ರಕ್ಷಕ-ಶಿಕ್ಷಕ ಸಮಿತಿ ರಚನೆ

0

  • ‘ಪೋಷಕರು ಶಾಲೆಯ ಅವಿಭಾಜ್ಯ ಅಂಗ’-ಶ್ರೀ ಕೃಷ್ಣ ಭಟ್


ಪುತ್ತೂರು:   2022-23ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಭೆಯು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಈ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಕ್ಷಕ-ಶಿಕ್ಷಕ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಶ್ರೀ ಕೃಷ್ಣ ಭಟ್ ಮಾತನಾಡಿ ‘ ಶಾಲಾ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ವವಾದುದು. ನಾವು ಯಾವುದೇ ಅಂಜಿಕೆಯಿಲ್ಲದೆ ಶಾಲಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ನುಡಿದರು .ಬಳಿಕ 2022-23ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ  ರಮೇಶ್, ಉಪಾಧ್ಯಕ್ಷರಾಗಿ  ಲವಿನಾಕ್ಷಿ ಹಾಗೂ ಖಜಾಂಜಿಯಾಗಿ  ಹರೀಶ್ ಆಯ್ಕೆಯಾದರು. ಸಮಿತಿ ಸದಸ್ಯರನ್ನಾಗಿ  ನಳಿನಾಕ್ಷಿ, ಶಶಿಕಲಾ, ಪ್ರೀತಿಕಲಾ, ಸತೀಶ್, ಗಣೇಶ್ ಪ್ರಸಾದ್ ರವರನ್ನು ನೇಮಿಸಲಾಯಿತು.

ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿ ರಕ್ಷಕ-ಶಿಕ್ಷಕ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರರವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ ವಸಂತ ಸುವರ್ಣ,ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ನಳಿನಿ ವಾಗ್ಲೆ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕ ರಾಮ ನಾಯ್ಕ್ ಎಂ ಹಾಗೂ ಧನ್ಯವಾದವನ್ನು ಶಿಕ್ಷಕ ಚಂದ್ರಶೇಖರ ಸುಳ್ಯಪದವು ಮತ್ತು ನಿರೂಪಣೆಯನ್ನು ಶಿಕ್ಷಕಿ ಪೂರ್ಣಿಮ ನೆರವೇರಿಸಿದರು.

LEAVE A REPLY

Please enter your comment!
Please enter your name here