ರೋಟರಿ ಕ್ಲಬ್ ಪುತ್ತೂರು ಸಿಟಿ ಪದಪ್ರದಾನ

0

  • ದೇಶದಲ್ಲಿ ಪರ್‍ಯಾಯ ಸರಕಾರವಿದ್ರೆ ಅದು ರೋಟರಿ-ಸುರೇಶ್ ಚೆಂಗಪ್ಪ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

 

 

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಜಾತಿ-ಧರ್ಮ, ಸ್ಥಾನಮಾನ ಬಿಟ್ಟು ಜಾತ್ಯಾತೀತ ನೆಲೆಯಲ್ಲಿ ಸಮಾಜಮುಖಿ ಸೇವೆಯನ್ನು ನೀಡುತ್ತಾ ಬೆಳೆದು ಬಂದಿದೆ. ಆದ್ದರಿಂದ ಭಾರತ ದೇಶದಲ್ಲಿ ಪರ್‍ಯಾಯ ಸರಕಾರವೊಂದು ಇದ್ರೆ ಅದು ರೋಟರಿ ಸಂಸ್ಥೆಯಾಗಿದೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ ಎಂದು ರೋಟರಿ ಜಿಲ್ಲೆ 3181ಇದರ ಜಿಲ್ಲಾ ಸಲಹೆಗಾರ ಪಿಡಿಜಿ ಎಂ.ಎಂ ಸುರೇಶ್ ಚೆಂಗಪ್ಪರವರು ಹೇಳಿದರು.


ಜು.೫ ರಂದು ಪಡೀಲು ಎಂಡಿಎಸ್ ಟ್ರಿನಿಟಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಸಿಟಿಯ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾದಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿದರು. ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವಿದ್ದಾಗ ದೇವರು ಖಂಡಿತಾ ಅನುಗ್ರಹ ನೀಡುತ್ತಾನೆ. ಛಲದ ಜೊತೆಗೆ ನಾವು ಮಾಡುವ ಯಾವುದೇ ಸಮಾಜ ಸೇವೆಯು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಸೇವೆಯನ್ನು ಮಾಡಬೇಕಾಗಿದೆ. ರೋಟರಿ ಪದಾಧಿಕಾರಿಗಳು ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯ ಬಗ್ಗೆ ನಂಬಿಕೆಯನ್ನು ಗಳಿಸಿಕೊಳ್ಳುವುದರ ಜೊತೆಗೆ ಎಲ್ಲರನ್ನೂ ತೆಕ್ಕೆಗೆ ತೆಗೆದುಕೊಂಡು ವಿಶ್ವಾಸಭರಿತರಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಕ್ಲಬ್ ಯಶಸ್ವಿ ಎನಿಸಲಿದೆ ಎಂದರು.


ಗೌರವ ಅತಿಥಿ, ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಕಾರ್ಯದರ್ಶಿ(ಇವೆಂಟ್ಸ್) ಎಕೆಎಸ್ ಕೆ.ವಿಶ್ವಾಸ್ ಶೆಣೈ ಮಾತನಾಡಿ, ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಣೈ ನನ್ನ ಸಹೋದರನಾಗಿದ್ದು ಕ್ಲಬ್‌ನ್ನು ಉತ್ತುಂಗತೆಯತ್ತ ಮುನ್ನೆಡೆಸಬಲ್ಲ ಎಂಬ ವಿಶ್ವಾಸ ನನಗಿದೆ. ಎಲ್ಲರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ಕ್ಲಬ್ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಗಳು ಸ್ವ-ಹಿತ ಮೀರಿದ ಸೇವಾ ಭಾವನೆಯ ಜೊತೆಗೆ ಧೈರ್ಯ, ಭರವಸೆಯನ್ನು ಕಳೆದುಕೊಳ್ಳದಿರಲಿ, ಸಮಗ್ರತೆ ಹಾಗೂ ಸಕಾರಾತ್ಮಕತೆಯ ಯೋಜನೆಗಳು ಸಮಾಜದಲ್ಲಿ ಉತ್ತಮ ಪರಿಣಾಮವನ್ನು ಸೃಷ್ಟಿಸಲಿ ಎಂದು ಹೇಳಿ ಶುಭ ಹಾರೈಸಿದರು.


ರೋಟರಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯರವರು ಕ್ಲಬ್ ಬುಲೆಟಿನ್ `ರೋಟ ವಿಕಾಸ’ ಅನ್ನು ಅನಾವರಣಗೊಳಿಸಿ ಮಾತನಾಡಿ, ಪ್ರಸ್ತುತ ವರ್ಷದ ರೋಟರಿ ಧ್ಯೇಯವಾಕ್ಯವಾದ `ಇಮ್ಯಾಜಿನ್ ರೋಟರಿ’ ಸಂಪನ್ನಗೊಳ್ಳಬೇಕಾದರೆ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಸೇವೆಯನ್ನು ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ. ಪದ ಪ್ರದಾನ ದಿನವೇ ಅಧ್ಯಕ್ಷ ಪ್ರಶಾಂತ್ ಶೆಣೈಯವರು ಅತ್ತ್ಯುತ್ತಮ ಕಾರ್ಯಗಳೊಂದಿಗೆ ಭರ್ಜರಿ ಆರಂಭ ಒದಗಿಸಿದ್ದಾರೆ. ಜಿಲ್ಲಾಧ್ಯಕ್ಷರ ಜಿಲ್ಲಾ ಯೋಜನೆಗಳೆನಿಸಿದ ವನಸಿರಿ, ಜಲಸಿರಿ, ವಿದ್ಯಾಸಿರಿ ಹಾಗೂ ಆರೋಗ್ಯ ಸಿರಿಯತ್ತ ಸದಸ್ಯರು ಕಾರ್ಯೋನ್ಮುಖರಾಗಬೇಕಿದೆ ಎಂದರು.


ರೋಟರಿ ವಲಯ ಸೇನಾನಿ ಹಾಗೂ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಮಲ್ಲಾರ ಸ್ವಾಗತಿಸಿ ಮಾತನಾಡಿ, ನೂತನ ಅಧ್ಯಕ್ಷ ಪ್ರಶಾಂತ್ ಶೆಣೈಯವರ ನಾಯಕತ್ವದಲ್ಲಿ ೧೨ ಸದಸ್ಯರ ಸೇರ್ಪಡೆ ಕ್ಲಬ್‌ಗೆ ಬಲ ತಂದಿದೆ ಮಾತ್ರವಲ್ಲ ರೋಟರಿ ಕುಟುಂಬ ಸದಸ್ಯರ ಬಂಧುತ್ವ ಮತ್ತಷ್ಟು ಗಟ್ಟಿಗೊಳ್ಳಲಿದೆ. ಯುವ ಮತ್ತು ಶಕ್ತಿಯುತ ತಂಡ ಹೊಂದಿರುವ ನೂತನ ತಂಡ ಸಮಾಜಮುಖಿ ಕಾರ್ಯಗಳನ್ನು ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಬೆಳಗಲಿ ಎಂದರು.

ರೋಟರಿ ಕ್ಲಬ್ ಪುತ್ತೂರು ಸಿಟಿಯ ಮಾತೃಸಂಸ್ಥೆಯಾಗಿರುವ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ಮಾತನಾಡಿ, ನಿರ್ಗಮನ ಅಧ್ಯಕ್ಷ ಪ್ರಮೋದ್ ಮಲ್ಲಾರರವರ ಹೆಸರಲ್ಲೇ ಇದೆ `ಮಲ್ಲಾರ್’. ಅದರಂತೆ ಅವರು ಕೆಲಸಗಳನ್ನು ಮಾಡಿ ಕ್ಲಬ್‌ಗೆ ಪ್ಲಾಟಿನಂ ಫ್ಲಸ್ ಪ್ರಶಸ್ತಿಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೂತನ ಅಧ್ಯಕ್ಷ ಪ್ರಶಾಂತ್ ಶೆಣೈಯವರ ತಾಕತ್ ಏನು ಎಂದು ಅವರು ಪ್ರಸ್ತುತ ವರ್ಷ ತೋರಿಸಿಕೊಡಲಿದ್ದಾರೆ. ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ, ರೋಟರಿ ಧ್ಯೇಯ ವಾಕ್ಯವನ್ನು ಉಳಿಸೋಣ ಎಂದರು.

