ಕೊಯಿಲ ಆತೂರು ದೇವಸ್ಥಾನದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ರಾಮಕುಂಜ: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಗೌರವಾರ್ಪಣೆ ಮತ್ತು ಸನ್ಮಾನ ನಡೆಯಿತು.

ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದುಕೊಂಡ ಜೀವನ್ ಸಂಪ್ಯಾಡಿ(624), ಶಿಶಿರ್ ಎಸ್.ದೇವಾಡಿಗ ಕೆಮ್ಮಾರ(616), ಸಮೀಕ್ಷಾ ಪಾಣಿಗ(609), ತೇಜಸ್ವಿನಿ ಯು ವಳಕಡಮ(597)ರವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯದುಶ್ರೀ ಆನೆಗುಂಡಿ ಸನ್ಮಾನಿಸಿದರು. ಉತ್ತಮ ಸಾಧನೆ ಮಾಡಿದ 23 ವಿದ್ಯಾರ್ಥಿಗಳನ್ನು ಅರ್ಚಕ ವಿಷ್ಣುಮೂರ್ತಿ ಬಡಕ್ಕಿಲ್ಲಾಯ ಅಭಿನಂದಿಸಿದರು.

ಹಳೆನೇರೆಂಕಿ ಎರಟಾಡಿ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿನಾರಾಯಣ ಆಚಾರ್, ಭಜನಾ ಮಂಡಳಿಯ ಪ್ರಮುಖರಾದ ಪುರುಷೋತ್ತಮ, ಜನಾರ್ದನ ಕದ್ರ, ಶೇಖರ ಗೌಡ ಹಿರಿಂಜ, ಹೇಮಚಂದ್ರ ಕಟ್ಟಪುಣಿ, ಕಲ್ಕಾಡಿಯ ಪ್ರತಾಪ್‌ಚಂದ್ರ ಶೆಟ್ಟಿ ಮಂಗಳೂರು, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮುರಳಿಕೃಷ್ಣ ಬಡಿಲ, ಶ್ರೀರಾಮ ಕೆಮ್ಮಾರ, ವಿನಯ ರೈ ಕೊಯಿಲಪಟ್ಟೆ, ಮಾಜಿ ಸದಸ್ಯ ವಿನೋದರ ಗೌಡ ಮಾಳ, ಪ್ರಮುಖರಾದ ಶಶಿಕುಮಾರ್ ರೈ ಅಂಬಾ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಚೇತನ್ ಆನೆಗುಂಡಿ ಸ್ವಾಗತಿಸಿ, ನಿರೂಪಿಸಿದರು.

LEAVE A REPLY

Please enter your comment!
Please enter your name here