ರೋಟರಿ ಪುತ್ತೂರು ಎಲೈಟ್ ಪದಪ್ರದಾನ

0

  • ಕನಸುಗಳನ್ನು ವಾಸ್ತವಕ್ಕೆ ವರ್ಗಾಯಿಸುವಂತಿರಲಿ-ಜೋಸೆಫ್ ಮ್ಯಾಥ್ಯೂ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

 

ಪುತ್ತೂರು: ರೊಟೇರಿಯನ್ಸ್‌ಗಳು ರೋಟರಿಗೆ ಭರ್ತಿಯಾದ ಮೇಲೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಕನಸು ಕಾಣಬೇಕು ಮಾತ್ರವಲ್ಲದೆ ಕಂಡಂತಹ ಕನಸುಗಳನ್ನು ವಾಸ್ತವಕ್ಕೆ ವರ್ಗಾಯಿಸುಂತಾದಾಗ ಮಾತ್ರ ಸಮಾಜ ಗುರುತಿಸುತ್ತದೆ ಎಂದು ರೋಟರಿ ಜಿಲ್ಲೆ ೩೧೮೧ ಇದರ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಹೇಳಿದರು.


ಜು.9 ರಂದು ನೆಹರುನಗರ ಸುದಾನ ಶಾಲೆಯ ಎಡ್ವರ್ಡ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿದರು. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಹಾಗೂ ಸಾವು ಇವೆರಡರ ನಡುವಿನ ಅಲ್ಪಾಯುಷ್ಯದಲ್ಲಿ ಮಾನವ ಜನಮಾನದಲ್ಲಿ ಅಚ್ಚಳಿಯದೆ ಉಳಿಯುವಂತಹ ಉತ್ತುಂಗತೆಯ ಕಾರ್ಯಗಳನ್ನು ಮಾಡಿದಾಗ ಮಾತ್ರ ಮನುಷ್ಯ ಜೀವನ ಸಾರ್ಥಕೈ ಪಡೆಯುತ್ತದೆ. ಸಮಾಜದಲ್ಲಿನ ಬಡತನದಲ್ಲಿರುವವರನ್ನು, ಅಶಕ್ತರನ್ನು, ದೀನದಲಿತರನ್ನು ಗುರುತಿಸಿ ಅವರಿಗೆ ನೆರವಿನ ಹಸ್ತ ಚಾಚದಿದ್ದರೆ ಏನೂ ಪ್ರಯೋಜನವಿಲ್ಲ. ಅಂಥವರನ್ನು ಗುರುತಿಸಿ ಉತ್ತಮ ಕಾರ್ಯ ಮಾಡಿದಾಗ ಸಮಾಜವು ರೋಟರಿ ಸಂಸ್ಥೆಯನ್ನು ಹೊಗಳುತ್ತದೆ ಎಂದು ಅವರು ಹೇಳಿದರು.


ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈಯವರು ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಗೆ ೧೧೭ರ ಇತಿಹಾಸವಿದ್ದು, ಪ್ರಸ್ತುತ ವರ್ಷ ಪ್ರಥಮ ಮಹಿಳೆ ಜೆನಿಫರ್ ಜೋಸ್‌ರವರು ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ವನಸಿರಿ, ಜಲಸಿರಿ, ಆರೋಗ್ಯ ಸಿರಿ, ವಿದ್ಯಾ ಸಿರಿಯೆಂಬ ನಾಲ್ಕು ಪ್ರಾಜೆಕ್ಟ್‌ಗಳನ್ನು ಆಯಾ ರೋಟರಿಗೆ ನೀಡಿದೆ. ಅಧ್ಯಕ್ಷ ಶಿಕ್ಷಣ ತಜ್ಞ ಪೀಟರ್ ವಿಲ್ಸನ್ ಪ್ರಭಾಕರ್‌ರವರು ಈಗಾಗಲೇ ಈ ನಾಲ್ಕು ಪ್ರಾಜೆಕ್ಟ್‌ಗಳ ಬಗ್ಗೆ ಗಮನ ಹರಿಸಿರುವುದು ಶ್ಲಾಘನೀಯ. ಪ್ರತಿ ಹಳ್ಳಿಗಳಲ್ಲಿನ ಜನರ ಆರೋಗ್ಯದ ಹಿತದೃಷ್ಟಿಯಿಂದ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಆರಂಭಿಸಿರುವುದು ಅಭಿನಂದನೀಯ ಎಂದರು.