ಸಮಾಜಮುಖಿ ಕಾರ್ಯಗಳು:
ಆರೋಗ್ಯ ಸಿರಿ ಯೋಜನೆಯಡಿಯಲ್ಲಿ ಬೀರಮಲೆ ಪ್ರಜ್ಞಾ ಆಶ್ರಮಕ್ಕೆ ಅಧ್ಯಕ್ಷ ಕೆ.ಪ್ರಶಾಂತ್ ಶೆಣೈಯವರ ತಾಯಿ ಶ್ರೀಮತಿ ರತಿ ಶೆಣೈಯವರ ಪ್ರಾಯೋಜಕತ್ವದಲ್ಲಿ ರೂ.೧೭೪೦೦ ವೆಚ್ಚದ ಇನ್ವರ್ಟರ್ ಬ್ಯಾಟರಿ, ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಅಧ್ಯಕ್ಷ ಪ್ರಶಾಂತ್ ಶೆಣೈಯವರ ಸಹಪಾಠಿಗಳೂ, ವಿಕ್ಟರ್ ಆ.ಮಾ.ಶಾಲೆಯ ಹಿರಿಯ ವಿದ್ಯಾರ್ಥಿನಿಯರಾದ ಶೈಲಾ ನಾಯಕ್ ಹಾಗೂ ಚಿತ್ರ ನಾಯಕ್‌ರವರ ರೂ.೩೦ ಸಾವಿರ ಪ್ರಾಯೋಜಕತ್ವದಲ್ಲಿ ಎರಡು ನ್ಯಾಪ್ಕಿನ್ ಬರ್ನಿಂಗ್ ಮೆಶಿನ್, ದರ್ಬೆ ಸಾರ್ವಜನಿಕ ಶೌಚಾಲಯ ಹಾಗೂ ನಗರಸಭೆ ವ್ಯಾಪ್ತಿಯ ಕಿಲ್ಲೆ ಮೈದಾನದ ಸಾರ್ವಜನಿಕ ಶೌಚಾಲಯದಲ್ಲಿ ಅನುಕ್ರಮವಾಗಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಣೈಯವರ ಪತ್ನಿ ಅಕ್ಷತಾ ಪಿ.ಶೆಣೈ ಹಾಗೂ ಕಾರ್ಯದರ್ಶಿ ಜಯಗುರು ಆಚಾರ್‌ರವರ ತಲಾ ರೂ.೧೫ ಸಾವಿರ ಪ್ರಾಯೋಜಕತ್ವದಲ್ಲಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್ ಮತ್ತು ವಿದ್ಯಾಸಿರಿ ಯೋಜನೆಯಲ್ಲಿ ಪಿಡಿಜಿ ವಿನಾಯಕ ಕುಡ್ವರವರ ಪ್ರಾಯೋಜಕತ್ವದಲ್ಲಿ ರೂ.೧.೩ ಲಕ್ಷ ವೆಚ್ಚದ ಡ್ರೋನ್, ಕೆಮ್ಮಾರ ಸರಕಾರಿ ಶಾಲೆಯ ನವೀಕರಣ ಮತ್ತು ಪೇಂಯ್ಟಿಂಗ್‌ನ್ನು ರೋಟರಿ ಸಿಟಿ ಹಾಗೂ ಆರ್.ಸಿ ಉಪ್ಪಿನಂಗಡಿ ಜೊತೆಗೂಡಿ ರೂ.೪೦ ಸಾವಿರ ಮತ್ತು ಅಧ್ಯಕ್ಷ ಪ್ರಶಾಂತ್ ಶೆಣೈರವರ ಪ್ರಶಾಂತ್ ಎಂಟರ್‌ಪ್ರೈಸಸ್‌ರವರ ರೂ.೧೪ ಸಾವಿರ ಪ್ರಾಯೋಜಕತ್ವದಲ್ಲಿ ನೀಡಲಾಗಿದೆ. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರಾಮಚಂದ್ರ ಪುಚ್ಚೇರಿರವರು ಕಾರ್ಯಕ್ರಮ ನಿರ್ವಹಿಸಿದರು.

12 ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಕ್ಲಬ್‌ಗೆ ೧೨ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು, ಹೊಸ ಸದಸ್ಯರಾದ ದರ್ಬೆ ಕಾಮಾಕ್ಷಿ ಎಂಟರ್‌ಪ್ರೈಸಸ್‌ನ ಆನಂದ ಗೌಡ ಬಂಟ್ವಾಳ, ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಉದ್ಯಮಿ ಲಕ್ಷ್ಮೀಕಾಂತ್ ಬಲರಾಂ ಆಚಾರ್ಯ ಕೊಂಬೆಟ್ಟು, ನಿವೃತ್ತ ಲೆಕ್ಕಿಗ ಸುಬ್ರಹ್ಮಣ್ಯ ಹೆಬ್ಬಾರ್ ಕೆಮ್ಮಿಂಜೆ, ರೈಲ್ವೇ ಸ್ಟೇಷನ್ ರಸ್ತೆಯ ಮಂಜುಶ್ರೀ ಅಪಾರ್ಟ್‌ಮೆಂಟ್‌ನ ಸುಮಿತ್ ಕುಮಾರ್ ಯು, ಸಿವಿಲ್ ಇಂಜಿನಿಯರ್ ದಯಾನಂದ ಪೈ ಅಮ್ಮೆಂಬಳ ಪರ್ಲಡ್ಕ, ದರ್ಬೆ-ಬೈಪಾಸ್ ಹೊಟೇಲ್ ಅಶ್ವಿನಿಯ ಪಾಲುದಾರ ಅಶ್ವಿನ್ ರೈ ಎಸ್, ಎಸ್‌ಆರ್‌ಎಲ್ ಟ್ರೇಡರ್‍ಸ್‌ನ ಕೇದಾರ್ ನಾಮದೇವ್ ಪ್ರಭು, ಉಪ್ಪಿನಂಗಡಿ ಆಶ್ವಿನಿ ಅಸೋಸಿಯೇಟ್ಸ್‌ನ ಆಕಾಶ್ ಪಿ.ಬಿ, ರೋಟರಿ ಸಿಟಿ ಸದಸ್ಯ ದಿ.ಉದಯ ಶೆಟ್ಟಿಯವರ ಪತ್ನಿ ಲೀಡ್ಸ್ ಸುಪಾರಿಯ ಮಮತಾ ಉದಯ ಶೆಟ್ಟಿ, ಬೊಳ್ವಾರು ಸಾನ್ವಿ ಎಂಟರ್‌ಪ್ರೈಸಸ್‌ನ ಉಮೇಶ್ಚಂದ್ರ, ಹೆಗ್ಡೆ ಆರ್ಕೇಡ್‌ನಲ್ಲಿನ ಉದ್ಭವ್ ಕನ್‌ಸ್ಟ್ರಕ್ಷನ್ಸ್ ಆಂಡ್ ಇಂಟೀರಿಯರ್‍ಸ್‌ನ ಅನೀಶ್ ಬಡೆಕ್ಕಿಲರವರಿಗೆ ರೋಟರಿ ಜಿಲ್ಲಾ ಸಲಹೆಗಾರ ಪಿಡಿಜಿ ಸುರೇಶ್ ಚೆಂಗಪ್ಪರವರು ಪ್ರಮಾಣಪತ್ರ ನೀಡಿ, ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಆನಂದ ಗೌಡರವರು ನೂತನ ಸದಸ್ಯರನ್ನು ಪರಿಚಯಿಸಿದರು.

