ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಮೈಸೂರಿನಲ್ಲಿ ಪೊಲೀಸ್ ವಶಕ್ಕೆ-ಆರೋಪಿ ಮುನಾಸಿರ್‌ಗೆ ನ್ಯಾಯಾಂಗ ಬಂಧನ

0


ಉಪ್ಪಿನಂಗಡಿ: ಪೋಕ್ಸೋ ಪ್ರಕರಣದಡಿ ತಲೆಮರೆಸಿಕೊಂಡಿದ್ದ ಆರೋಪಿ ಕಲ್ಲೇರಿಯ ಮುನಾಸಿರ್(21ವ.) ಎಂಬಾತನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.
ಈತ ಕೆಲವು ದಿನಗಳ ಹಿಂದೆ ಅಪ್ರಾಪ್ತೆಯೋರ್ವಳನ್ನು ಕಾರಿನಲ್ಲಿ ಶಾಲೆಗೆ ಬಿಡುವ ನೆಪವೊಡ್ಡಿ ಉಪ್ಪಿನಂಗಡಿಯ ಲಾಡ್ಜ್‌ವೊಂದರಲ್ಲಿ ಅತ್ಯಾಚಾರವೆಸಗಿದ್ದ. ಈತನ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಉಪ್ಪಿನಂಗಡಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದು ಈತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here