ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನಲ್ಲಿ ಯೋಗ ದಿನಾಚರಣೆ

0

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪೂರ್ವ ಕಾಲೇಜಿನಲ್ಲಿ ಪತಂಜಲಿ ಮಂತ್ರದೊಂದಿಗೆ ಯೋಗ ದಿನಾಚರಣೆ ಅಂಗವಾಗಿ ಜೂ.21ರಂದು ಯೋಗಾಭ್ಯಾಸ ನಡೆಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವಿದ್ಯಾಲಯದ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಂದ ಜೂ.6ರಿಂದ 20ರ ತನಕ ಸಂಸ್ಥೆಯಲ್ಲಿ ಉಚಿತವಾಗಿ ಯೋಗ ಶಿಬಿರ ನಡೆಯಿತು. ಈ ಕಾರ್ಯಕ್ರಮದ ಭಾಗವಾಗಿ ಯೋಗ ದಿನಾಚರಣೆಯೊಂದಿಗೆ ಬೆಥನಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಇಂಡಿಯನ್ ಯೋಗ ಬುಕ್‌ನಲ್ಲಿ ದಾಖಲೆ ಮಾಡಿರುವ ಆರಾಧ್ಯರವರಿಂದ ಯೋಗ ಪ್ರದರ್ಶನ ನಡೆಯಿತು. ಪ್ರಕೃತಿ ವಿದ್ಯಾಕೇಂದ್ರದ ವೈದ್ಯರಾದ ಡಾ.ಆಶಾ, ರೆ.ಫಾ. ಜೋಬ್ ಒಐಸಿ, ಡಾ.ಪವನ್, ಡಾ.ಕ್ಷಮ, ಡಾ.ಮೆಲ್ವಿನ್, ಡಾ. ಮಹೇಶ್, ಡಾ.ನಿಧಿ ಕಾರ್ಯಕ್ರಮ ನಡೆಸಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲ ರೆ.ಫಾ.ತೋಮಸ್ ಬಿಜಿಲಿ ಒಐಸಿ, ಕೋಶಾಧಿಕಾರಿ ರೆ.ಫಾ.ಸೈಮನ್ ಜೈಸನ್, ಬೆಥನಿ ಪದವಿ ಕಾಲೇಜಿನ ಉಪಪ್ರಾಂಶುಪಾಲ ಫಾ. ಜಿಜನ್ ಅಬ್ರಹಾಂ, ಬೆಥನಿ ಐಟಿಐಯ ಪ್ರಾಂಶುಪಾಲ ಸಜಿ ಕೆ.ತೋಮಸ್, ಬೆಥನಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ರಹಾಂ ಕೆ.ಪಿ., ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಬೆಥನಿ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here