ಜಿಲ್ಲಾ ಸಮಿತಿಗೆ ಅಭಿನಂದನೆ:
ಕ್ಲಬ್ ಸದಸ್ಯರಾಗಿದ್ದು, ಜಿಲ್ಲಾ ಸಮಿತಿಯಲ್ಲಿ ತೊಡಗಿಸಿಕೊಂಡಿರುವ ಪ್ರಮೋದ್ ಮಲ್ಲಾರ(ವಲಯ ಸೇನಾನಿ), ಸುರೇಂದ್ರ ಕಿಣಿ(ಮೆಂಬರ್‌ಶಿಪ್ ಚೇರ್‌ಮ್ಯಾನ್), ಡಾ.ಹರಿಕೃಷ್ಣ ಪಾಣಾಜೆ(ಸಿಗ್ನಿಫಿಕೆಂಟ್ ಅಚೀವ್‌ಮೆಂಟ್ ಅವಾರ್ಡ್ ಚೇರ್‌ಮ್ಯಾನ್), ಲಾರೆನ್ಸ್ ಗೊನ್ಸಾಲ್ವಿಸ್(ಪ್ರಾನಿಕ್ ಹೀಲಿಂಗ್ ಆಂಡ್ ಮೆಡಿಟೇಶನ್ ಚೇರ್‌ಮ್ಯಾನ್), ಡಾ.ಶಶಿಧರ್ ಕಜೆ(ಮೆಟರ್ನಲ್ ಆಂಡ್ ಚೈಲ್ಡ್ ಹೆಲ್ತ್ ಚೇರ್‌ಮ್ಯಾನ್), ಜಯಕುಮಾರ್ ರೈ ಎಂ.ಆರ್(ಡಿಸ್ಟ್ರಿಕ್ಟ್ ಕಾನ್ಫರೆನ್ಸ್ ವೈಸ್ ಚೇರ್‌ಮ್ಯಾನ್), ಜೋನ್ ಕುಟಿನ್ಹಾ(ಟೀಚರ್ ಟ್ರೈನಿಂಗ್ ವೈಸ್ ಚೇರ್‌ಮ್ಯಾನ್), ನಟೇಶ್ ಉಡುಪ(ಅಡಲ್ಟ್ ಎಜ್ಯುಕೇಶನ್ ವೈಸ್ ಚೇರ್‌ಮ್ಯಾನ್), ಮನೋಹರ್ ಕೆ(ಕನ್ಸೂಮರ್ ಅವೇರ್‌ನೆಸ್ ವೈಸ್ ಚೇರ್‌ಮ್ಯಾನ್), ಜೆರೋಮಿಯಸ್ ಪಾಸ್(ಸಿವಿಕ್ ರೆಸ್ಪಾನ್ಸಿಬಿಲಿಟಿ ವೈಸ್ ಚೇರ್‌ಮ್ಯಾನ್), ಕೃಷ್ಣಮೋಹನ್ ಪಿ.ಎಸ್(ಪ್ರೆಸಿಡೆನ್ಸಿಯಲ್ ಸೈಟೇಶನ್ ವೈಸ್ ಚೇರ್‌ಮ್ಯಾನ್), ಸ್ವಾತಿ ಮಲ್ಲಾರ(ಡಿಸ್ಟ್ರಿಕ್ಟ್ ಕಾನ್ಫರೆನ್ಸ್ ಪ್ರಮೋಷನ್ ಚೇರ್‌ಮ್ಯಾನ್-ವಲಯ ೪), ವಿಕ್ಟರ್ ಮಾರ್ಟಿಸ್(ಬ್ಲಡ್ ಡೊನೇಶನ್ ಕ್ಯಾಂಪೇನ್ ಕೋಆರ್ಡಿನೇಟರ್), ಪದ್ಮನಾಭ ಶೆಟ್ಟಿ(ಇಂಟರ್‍ಯಾಕ್ಟ್ ಕೋಆರ್ಡಿನೇಟರ್)ರವರನ್ನು ಈ ಸಂದರ್ಭದಲ್ಲಿ ಪಿಡಿಜಿ ಸುರೇಶ್ ಚೆಂಗಪ್ಪರವರು ಹೂ ನೀಡಿ ಅಭಿನಂದಿಸಿದರು.

