ಪಟ್ಟೆ ಸೀನಿಯರ್ ರಾಷ್ಟ್ರೀಯ ತ್ರೋಬಾಲ್ ತರಬೇತಿ ಶಿಬಿರ ಸಮಾರೋಪ

0

ಬಡಗನ್ನೂರು: ತ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ರಾಜ್ಯ ತಂಡದ 45 ನೇ ಸೀನಿಯರ್ ರಾಷ್ಟ್ರೀಯ ತ್ರೋಬಾಲ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಜೂ 21 ರಂದು ಪಟ್ಟೆ  ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಿತು.

ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೇಣುಗೋಪಾಲ್ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಈ  ನಮ್ಮ ಕ್ರೀಡಾಂಗಣ  ರಾಜ್ಯ ರಾಷ್ಟ್ರ  ಮಟ್ಟದಲ್ಲಿ ಭಾಗವಹಿಸಿ ಹೆಸರು ಗಳಿಸಿದ ಹಿನ್ನೆಲೆ ಇದೆ.  ಒಂದು ವಾರದ ತನಕ ತರಬೇತಿ ಪಡೆದ್ದೀರಾ ಮುಂದೆ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ಪಂದ್ಯಾವಳಿ ಭಾಗವಹಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಪಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಪಿ. ನಾರಾಯಣ ಭಟ್ ಬೀರ್ನೋಡಿ  ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೊಂಬೆಟ್ಟು ಸರ್ಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾ ಮಣಿ ಹಾಗೂ ಯುವಜನ ಸೇವಾ ಕ್ರೀಡಾಧಿಕಾರಿ  ಬೀರವು ಶ್ರೀಕಾಂತ್ ಮಾತನಾಡಿ ಶುಭ ಹಾರೈಸಿದರು. ಗ್ರಾ.ಪಂ ಸದಸ್ಯರಾದ ಲಿಂಗಪ್ಪ ಗೌಡ ಮೋಡಿಕೆ, ದಮಯಂತಿ ನೆಕ್ಕರೆ, ಸಚಿನ್ ರೈ ಪಾಪೆಮಜಲು, ನಿವೃತ್ತ ಮುಖ್ಯ ಶಿಕ್ಷಕ ವೈಕೆ ನಾಯ್ಕ ಪಟ್ಟೆ ಉಪಸ್ಥಿತರಿದ್ದರು.
 
ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ, ಸಹ ಶಿಕ್ಷಕರಾದ ಭವಿತ, ಜಯಶ್ರೀ, ಪ್ರೀತಿ, ವಿಠ್ಠಲ ಸುವರ್ಣ, ಗೌರವ ಶಿಕ್ಷಕಿ ಶ್ರೀಲತಾ ಹಾಗೂ ತರಬೇತು ಕ್ರೀಡಾಪಟುಗಳು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ರಾಜಗೋಪಾಲ್ ಸ್ವಾಗತಿಸಿ,  ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ವಂದಿಸಿದರು. ಪ್ರತಿಭಾ ಪ್ರೌಢ ಶಾಲೆಯ ಶಿಕ್ಷಕ ವಿಶ್ವನಾಥ ಬೊಳ್ಳಾಡಿ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ
ಕೊಂಬೆಟ್ಟು ಸರ್ಕಾರಿ ಪದವಿ ಕಾಲೇಜಿ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾ ಮಣಿ ಹಾಗೂ ಯುವಜನ ಸೇವಾ ಕ್ರೀಡಾಧಿಕಾರಿ  ಬೀರವು ಶ್ರೀಕಾಂತ್ ಹಾಗೂ ಇಬ್ಬರು ಕ್ರೀಡಾಪಟುಗಳಿಗೆ  ಶಾಲು ಹೊದಿಸಿ  ಪೇಟ ಧರಿಸಿ ಫಲಪುಷ್ಪ ಸ್ಮರಣಿಕೆ ನೀಡಿ  ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here