ನರಿಮೊಗರು: ಹಿರಿಯ ಕಾಂಗ್ರೆಸ್ಸಿಗ ಭಾಸ್ಕರ್ ಎಂ ಜೋಗಿ ನಿಧನ

0

ಪುತ್ತೂರು: ಹಿರಿಯ ಕಾಂಗ್ರೆಸ್ ಕಾರ್ಯಕರ್ತ, ನರಿಮೊಗರು ನಿವಾಸಿ ಭಾಸ್ಕರ್ ಎಂ ಜೋಗಿ(86.ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜು.7ರಂದು ರಾತ್ರಿ ನಿಧನರಾದರು. ನರಿಮೊಗರುವಿನಲ್ಲಿ ದಿನಸಿ ಹಾಗೂ ಪಡಿತರ ಅಂಗಡಿ ಹೊಂದಿದ್ದ ಅವರು ಸ್ಥಳೀಯವಾಗಿ ಜನಾರುರಾಗಿಯಾಗಿದ್ದರು.

ಮೃತ ಭಾಸ್ಕರ್ ಎಂ ಜೋಗಿ ಅವರ ಪತ್ನಿ ಗಿರಿಜಾ ಅವರು ವರ್ಷಗಳ ಹಿಂದೆ ನಿಧನರಾಗಿದ್ದರು. ಮೃತರು ಪುತ್ರಿಯರಾದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ, ಮೆಸ್ಕಾಂ ಉದ್ಯೋಗಿ ಲತಾ, ಪುತ್ರರಾದ ಜಗದೀಶ ಹಾಗೂ ಪ್ರಕಾಶ್ ಅವರನ್ನು ಅಗಲಿದ್ದಾರೆ.

ಮೃತರ ಮನೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ, ಬ್ಲಾಕ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಮುಂಡೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಡಿ ವಸಂತ, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಸದಸ್ಯ ನಾರಾಯಣ ನಾಯ್ಕ, ಮರಾಠಿ ಸಂಘ ನರಿಮೊಗರು ಇದರ ಅಧ್ಯಕ್ಷ ಮೋಹನ ನಾಯ್ಕ ಕೇದಗೆದಡಿ, ಪಾಪೆತ್ತಡ್ಕ ಮಸೀದಿಯ ಉಪಾಧ್ಯಕ್ಷ ಇಸ್ಮಾಯಿಲ್, ನರಿಮೊಗರು ಸ.ಉ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಸದಸ್ಯ ಪ್ರವೀಣ್ ಆಚಾರ್ಯ ನರಿಮೊಗರು ಸೇರಿದಂತೆ ಹಲವಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here