ವಿದ್ಯಾರ್ಥಿವೇತನ/ಗೌರವ:
ಯೂತ್ ಸರ್ವಿಸ್‌ನಡಿಯಲ್ಲಿ ವಿದ್ಯಾಸಿರಿಯ ಯೋಜನೆಯಲ್ಲಿ ಪ್ರಥಮ ಪಿಯುಸಿಯ ಅಭಿಷೇಕ್ ಎಂಬ ವಿದ್ಯಾರ್ಥಿಗೆ ಆನೆಟ್ ಅಕ್ಷತಾ ಶೆಣೈಯವರ ಪ್ರಾಯೋಜಕತ್ವದಲ್ಲಿ ಒಂದು ವರ್ಷದ ಕಾಲೇಜು ಶುಲ್ಕ, ರೋಟರಿ ಭೀಷ್ಮ ಕೆ.ಆರ್ ಶೆಣೈಯವರ ಪ್ರಾಯೋಜಕತ್ವದಲ್ಲಿ ಐದನೇ ತರಗತಿಯ ಕಿಶನ್ ಶೆಣೈರವರಿಗೆ ರೂ.೬ ಸಾವಿರ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯರವರ ಪ್ರಾಯೋಜಕತ್ವದಲ್ಲಿ ಸರಕಾರಿ ಜ್ಯೂನಿಯರ್ ಕಾಲೇಜ್‌ನ ವಿದ್ಯಾರ್ಥಿಗಳಾದ ಮೇಘನಾ, ಸುಭಾಂಶು ಆಚಾರ್ಯ, ಮೋಕ್ಷ, ದೀಕ್ಷಿತಾ, ಜಯಲಕ್ಷ್ಮೀಯವರಿಗೆ ಕಾಲೇಜ್ ಶುಲ್ಕ ರೂ.೧೦ ಸಾವಿರರವರಿಗೆ ವಿದ್ಯಾರ್ಥಿವೇತನದ ಪುರಸ್ಕಾರ ನೀಡಲಾಯಿತು. ಅದರಂತೆ ಕ್ಲಬ್ ಸದಸ್ಯರ ಮಕ್ಕಳಾದ ಸುಧಾಕರ್ ಶೆಟ್ಟಿಯವರ ಪುತ್ರಿ ಸಮೃದ್ಧಿ ಶೆಟ್ಟಿ(ಎಸೆಸ್ಸೆಲ್ಸಿ ೫೭೭ ಅಂಕ), ಹರಿಣಿ ಸತೀಶ್‌ರವರ ಪುತ್ರಿ ಸಂಜನಾ ಎಸ್(ಎಸೆಸ್ಸೆಲ್ಸಿ ೬೧೦ ಅಂಕ), ಕಿರಣ್ ಬಿ.ವಿರವರ ಪುತ್ರಿ ಶ್ರೇಯಾ ಬಿ(ಎಸೆಸ್ಸೆಲ್ಸಿ ೭೭.೭%), ಅಬ್ದುಲ್ ರಹಿಮಾನ್‌ರವರ ಪುತ್ರಿ ಹಲೀಮಾ(ಎಸೆಸ್ಸೆಲ್ಸಿ ೭೫%)ರವರಿಗೆ ಹೂ ನೀಡಿ ಗೌರವಿಸಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ಇಜಾಜ್ ಅಹಮದ್‌ರವರು ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಭಾ ಪುರಸ್ಕಾರ:
ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನ ಸಂಸ್ಕೃತ ಉಪನ್ಯಾಸಕ, ಕ್ಲಬ್ ಸದಸ್ಯರೂ ಆಗಿರುವ ಪ್ರಕಾಶ್ ಕೆ.ವಿರವರು ರೂ.೨೦ ಸಾವಿರ ಪ್ರಾಯೋಜಕತ್ವದಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯ ಸಂಸ್ಕೃತದಲ್ಲಿ ಉತ್ತಮ ಅಂಕ ಗಳಿಸಿದ ಪ್ರಜ್ಞಾ, ರಕ್ಷಿತಾ, ದೀಪ್ತಿ(ಸಂಸ್ಕೃತದಲ್ಲಿ ೧೦೦ ಅಂಕ), ಲಾವಣ್ಯ, ಅಶ್ವಿನಿ, ಪಲ್ಲವಿ, ಅಶ್ವಿನಿ ಎಂ(೯೯ ಅಂಕ), ಚೈತನ್ಯ(೯೮ ಅಂಕ), ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿಜ್ಞಾನ ವಿಭಾಗದಲ್ಲಿ ಪವನ್ ಕುಮಾರ್(೫೪೯ ಅಂಕ), ಅಶ್ವಿನಿ(೫೪೫), ದೀಕ್ಷಾ(೫೪೫), ಶರೀನಾ ನಾಕ್(೫೧೪), ಶ್ರೇಯಾ(೫೧೧), ವಾಣಿಜ್ಯ ವಿಭಾಗದ ಮೇಘನಾ(೫೮೨ ಅಂಕ), ಕಲಾ ವಿಭಾಗದ ಚೇತನಾ(೫೫೦ ಅಂಕ)ರವರುಗಳಿಗೆ ಈ ಸಂದರ್ಭದಲ್ಲಿ ಮೊತ್ತವನ್ನು ಹಂಚಿ ಪುರಸ್ಕಾರ ಮಾಡಲಾಯಿತು.

