ಕೃಷ್ಣಾಪುರ ಮದರಸ ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ:ಎಸ್‌ಎಂಎ ಪುತ್ತೂರು ಈಸ್ಟ್ ಜಿಲ್ಲಾ ಸಮಿತಿ ಸಭೆಯಲ್ಲಿ ಖಂಡನೆ

0

ಪುತ್ತೂರು: ಎಸ್‌ಎಂಎ ಈಸ್ಟ್ ಜಿಲ್ಲೆಯ ವತಿಯಿಂದ ಎಸ್‌ಎಂಎ ಝೋನಲ್ ಪದಾಧಿಕಾರಿಗಳ ಸಂಗಮ ಪುತ್ತೂರು ಸುನ್ನಿ ಸೆಂಟರ್‌ನಲ್ಲಿ ನಡೆಯಿತು. ಕೃಷ್ಣಾಪುರ 6ನೇ ಬ್ಲಾಕ್ ಬದ್ರಿಯಾ ಮದರಸ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಕೃತ್ಯವನ್ನು ಸಭೆಯಲ್ಲಿ ಖಂಡಿಸಲಾಯಿತು. ದ.ಕ ಜಿಲ್ಲೆಯಲ್ಲಿ ಪದೇ ಪದೇ ಮಸೀದಿ, ಮದರಸ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಇಂಥ ಕೃತ್ಯಗಳು ನಡೆಯುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು ಎಂದು ಸಭೆ ಒತ್ತಾಯಿಸಿತು. ಜಿಲ್ಲಾಧ್ಯಕ್ಷರಾದ ಸೈಯದ್ ಸಾದತ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಉದ್ಘಾಟಿಸಿದರು.

ಎಸ್‌ಎಂಎ ರಾಜ್ಯ ಉಪಾಧ್ಯಕ್ಷ ಹಾಜಿ ಹಮೀದ್ ಕೊಡಂಗಾಯಿ ಮಾತನಾಡಿ ಮದರಸ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡನೀಯ. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಎಸ್‌ಎಂಎ ಬೆಳ್ಳಾರೆ ಝೋನಲ್ ಅಧ್ಯಕ್ಷ ಇಬ್ರಾಹಿಂ ಬೀಡು, ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, ಕೋಶಾಧಿಕಾರಿ ಅಬೂಬಕ್ಕರ್ ಹಾಜಿ ವಿಟ್ಲ, ಝೋನಲ್ ಕಾರ್ಯದರ್ಶಿ ಖಾಸಿಂ ಸಖಾಫಿ ಉಪ್ಪಿನಂಗಡಿ, ಝೋನಲ್ ಅಧ್ಯಕ್ಷ ಮುಹಮ್ಮದ್ ಹಾಜಿ, ಕಾರ್ಯದರ್ಶಿ ಮಜೀದ್ ಅಹ್ಸನಿ, ಕೋಶಾಧಿಕಾರಿ ರಮ್ಲಾನ್ ನೆಕ್ಕಿಲ್, ಉಜಿರೆ ಝೋನಲ್ ಅಧ್ಯಕ್ಷ ಹಮೀದ್ ಮುಂಡಾಜೆ, ಜಿಲ್ಲಾ ಉಪಾಧ್ಯಕ್ಷ ಇಸ್ಮಾಯಿಲ್ ಉಳ್ತೂರು, ಕಾರ್ಯದರ್ಶಿ ಮುಹಮ್ಮದ್ ಕಾಜೂರು ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಎಸ್‌ಎಂಎ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ರಫ್ ಹಿಮಮಿ ಉಜಿರೆ ಸ್ವಾಗತಿಸಿದರು. ಮುಹಮ್ಮದ್ ಬಶೀರ್ ಮದನಿ ಜಾರಿಗೆಬೈಲು ವಂದಿಸಿದರು.

LEAVE A REPLY

Please enter your comment!
Please enter your name here