ಸಹಕಾರಿ ರತ್ನ ಸವಣೂರು ಸೀತಾರಾಮ ರೈ, ಮುಖ್ಯ ಶಿಕ್ಷಕ ಕುಶಾಲಪ್ಪರಿಗೆ ಸನ್ಮಾನ

0

ಪುತ್ತೂರು: ರಾಜ್ಯ ‘ಸಹಕಾರಿ ರತ್ನ’ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ. ಸೀತಾರಾಮ ರೈ, ಸವಣೂರು ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕುದ್ಮಾರು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಕುಶಾಲಪ್ಪರವರಿಗೆ ಸವಣೂರು ಉನ್ನತ್ಮಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕವನ್ನು ಪಡೆದ ಶಾಲಾ ಹಿರಿಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ‍್ಯಕ್ರಮ ಸವಣೂರು ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ಜರಗಿತು.

ಸವಣೂರು ಪ್ರಾ.ಶಾಲೆಗೆ ಪೂರ್ಣ ಸಹಕಾರ- ಸವಣೂರು ಸೀತಾರಾಮ ರೈ:

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸವಣೂರು ಕೆ.ಸೀತಾರಾಮ ರೈಯವರು ಸವಣೂರು ಪ್ರಾಥಮಿಕ ಶಾಲೆಯ ಅಭಿವೃದ್ಧಿಯಲ್ಲಿ ತಾನು ಈ ಹಿಂದೆಯೂ ಸಹಕಾರವನ್ನು ನೀಡಿದ್ದು, ಮುಂದೆಯೂ ಪೂರ್ಣ ರೀತಿಯಲ್ಲಿ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.

ಶಾಲೆ ಮತ್ತಷ್ಟು ಅಭಿವೃದ್ಧಿ ಆಗಲಿ-ಕುಶಾಲಪ್ಪ:

ಮುಖ್ಯ ಗುರು ಕುಶಾಲಪ್ಪ ರವರು ಸನ್ಮಾನನ್ನು ಸ್ವೀಕರಿಸಿ, ಮಾತನಾಡಿ ಸವಣೂರು ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಽಯಲ್ಲಿ ಎಲ್ಲರೂ ಪೂರ್ಣ ರೀತಿಯ ಸಹಕಾರವನ್ನು ನೀಡಿದ್ದಾರೆ ಎಂದು ಸಂತಸವನ್ನು ವ್ಯಕ್ತಪಡಿಸಿ, ಈ ಶಾಲೆಯು ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಹೇಳಿದರು.

ಸವಣೂರು ಮತ್ತಷ್ಟು ಅಭಿವೃದ್ದಿ- ದಿನೇಶ್ ಮೆದು:

ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸವಣೂರು ಹಿ. ಪ್ರಾ.ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ ಶತಮಾನೋತ್ಸವವನ್ನು ಕಂಡಿರುವ ಸವಣೂರು ಶಾಲಾ ವಠಾರದಲ್ಲಿ ಸುಸಜ್ಜತವಾದ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗಲಿದ್ದು, ಈ ಕಾರ‍್ಯಕ್ಕೆ ಶಾಲೆಯವರು ಪೂರ್ಣ ರೀತಿಯ ಸಹಕಾರವನ್ನು ನೀಡಬೇಕು, ಸುಮಾರು ೪೦೦ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಸ್ಟೆಲ್ ಈ ಭಾಗದಲ್ಲಿ ಆಗುವುದರಿಂದ ಸವಣೂರು ಮತ್ತಷ್ಟು ಅಭಿವೃದ್ದಿ ಆಗಲಿದೆ ಎಂದರು. ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ಶಿಕ್ಷಕಿ ಆಶಾಲತಾರವರುಗಳು ಸನ್ಮಾನಿತರ ಬಗ್ಗೆ ಮಾತನಾಡಿದರು.

ಸವಣೂರು ಗ್ರಾ.ಪಂ,ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರರವರು ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್ ಹನೀ-, ಸವಣೂರು ಗ್ರಾ.ಪಂ, ಪ್ರಭಾರ ಪಿಡಿಓ ಮನ್ಮಥ ಅಜಿರಂಗಳರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಶಿಕ್ಷಕಿ ಆಶಾಲತಾ ವಂದಿಸಿದರು.ಶಾಲಾ ಮುಖ್ಯ ಗುರು ಬಾಲಕೃಷ್ಣ ಕಾರ‍್ಯಕ್ರಮ ನಿರೂಪಿಸಿದರು.

ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷರುಗಳಾದ ಶಿವರಾಮ ಗೌಡ ಮೆದು, ಚಂದ್ರಶೇಖರ್ ಮೆದು, ಪುಷ್ಪಾವತಿ ಕೇಕುಡೆ, ಸವಣೂರು ಸಿ.ಎ, ಬ್ಯಾಂಕ್ ಮುಖ್ಯಕಾರ‍್ಯನಿರ್ವಹಣಾಽಕಾರಿ ಚಂದ್ರಶೇಖರ್ ಪಿ, ಆಶ್ರಫ್ ಮಾಂತೂರು, ಪ್ರಜ್ವಲ್ ಕೆ.ಆರ್.ಕೋಡಿಬೈಲು, ಸವಣೂರು ಗ್ರಾ.ಪಂ, ಸದಸ್ಯರುಗಳಾದ ಚಂದ್ರಾವತಿ ಸುಣ್ಣಾಜೆ, ಇಂದಿರಾ ಬೇರಿಕೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಮಹಮ್ಮದ್ ಫೈಸಲ್ ಸಹಿತ ಶಾಲಾ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here