ಈಶ್ವರಮಂಗಲದಲ್ಲಿ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಸಲಹಾ ಸಮಿತಿ ಸಭೆ

0

ಪ್ರಗತಿಯ ಹಾದಿಯಲ್ಲಿ ಬಂಟಸಿರಿ ಸಹಕಾರ ಸಂಸ್ಥೆ- ಜಗನ್ನಾಥ ರೈ ಮಾದೋಡಿ

ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ಪ್ರಧಾನ ಕಚೇರಿ, ಅಲಂಕಾರು ಮತ್ತು ಈಶ್ವರಮಂಗಲದಲ್ಲಿ ಶಾಖೆಯನ್ನು ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಅತೀ ಶ್ರೀಘ್ರ ಸಂಸ್ಥೆಯ ಮತ್ತೊಂದು ಶಾಖೆಯನ್ನು ತೆರೆಯಲಾಗುವುದು ಎಂದು ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಹೇಳಿದರು.

ಅವರು ಸಂಘದ ಈಶ್ವರಮಂಗಲ ಶಾಖೆಯಲ್ಲಿ ನಡೆದ ಸಂಘದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಸಂಘವು ಅತ್ಯಂತ ವೇಗವಾಗಿ ಗ್ರಾಹಕರ ಅನುಕೂಲಕ್ಕೆ ಸಾಲದ ವ್ಯವಸ್ಥೆಯನ್ನು ಮಾಡುತ್ತಿದೆ. ಸಂಘದ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರುಗಳ ಸಹಕಾರದೊಂದಿಗೆ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಮತ್ತು ಶಾಖಾ ಮ್ಯಾನೇಜರ್ ಮತ್ತು ಸಿಬ್ಬಂದಿಗಳ ಪೂರ್ಣ ರೀತಿಯ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಕೊಂಡವೂರು ಉಪಸ್ಥಿತರಿದ್ದರು.

ಈಶ್ವರಮಂಗಲ ಶಾಖೆಯ ಸಲಹಾ ಸಮಿತಿ ಸದಸ್ಯರುಗಳ ಆಯ್ಕೆ:

ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಈಶ್ವರಮಂಗಲ ಶಾಖೆಯ ಸಲಹಾ ಸಮಿತಿ ಸದಸ್ಯರುಗಳಾಗಿ ಬಾಲಕೃಷ್ಣ ರೈ ಅರೆಪ್ಪಾಡಿ, ಗಂಗಾಧರ್ ರೈ ಸುಳ್ಯಪದವು, ಸುಭಾಶ್ಚಂದ್ರ ರೈ ಮೈರೋಳು, ಪ್ರವೀಣ್ ರೈ ಮೇನಾಲ, ಪ್ರವೀಣ್ ರೈ ಕರ್ನೂರು, ಶ್ರೀರಾಂ ಪಕ್ಕಳ ಕರ್ನೂರುಗುತ್ತು ಹಾಗೂ ರಮೇಶ್ ರೈ ಸಾಂತ್ಯರವರನ್ನು ಆಯ್ಕೆಮಾಡಲಾಯಿತು.

ಸಂಸ್ಥೆಯ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರು ಬಂಟಸಿರಿ ಸಹಕಾರಿ ಸಂಸ್ಥೆಯ ಪುತ್ತೂರು ಪ್ರಧಾನ ಕಚೇರಿ, ಅಲಂಕಾರು ಹಾಗೂ ಈಶ್ವರಮಂಗಲ ಶಾಖೆಯು ನಡೆದು ಬಂದ ದಾರಿ ಹಾಗೂ ಪ್ರಗತಿಯ ಬಗ್ಗೆ ವಿವರವಾಗಿ ತಿಳಿಸಿದರು. ಬಂಟಸಿರಿ ಈಶ್ವರಮಂಗಲ ಶಾಖಾ ಮೇನೇಜರ್ ಸುಮಂತ್ ರೈ ಸ್ವಾಗತಿಸಿ, ಶಾಖಾ ಸಿಬ್ಬಂದಿ ಐಶ್ವರ್ಯ ರೈ ವಂದಿಸಿದರು.

ಬಂಟಸಿರಿ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆ 

ಬಂಟಸಿರಿ ಸಹಕಾರ ಸಂಸ್ಥೆಯು ಪುತ್ತೂರಿನಲ್ಲಿ ಪ್ರಧಾನ ಕಚೇರಿ, ಕಡಬ ತಾಲೂಕಿನ ಅಲಂಕಾರು ಮತ್ತು ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಶಾಖಾ ಕಚೇರಿ ಹೊಂದಿದ್ದು, ಸಂಸ್ಥೆಯು ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಜನಮಾನಸದಲ್ಲಿ ಹೆಸರನ್ನು ಪಡೆದಿದೆ. ಸಂಸ್ಥೆಯ ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳ ಅವಿರತ ಮಾರ್ಗದರ್ಶನದೊಂದಿಗೆ ಸಂಸ್ಥೆಯು ಅಭಿವೃದ್ಧಿಯನ್ನು ಕಾಣುತ್ತಿದೆ. ಸತೀಶ್ ರೈ ನಡುಬೈಲುರವರು ಮುಖ್ಯಕಾರ‍್ಯನಿರ್ವಹಣಾಧಿಕಾರಿಯಾಗಿ ಬಂದ ಬಳಿಕ ಸಂಸ್ಥೆಯ ಪ್ರಗತಿಗಾಗಿ ಅತ್ಯಂತ ನಿಷ್ಠೆಯಿಂದ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬರುತ್ತಿರುವುದು ಸಂತೋಷದ ವಿಚಾರವಾಗಿದೆ.

ನುಳಿಯಾಲು ಜಗನ್ನಾಥ ರೈ ಮಾದೋಡಿ
ಅಧ್ಯಕ್ಷರು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ

LEAVE A REPLY

Please enter your comment!
Please enter your name here