ಪಿಎಚ್‌ಎಫ್ ಗೌರವ:
ಇಂಟರ್‌ನ್ಯಾಷನಲ್ ಸರ್ವಿಸ್ ವತಿಯಿಂದ ಪಿಎಚ್‌ಎಫ್-೮ಗೆ ಭಾಜನರಾದ ಸುರೇಂದ್ರ ಕಿಣಿ, ಪಿಎಚ್‌ಎಫ್-೧ ಭಾಜನರಾದ ಪ್ರಮೋದ್ ಮಲ್ಲಾರ, ಪಿಎಚ್‌ಎಫ್ ಪದವಿ ಪಡೆದ ದಯಾನಂದ ಕೆ.ಎಸ್, ಆನೆಟ್ ಲಿಖಿತಾ ಮಲ್ಲಾರ ಹಾಗೂ ಟಿಆರ್‌ಎಫ್‌ಗೆ ದೇಣಿಗೆ ನೀಡಿ ಲೆವೆಲ್-೩ಗೆ ಭಾಜನರಾದ ಅಧ್ಯಕ್ಷ ಪ್ರಶಾಂತ್ ಶೆಣೈರವರನ್ನು ಅಭಿನಂದಿಸಲಾಯಿತು. ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ದಯಾನಂದ ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು.

ಅಭಿನಂದನೆ:
ರೋಟರಿ ಸಿಟಿಯ ಪದ ಪ್ರದಾನ ಸಮಾರಂಭಕ್ಕೆ ರೂ.೧೦ ಸಾವಿರ ದೇಣಿಗೆ ನೀಡಿದ ಸದಸ್ಯ ಜಯಕುಮಾರ್ ರೈ ಎಂ.ಆರ್‌ರವರ ಸಹೋದರ ಜಯರಾಂ ರೈ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯೆ ಶ್ಯಾಮಲ ಶೆಟ್ಟಿ, ಕ್ಲಬ್‌ನಿಂದ ಗೋವಾಕ್ಕೆ ಪಿಕ್ನಿಕ್ ಹೋದ ಸಂದರ್ಭ ಕ್ಲಬ್‌ನ್ನು ಆಧರಿಸುತ್ತಿರುವ ಶಶಿಧರ್ ರೈ, ಪದ ಪ್ರದಾನ ಸಮಾರಂಭಕ್ಕೆ ಉತ್ತಮ ಸಭಾಂಗಣವನ್ನು ಸಜ್ಜುಗೊಳಿಸಿದ ಎಂಡಿಎಸ್ ಟ್ರಿನಿಟಿ ಸಭಾಂಗಣದ ಲ್ಯಾನ್ಸಿ ಡಿ’ಸೋಜ, ನೇತ್ರದಾನ ಮಾಡಿರುವ ಸದಾಶಿವ ಪ್ರಭು ಮೊಟ್ಟೆತ್ತಡ್ಕರವರನ್ನು ಈ ಸಂದರ್ಭದಲ್ಲಿ ಗುರುತಿಸಿ ಅಭಿನಂದಿಸಲಾಯಿತು.

