ರೋಟರಿ ಕ್ಲಬ್ ಪುತ್ತೂರು ಯುವ

0

  • ಅಧ್ಯಕ್ಷೆ:ರಾಜೇಶ್ವರಿ ಆಚಾರ್,ಕಾರ್ಯದರ್ಶಿ:ಅಶ್ವಿನಿ ಕೃಷ್ಣ ಮುಳಿಯ, ಕೋಶಾಧಿಕಾರಿ:ನರಸಿಂಹ ಪೈ, ವಲಯ ಸೇನಾನಿ:ಡಾ|ಹರ್ಷ ಕುಮಾರ್ ರೈ

ಪುತ್ತೂರು: ರೋಟರಿ ಜಿಲ್ಲೆ 3181ಇದರ ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಧ್ಯಕ್ಷರಾಗಿ ರಾಜೇಶ್ವರಿ ಆಚಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಕೃಷ್ಣ ಮುಳಿಯ, ಕೋಶಾಧಿಕಾರಿಯಾಗಿ ನರಸಿಂಹ ಪೈ, ವಲಯ ಸೇನಾನಿಯಾಗಿ ಡಾ|ಹರ್ಷ ಕುಮಾರ್ ರೈರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ಅಭಿಷ್, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕ ಪಶುಪತಿ ಶರ್ಮ, ಸಾರ್ಜಂಟ್ ಎಟ್ ಆರ್ಮ್ಸ್ ದೀಕ್ಷಾ ರೈ, ಬುಲೆಟಿನ್ ಎಡಿಟರ್ ದೇವಿಚರಣ್ ರೈ, ನಿರ್ದೇಶಕರುಗಳಾಗಿ ವೊಕೇಶನಲ್ ಸರ್ವಿಸ್‌ನ ವಿನೀತ್ ಶೆಣೈ, ಕಮ್ಯೂನಿಟಿ ಸರ್ವಿಸ್‌ನ ನಿಹಾಲ್ ಶೆಟ್ಟಿ, ಇಂಟರ್‌ನ್ಯಾಷನಲ್ ಸರ್ವಿಸ್‌ನ ಸಚಿನ್ ನಾಯಕ್, ಯೂತ್ ಸರ್ವಿಸ್‌ನ ಸುದರ್ಶನ್ ರೈ, ಚೇರ್‌ಮ್ಯಾನ್‌ಗಳಾಗಿ ಮೆಂಬರ್‌ಶಿಪ್ ಡೆವಲಪ್‌ಮೆಂಟ್‌ಗೆ ಕಾರ್ತಿಕ್ ಪೆರ್‍ವೋಡಿ, ಪಬ್ಲಿಕ್ ಇಮೇಜ್(ವೆಬ್)ಗೆ ಶರತ್, ರೋಟರಿ ಫೌಂಡೇಶನ್(ಟಿಆರ್‌ಎಫ್)ಗೆ ಚೇತನ್ ಪ್ರಕಾಶ್, ಟೀಚ್‌ಗೆ ಸ್ವಸ್ತಿಕಾ ರೈ, ವಿನ್ಸ್‌ಗೆ ರಾಮ್‌ಪ್ರಕಾಶ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್‌ಗೆ ಭರತ್ ಪೈ, ಪಲ್ಸ್ ಪೋಲಿಯೋಗೆ ಅನಿಲ ರೈ, ಕ್ರೀಡೆಗೆ ಎಲ್ಯಾಸ್ ಪಿಂಟೋ, ಸಿಎಲ್‌ಸಿಸಿಗೆ ಕುಸುಮ್ ರಾಜ್‌ರವರು ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಶ್ವರಿ ಆಚಾರ್‌ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಿಟ್ಲದಲ್ಲಿ, ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಸಂಸ್ಥೆಯಲ್ಲಿ ಪೂರೈಸಿರುತ್ತಾರೆ. ಇವರು ೨೦೧೪ರಲ್ಲಿ ಪುತ್ತೂರು ಇನ್ನರ್‌ವೀಲ್ ಕ್ಲಬ್‌ಗೆ ಸೇರ್ಪಡೆಗೊಂಡು ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ೨೦೨೧-೨೨ನೇ ಸಾಲಿನಲ್ಲಿ ಇನ್ನರ್‌ವೀಲ್ ಕ್ಲಬ್‌ನ ಕಾರ್‍ಯದರ್ಶಿಯಾಗಿ ಅತ್ಯುತ್ತಮ ಕಾರ್ಯಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ೨೦೧೯ರಲ್ಲಿ ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ಸೇರ್ಪಡೆಗೊಂಡ ಇವರು, ೨೦೨೧-೨೨ನೇ ಸಾಲಿನ ಕೋಶಾಧಿಕಾರಿಯಾಗಿ ರೋಟರಿಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನದೇ ಆದ ಕೊಡುಗೆ ನೀಡಿರುತ್ತಾರೆ. ಇವರು ಅತ್ಯಲ್ಪ ಅವಧಿಯಲ್ಲಿಯೇ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು, ಇವರು ರೋಟರಿ ಯುವದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೇಗ್ಗಳಿಕೆ ಇವರದ್ದು. ರಾಜೇಶ್ವರಿರವರು ಬಾಡ್ಮಿಂಟನ್ ಪಟುವಾಗಿದ್ದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕ್ರೀಡೆ, ಅಡುಗೆ ಮತ್ತು ಹೂ ಹಣ್ಣಿನ ಗಿಡಗಳನ್ನು ಬೆಳೆಸುವುದರಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಪ್ರಸ್ತುತ ಸುದಾನ ಸ್ಪೋರ್ಟ್ಸ್ ಕ್ಲಬ್ ಇದರ ಜೊತೆ ಕಾರ್ಯದರ್ಶಿಯಾಗಿ, ಬಾಲವನ ಪುತ್ತೂರು ಅಕ್ವೆಟಿಕ್ ಕ್ಲಬ್ ಇದರ ಉಪಾಧ್ಯಕ್ಷರಾಗಿ, ವಿಶ್ವ ಬ್ರಾಹ್ಮಣ ಸೇವಾ ಸಂಘ ಪುತ್ತೂರು ಇದರ ಸದಸ್ಯರಾಗಿ, ಜೊತೆಗೆ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಪತಿ ಪುತ್ತೂರಿನ ಅಶೋಕ ಜ್ಯುವೆಲ್ಲರ್‍ಸ್ ಮಾಲಕ ಸುಧೀರ್ ಆಚಾರ್, ಮಕ್ಕಳಾದ ರಿಧಿಮಾ ಮತ್ತು ರಾಹಿರವರ ಜೊತೆ ಪುತ್ತೂರಿನಲ್ಲಿ ವಾಸ್ತವ್ಯವಾಗಿದ್ದಾರೆ.

ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಶ್ವಿನಿ ಕೃಷ್ಣ ಮುಳಿಯರವರು ೨೦೧೫ರಲ್ಲಿ ರೋಟರಿಗೆ ಸೇರ್ಪಡೆಗೊಂಡರು. ಜೇಸಿಐ ಇದರ ಸದಸ್ಯೆಯಾಗಿರುವ ಇವರು ವಲಯ ಮಟ್ಟದ ತರಬೇತಿದಾರರೂ ಆಗಿದ್ದಾರೆ. ಔಟ್‌ಸ್ಟಾಂಡಿಂಗ್ ನ್ಯಾಷನಲ್ ಅವಾರ್ಡ್, ಔಟ್‌ಸ್ಟಾಂಡಿಂಗ್ ಝೋನ್ ಲೇಡಿ ಸೇರಿದಂತೆ ಜೇಸಿಐಯಲ್ಲಿ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ.

ಇಂಜಿನಿಯರ್ ಹಾಗೂ ಎಂಬಿಎ ಪದವೀಧರೆಯಾಗಿರುವ ಅಶ್ವಿನಿಕೃಷ್ಣರವರು ವಿವೇಕಾನಂದ ಇಂಂಜಿನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಅನುಭವ ಇವರದ್ದು. ಇನ್ನರ್‌ವ್ಹೀಲ್ ಕ್ಲಬ್ ಪುತ್ತೂರು ಇದರ ಉಪಾಧ್ಯಕ್ಷೆಯಾಗಿ ಹಲವಾರು ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಪತಿ ಮುಳಿಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ಮಕ್ಕಳಾದ ಇಶಾ ಸುಲೋಚನ, ಮುಕಂದ ಶ್ಯಾಮರವರೊಂದಿಗೆ ವಾಸವಾಗಿದ್ದಾರೆ.

ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ನರಸಿಂಹ ಪೈಯವರು ಪುತ್ತೂರು ಗಣೇಶ್ ಟ್ರೇಡರ್‍ಸ್ ಇದರ ಪಾಲುದಾರಾಗಿದ್ದು ಬಿ.ಇ ಎಂಟೆಕ್ ಪದವೀಧರರು. ೨೦೧೬-೨೦೧೭ನೇ ಸಾಲಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷರಾಗಿ ಕ್ಲಬ್‌ನ್ನು ಯಶಸ್ವಿಯಾಗಿ ಮುನ್ನಡೆಸಿದ ಇವರು ಕ್ಲಬ್ಬಿನ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನ ಮನ್ನಣೆಯನ್ನು ಪಡೆದಿದ್ದು, ರೋಟರಿಯ ವಲಯ ಸೇನಾನಿಯಾಗಿಯೂ ಕಾರ್‍ಯನಿರ್ವಹಿಸಿದ್ದಾರೆ.

ನೂತನ ವಲಯ ಸೇನಾನಿ ಪರಿಚಯ:
ನೂತನ ವಲಯ ಸೇನಾನಿಯಾಗಿ ಆಯ್ಕೆಯಾಗಿರುವ ಡಾ|ಹರ್ಷ ಕುಮಾರ್ ರೈರವರು ವೃತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿನ್ಯಾಸಗಾರರಾಗಿದ್ದು, ಬ್ರೈಟ್ ವೇ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಪೆಟ್ರೋಲಿಯಂ ಮತ್ತು ಗ್ಯಾಸ್ ಉದ್ಯಮವನ್ನು ನಡೆಸುತ್ತಿದ್ದಾರೆ. ಇವರು ಜನ್ಮ ಪೌಂಡೇಶನ್ ಟ್ರಸ್ಟ್(ರಿ.) ಇದರ ಅಧ್ಯಕ್ಷರಾಗಿದ್ದು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಯುವ ಇದರ ೨೦೨೦-೨೧ನೇ ಸಾಲಿನಲ್ಲಿ ಅಧ್ಯಕ್ಷರಾಗಿ, ೨೦೨೧-೨೨ನೇ ಸಾಲಿನ ರೋಟರಿ ಸೋಷಿಯಲ್ ಮೀಡಿಯಾ ಝೋನಲ್ ಕೋಆರ್ಡಿನೇಟರ್ ಆಗಿಯೂ ಸೇವೆ ಸಲ್ಲಿಸಿರುತ್ತಾರೆ.

ಇವರು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ೨೦೧೧ರಲ್ಲಿ ಭಾರತ್ ಸಮ್ಮಾನ್ ಪ್ರಶಸ್ತಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಸಾಧನೆಗೆ ವರ್ಲ್ಡ್ ಕಿಂಗ್ಸ್ ಗೌರವ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ೨೦ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಪತ್ನಿ ಕೃತಿಕಾ ರೈ ಹಾಗೂ ಪುತ್ರಿ ಹನಿಕಾ ರೈ ಜೊತೆ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

ನಾಳೆ ಪದಪ್ರದಾನ..
ಜು.೧೦ ರಂದು ಸಂಜೆ ಬೊಳ್ವಾರು ಮಹಾವೀರ ವೆಂಚರ್‍ಸ್‌ನಲ್ಲಿ ನಡೆಯಲಿರುವ ನೂತನ ಪದ ಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲೆ ೩೧೮೧ ಇದರ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ವಲಯ ಸೇನಾನಿ ಡಾ|ಹರ್ಷ ಕುಮಾರ್ ರೈ ಮಾಡಾವು, ರೋಟರಿ ಯುವದ ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈಯವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here