ಗೋಳಿತ್ತೊಟ್ಟು ಗ್ರಾ.ಪಂ.: ಕಪಾಟು, ಸಿಂಟೆಕ್ಸ್ ಟ್ಯಾಂಕ್ ವಿತರಣೆ

0

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ವಿಕಲಚೇತನರ ಅನುದಾನದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಕಪಾಟು ಹಾಗೂ ಎಸ್‌ಸಿ,ಎಸ್‌ಟಿ ಕುಟುಂಬಕ್ಕೆ ಸಿಂಟೆಕ್ಸ್ ಟ್ಯಾಂಕ್ ವಿತರಣೆ ಮಾಡಲಾಯಿತು.


ಗ್ರಾ.ಪಂ.ವ್ಯಾಪ್ತಿಯ ಸುಮಾರು 24ವಿಕಲಚೇತನ ಫಲಾನುಭವಿಗಳಿಗೆ ಕಪಾಟು ವಿತರಣೆ ಮಾಡಲಾಯಿತು. ನಾಲ್ವರು ಎಸ್‌ಸಿ, ಎಸ್‌ಟಿ ಕುಟುಂಬಕ್ಕೆ ಸಿಂಟೆಕ್ಸ್ ಟ್ಯಾಂಕ್ ವಿತರಣೆ ಮಾಡಲಾಯಿತು. ಸೌಲಭ್ಯ ವಿತರಿಸಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿಯವರು, ಸರಕಾರದ ಅನುದಾನದಲ್ಲಿ ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಫಲಾನುಭವಿಗಳು ಗ್ರಾ.ಪಂ.ನಿಂದ ದೊರೆತ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳುವಂತೆ ಹೇಳಿದರು. ಗ್ರಾ.ಪಂ.ಉಪಾಧ್ಯಕ್ಷೆ ಶೋಭಾಲತಾ ಕೋಲ್ಪೆ, ಸದಸ್ಯರಾದ ಶಿವಪ್ರಸಾದ್, ಬಾಬು ಪೂಜಾರಿ ಕಿನ್ಯಡ್ಕ, ಪದ್ಮನಾಭ, ಗುಲಾಬಿ, ಸವಿತಾ, ಶೃತಿ, ಜಾನಕಿ, ನೋಣಯ್ಯ ಗೌಡ, ವಿ.ಸಿ.ಜೋಸೆಫ್, ಪ್ರಜಲ, ಸಂಧ್ಯಾ, ವಾರಿಜಾಕ್ಷಿ, ಜೀವಿತಾ, ಬಾಲಕೃಷ್ಣ ಅಲೆಕ್ಕಿ, ಹೇಮಲತಾ ಉಪಸ್ಥಿತರಿದ್ದರು. ಪಿಡಿಒ ಜಗದೀಶ್ ನಾಯ್ಕ್ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು. ಸಿಬ್ಬಂದಿಗಳಾದ ಬಾಬು ನಾಯ್ಕ್, ಪುಷ್ಪಾಜಯಂತ್, ಯಶವಂತ, ದಿನೇಶ್, ಕೀರ್ತಿಕಾ ಸಹಕರಿಸಿದರು.

LEAVE A REPLY

Please enter your comment!
Please enter your name here