ನೂತನ ಅಧ್ಯಕ್ಷ ಕೆ.ಪ್ರಶಾಂತ್ ಶೆಣೈಯವರ ಪತ್ನಿ ಅಕ್ಷತಾ ಶೆಣೈ, ನಿರ್ಗಮಿತ ಅಧ್ಯಕ್ಷ ಪ್ರಮೋದ್ ಮಲ್ಲಾರರವರ ಪತ್ನಿ ಸ್ವಾತಿ ಮಲ್ಲಾರ, ನಿಯೋಜಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಲತಾ ಶೆಣೈ ಪ್ರಾರ್ಥಿಸಿದರು. ನಿರ್ಗಮಿತ ಕಾರ್ಯದರ್ಶಿ ಗುರುರಾಜ್ ವರದಿ ಮಂಡಿಸಿದರು. ಸದಸ್ಯರಾದ ಕೃಷ್ಣಮೋಹನ್ ಪಿ.ಎಸ್, ಡಾ.ಹರಿಕೃಷ್ಣ ಪಾಣಾಜೆ, ಶ್ಯಾಮಲ ಶೆಟ್ಟಿಯವರು ಅತಿಥಿಗಳ ಪರಿಚಯ ಮಾಡಿದರು. ನೂತನ ಕಾರ್ಯದರ್ಶಿ ಜಯಗುರು ಆಚಾರ್ ವಂದಿಸಿದರು. ಡಾ.ಶಶಿಧರ್ ಕಜೆ ಹಾಗೂ ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮ ನಿರೂಪಿಸಿದರು.

`ಒಗ್ಗಟ್ಟು’ ಯಶಸ್ಸಿನ ಮಂತ್ರವಾಗಿದೆ…
ರೋಟರಿ ಸಿಟಿಯ ಅಧ್ಯಕ್ಷನಾಗಿರುವ ನನಗೆ ಇದೊಂದು ಅವಿಷ್ಮರಣೀಯ ಕ್ಷಣ. ಕಳೆದ ಹತ್ತೊಂಬತ್ತು ವರ್ಷಗಳಿಂದ ರೋಟರಿ ಸಿಟಿಯು ಅತ್ತ್ಯುತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನಮನ್ನಣೆ ಗಳಿಸಿದೆ. ಪ್ರಸ್ತುತ ತಾನು ಕ್ಲಬ್‌ನ ೨೦ನೇ ಅಧ್ಯಕ್ಷನಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಟೀಮ್ ಸಿಟಿ ಕ್ಲಬ್‌ನ್ನು ಮುನ್ನೆಡೆಸಿಕೊಂಡು ಹೋಗಲು ಸರ್ವರ ಸಹಕಾರ ಬೇಕಾಗಿದೆ. ಕ್ಲಬ್‌ನಲ್ಲಿನ ಸದಸ್ಯರ ಯೋಜನೆ ಹಾಗೂ ಚಿಂತನೆಗಳಿಗೆ ಬೆಲೆ ಕೊಡುತ್ತಾ, `ಒಗ್ಗಟ್ಟು’ ಎಂಬ ಮಂತ್ರದೊಂದಿಗೆ ಕ್ಲಬ್‌ನ್ನು ಮುನ್ನೆಡೆಸಲು ಸಜ್ಜಾಗಿದ್ದೇನೆ. ಸದಸ್ಯರ ವಿಶ್ವಾಸದೊಂದಿಗೆ ಕ್ಲಬ್‌ನ ಬೆಳವಣಿಗೆಯಲ್ಲಿ ನೂರು ಪ್ರತಿಶತ ಪ್ರಯತ್ನ ಪಡಲಿದ್ದೇನೆ. ತಂದೆ ಕೆ.ಆರ್ ಶೆಣೈ ಹಾಗೂ ಸಹೋದರ ವಿಶ್ವಾಸ್ ಶೆಣೈರವರ ಸಮ್ಮುಖದಲ್ಲಿ ರೋಟರಿ ಸಿಟಿಯನ್ನು ಉತ್ತುಂಗಕ್ಕೆ ಏರಿಸುವಲ್ಲಿ ಶ್ರಮಿಸುತ್ತೇನೆ.ಕೆ.ಪ್ರಶಾಂತ್ ಶೆಣೈ, ಅಧ್ಯಕ್ಷರು, ರೋಟರಿ ಪುತ್ತೂರು ಸಿಟಿ

