ಸಾರೆಪುಣಿ ನೂತನ ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ

0

ಮದ್ರಸಗಳು ಊರಿನ ಭಾವೈಕ್ಯತಾ ಕೇಂದ್ರಗಳು: ಪುತ್ತೂರು ತಂಙಳ್

ಪುತ್ತೂರು; ಮದ್ರಸಗಳು ಭಾವೈಕ್ಯತಾ ಕೇಂದ್ರಗಳಾಗಿದ್ದು ಇಸ್ಲಾಮಿನ ಆಚಾರ, ವಿಚಾರ, ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುವ ವಿದ್ಯಾ ಕೇಂದ್ರವಾಗಿದೆ ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್‌ಪೂಕೋಯಾತಂಙಳ್ ಪುತ್ತೂರು ಹೇಳಿದರು.

ಅವರು ಜು.1 ರಂದು ಸಾರೆಪುಣಿ ದಾರುಲ್ ಉಲೂಂ ಮದ್ರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಒಂದು ಮಗು ಸಮಾಜದಲ್ಲಿ ಯಾವ ರೀತಿ ಬದುಕಬೇಕು, ಹಿರಿಯ, ಕಿರಿಯರಿಗೆ ಹೇಗೆ ಗೌರವ ಕೊಡಬೇಕು ಮತ್ತು ಊರಿನಲ್ಲಿ ಎಲ್ಲಾ ಸಮುದಾಯದ ಜನರ ಜೊತೆ ಹೇಗೆ ಸೌಹಾರ್ದಯುತವಾಗಿ ಬದುಕಬೇಕು ಎಂಬುದನ್ನು ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಕಲಿಸುವ ಕಾರ್ಯ ಮದ್ರಸಗಳಿಂದ ಆಗುತ್ತಿದ್ದು, ಶಿಕ್ಷಣ ಕೇಂದ್ರಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕಾಗಿರುವುದು ಈ ಕಾಲದ ಬೇಡಿಕೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮದ್ರಸ ನಿರ್ಮಾಣ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಗಟ್ಟಮನೆ, ಸಾರೆಪುಣಿ ಮದ್ರಸ ಕಮಿಟಿ ಅಧ್ಯಕ್ಷ ಎಸ್ ಎನ್ ಅಬ್ದುಲ್ಲ ಸಾರೆಪುಣಿ, ಉಪಾಧ್ಯಕ್ಷ ಇಬ್ರಾಹಿಂ ಕುಯ್ಯಾರ್, ಲೆಕ್ಕ ಪರಿಶೋಧಕ ಅರಬಿಕುಂಞಿ ಸಾರೆಪುಣಿ, ಕೋಶಾಧಿಕಾರಿ ಇಬ್ರಾಹಿಂ ಸಾರೆಪುಣಿ, ಜೊತೆ ಕಾರ್ಯದರ್ಶಿ ಉಸ್ಮಾನ್ ಸಾರೆಪುಣಿ, ಗೌರವ ಸಲಹೆಗಾರ ಅಬ್ಬಾಸ್ ಮದನಿ ಗಟ್ಟಮನೆ, ಹೈದರ್ ಗಟ್ಟಮನೆ, ಇಂಜಿನಿಯರ್ ಶಾಫಿ ಪಾಪೆತ್ತಡ್ಕ , ಜಮಾತ್ ಪ್ರಮುಖರಾದ ಇಕ್ಬಾಲ್ ಸಾರೆಪುಣಿ, ಇಸ್ಮಾಯಿಲ್ ಸಾರೆಪುಣಿ, ಲತೀಫ್ ಸಾರೆಪುಣಿ, ಅಬೂಬಕ್ಕರ್ ಸಾರೆಪುಣಿ, ಶಂಸುಲ್ ಉಲಮಾ ಯಂಗ್ ಮೆನ್ಸ್ ಕಾರ್ಯದರ್ಶಿ ಜಿ ಇಕ್ಬಾಲ್ ಸಾರೆಪುಣಿ, ಉಪಾಧ್ಯಕ್ಷ ತಾಜುದ್ದೀನ್ ಸಾರೆಪುಣಿ, ಹನೀಫ್ ಕೋಟ್ರಾಸ್, ಹುಸೈನ್ ಸಾರೆಪುಣಿ, ಅಶಿಫ್ ಸಾರೆಪುಣಿ, ಖಲಂದರ್ ಶರೀಫ್, ರಫೀಕ್, ಮದ್ರಸ ಅಧ್ಯಾಪಕ ಮಹಮ್ಮದ್ ಮುಸ್ಲಿಯಾರ್ ಮಾಡಾವು, ಶುಕೂರ್ ದಾರಿಮಿ ಸಾರೆಪುಣಿ, ಹಸೈನಾರ್ ಕುಯ್ಯಾರ್, ಅಬ್ದುಲ್ ರಹಿಮನ್ ಸಾರೆಪುಣಿ, ಸರ್ಪುದ್ದೀನ್ ಸಾರೆಪುಣಿ, ಮುಝಮ್ಮಿಲ್ ಸಾರೆಪುಣಿ, ಎಚ್. ಎಂ ಫಾಯಿಝ್ ಸಾರೆಪುನಿ, ಉನೈಸ್ ಸಾರೆಪುಣಿ, ಫಾಯಿಝ್ ಸಾರೆಪುಣಿ, ಸತ್ತಾರ್ ಸಾರೆಪುಣಿ ಮತ್ತಿತರರು ಉಪಸ್ತಿತರಿದ್ದರು.

ಸಾರೆಪುಣಿ ಮದ್ರಸ ಕಮಿಟಿ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ಸ್ವಾಗತಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಈಜಿಪ್ಟ್ ಗೆ ಝಿಯಾರತ್ ಯಾತ್ರೆ ತೆರಳುತ್ತಿರುವ ಪುತ್ತೂರು ತಂಙಳ್‌ರವರನ್ನು ಮದ್ರಸ ಕಮಿಟಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here