫಾರೂಕ್ ಶೈನ್, ಕುಟ್ಟಿ ಪೂಜಾರಿ ಪದ್ಯಾನ, ಸ್ಪಂದನ ಕನ್‌ಸ್ಟ್ರಕ್ಷನ್‌ನ ಮಹಮ್ಮದ್ ಅಶ್ರಫ್, ಹ್ಯಾಬಿಟೂಡ್ ಡ್ರೆಸ್ ಮಳಿಗೆಯ ಶಾಕಿರ್, ಬೀಡಿ ಉದ್ಯಮಿ ಮಹಮ್ಮದ್ ಕೂರ್ನಡ್ಕ, ಕಮ್ಯುನಿಟಿ ಸೆಂಟರ್‌ನ ಹನೀಫ್, ಸಿದ್ದೀಕ್ ಬೀಟಿಗೆ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಎಸ್‌ಡಿಪಿಐ ಮುಖಂಡ ಸಿದ್ದೀಕ್ ಕೆ.ಎ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ನಾಝಿಮ್ ಉಪ್ಪಿನಂಗಡಿ, ಅಲ್ತಾಫ್ ವಿಟ್ಲ ಹಾಗೂ ರಾಝಿಕ್ ಗೋಳಿಕಟ್ಟೆ ಸಹಕರಿಸಿದರು. ಅತಿಥಿಗಳನ್ನು ಸತ್ಕರಿಸಿದ ಫ್ಯಾನ್ಸಿ ಪ್ಯಾಲೇಸ್‌ನ ಮಾಲಕರಾದ ಅಬ್ದುಲ್ ಹಮೀದ್ ಮಾತನಾಡಿ ನಮ್ಮಲ್ಲಿ ಎಲ್ಲಾ ವಿಧದ ಫ್ಯಾನ್ಸಿ ಐಟಂಗಳು, ವಿವಿಧ ರೀತಿಯ ೧ ಗ್ರಾಂ ಗೋಲ್ಡ್ ಲಭ್ಯವಿದ್ದು ಗ್ರಾಹಕರು ಸಹಕರಿಸಬೇಕೆಂದು ವಿನಂತಿಸಿದರು.

LEAVE A REPLY

Please enter your comment!
Please enter your name here