ಸನ್ಮಾನ..
ನಿರ್ಗಮಿತ ಅಧ್ಯಕ್ಷ ಪ್ರಮೋದ್ ಮಲ್ಲಾರರವರ ಅಧಿಕಾರ ಸಂದರ್ಭದಲ್ಲಿ ಕ್ಲಬ್ ಸದಸ್ಯರೂ ಹಾಗೂ ಅಸಿಸ್ಟೆಂಟ್ ಗವರ್ನರ್ ಆಗಿ ಕ್ಲಬ್‌ಗೆ ಉತ್ತಮ ಸಹಕಾರವಿತ್ತ ಜಿ.ಸುರೇಂದ್ರ ಕಿಣಿಯವರಿಗೆ, ಕಳೆದ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ಪರಿಚಯಿಸಿ ಕ್ಲಬ್‌ಗೆ ಹೆಸರು ತಂದಿತ್ತ ನಿರ್ಗಮಿತ ಅಧ್ಯಕ್ಷ ಪ್ರಮೋದ್ ಮಲ್ಲಾರ ದಂಪತಿ ಹಾಗೂ ಕಾರ್ಯದರ್ಶಿ ಗುರುರಾಜ್ ದಂಪತಿ, ಪದ ಪ್ರದಾನವನ್ನು ನೆರವೇರಿಸಿದ ಪಿಡಿಜಿ ಸುರೇಶ್ ಚೆಂಗಪ್ಪ, ನೂತನ ಅಧ್ಯಕ್ಷರಾಗಿರುವ ಪ್ರಶಾಂತ್ ಶೆಣೈರವರು ತಮಗೆ ಸದಾ ಪ್ರೋತ್ಸಾಹ ನೀಡುತ್ತಿರುವ ತಂದೆ ಕೆ.ಆರ್ ಶೆಣೈರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಪದಾಧಿಕಾರಿಗಳಿಗೆ ಪದಪ್ರದಾನ…
ನೂತನ ಅಧ್ಯಕ್ಷ ಕೆ.ಪ್ರಶಾಂತ್ ಶೆಣೈ, ಕಾರ್ಯದರ್ಶಿ ಜಯಗುರು ಆಚಾರ್, ಕೋಶಾಧಿಕಾರಿ ಕಿರಣ್ ಬಿ.ವಿ, ನಿಯೋಜಿತ ಅಧ್ಯಕ್ಷ ಗ್ರೇಸಿ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಮಲ್ಲಾರ, ಸಾರ್ಜಂಟ್ ಎಟ್ ಆರ್ಮ್ಸ್ ಡೆನ್ನಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಸಹ ಕಾರ್ಯದರ್ಶಿ ಮೋಹನ್ ಮುತ್ಲಾಜೆ, ನಿದೇಶಕರಾದ ಕ್ಲಬ್ ಸರ್ವಿಸ್ ಆನಂದ ಗೌಡ, ಕಮ್ಯೂನಿಟಿ ಸರ್ವಿಸ್ ರಾಮಚಂದ್ರ ಪುಚ್ಚೇರಿ, ವೊಕೇಶನಲ್ ಸರ್ವಿಸ್ ಪ್ರಕಾಶ್ ಕೆ.ವಿ, ಇಂಟರ್‌ನ್ಯಾಷನಲ್ ಸರ್ವಿಸ್ ದಯಾನಂದ ಕೆ.ಎಸ್, ಯೂತ್ ಸರ್ವಿಸ್ ಇಜಾಝ್ ಅಹಮದ್, ಬುಲೆಟಿನ್ ಎಡಿಟರ್ ಗುರುರಾಜ್, ಚೇರ್‌ಮ್ಯಾನ್‌ಗಳಾದ ಜಯಕುಮಾರ್ ರೈ(ಪೋಲಿಯೋ ಪ್ಲಸ್), ಡಾ.ಶಶಿಧರ್ ಕಜೆ(ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಡಾ.ಹರಿಕೃಷ್ಣ ಪಾಣಾಜೆ(ರೋಟರಿ ಫೌಂಡೇಶನ್), ಲಾರೆನ್ಸ್ ಗೊನ್ಸಾಲ್ವಿಸ್(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಶ್ಯಾಮಲಾ ಶೆಟ್ಟಿ(ಟೀಚ್), ಆನಂದ ಗೌಡ(ವಿನ್ಸ್), ಸ್ವಾತಿ ಮಲ್ಲಾರ(ವೆಬ್/ಐಟಿ), ಮನೋಹರ್ ಕೆ(ಸಿಎಲ್‌ಸಿಸಿ), ರಾಜೇಶ್ ಯು.ಪಿ(ವಾಟರ್&ಸ್ಯಾನಿಟೇಶನ್), ವಿಕ್ಟರ್ ಮಾರ್ಟಿಸ್(ಫೆಲೋಶಿಪ್), ಸುಧಾಕರ್ ಶೆಟ್ಟಿ(ಫಂಡ್ ರೈಸಿಂಗ್), ಕೃಷ್ಣವೇಣಿ ಪ್ರಸಾದ್ ಮುಳಿಯ(ಸಾಂಸ್ಕೃತಿಕ), ಕೃಷ್ಣಮೋಹನ್(ಕೆರಿಯರ್ ಗೈಡೆನ್ಸ್), ಮಹಾಬಲ(ಕ್ರೀಡೆ), ಪದ್ಮನಾಭ ಶೆಟ್ಟಿ(ರೋಟರ್‍ಯಾಕ್ಟ್), ಧರ್ಣಪ್ಪ ಗೌಡ(ಇಂಟರ್‍ಯಾಕ್ಟ್), ನಟೇಶ್ ಉಡುಪ(ಪಿಕ್ನಿಕ್ ಸಂಯೋಜಕರು)ರವರಿಗೆ ಪಿಡಿಜಿ ಸುರೇಶ್ ಚೆಂಗಪ್ಪರವರು ಪದ ಪ್ರದಾನವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here