ರೋಟರಿ ವಲಯ ಸೇನಾನಿ ಸೆನೋರಿಟ ಆನಂದ್‌ರವರು ಕ್ಲಬ್ ಬುಲೆಟಿನ್ ಸೆನೋರಿಟ ಆನಂದ್‌ರವರು ಅನಾವರಣಗೊಳಿಸಿ ಮಾತನಾಡಿ, ಕಳೆದ ವರ್ಷ ಮನ್ಸೂರ್ ನಾಯಕತ್ವದಲ್ಲಿ ಕ್ಲಬ್ ಉತ್ತಮವಾಗಿ ಕಾರ್ಯ ನಿರ್ವಹಿಸಿರುವುದು ಶ್ಲಾಘನೀಯ. ಪ್ರಸ್ತುತ ಸಾಲಿನ ಅಧ್ಯಕ್ಷರಾದ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಅನುಭವಿಯಾಗಿರುವ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ರವರ ನೇತೃತ್ವದಲ್ಲಿ ಕ್ಲಬ್ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿ ಕ್ಲಬ್ ಉತ್ತಮ ಹೆಸರು ಗಳಿಸುವಂತಾಗಲಿ ಎಂದರು.

ಕ್ಲಬ್ ನೂತನ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್‌ರವರು ಮಾತನಾಡಿ, ರೋಟರಿ ಎಲೈಟ್‌ನ ಮುಖ್ಯ ಶಕ್ತಿ ಮಾನವ ಸಂಪನ್ಮೂಲ. ಕ್ಲಬ್‌ನಲ್ಲಿನ ಸದಸ್ಯರು ಮತ್ತು ಪ್ರಸ್ತುತ ಸೇರ್ಪಡೆಗೊಂಡ ಸದಸ್ಯರ ಬೌದ್ಧಿಕ ಆಸ್ತಿಯ ಸಾಮಾರ್ಥ್ಯವನ್ನು ಓರೆಗೆ ಹಚ್ಚುವಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ. ಅಂಬೆಗಾಲಿಡುತ್ತಿರುವ ನಮ್ಮ ಕ್ಲಬ್ ಕಳೆದ ಎರಡು ವರ್ಷಗಳಿಂದ ಅಸಾಮಾನ್ಯವಾದುದನ್ನೇ ಸಾಧಿಸಿದೆ. ಸದಸ್ಯರಲ್ಲಿನ ಜ್ಞಾನ ಸಂಪತ್ತು ಹಾಗೂ ತಿಳುವಳಿಕೆಯನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕ ಸಂಪನ್ಮೂಲ ಕ್ರೋಢೀಕರಣವನ್ನು ಮಾಡಿ ಸಮಾಜಮುಖಿ ಕಾರ್ಯಗಳ ಮೂಲಕ ಗುರಿ ಮುಟ್ಟಲಿದ್ದೇವೆ ಎಂದರು.

ಕ್ಲಬ್ ನಿರ್ಗಮನ ಅಧ್ಯಕ್ಷ ಮನ್ಸೂರ್‌ರವರು ಸ್ವಾಗತಿಸಿ ಮಾತನಾಡಿ, ರೋಟರಿ ಎಲೈಟ್‌ನ ಎರಡನೇ ಅಧ್ಯಕ್ಷನಾಗಿ ಕ್ಲಬ್‌ನಲ್ಲಿನ ಸದಸ್ಯರು ಬೆನ್ನೆಲುಬಾಗಿ ನಿಂತು ಸರ್ವ ರೀತಿಯ ಸಹಕಾರದಿಂದ ಕ್ಲಬ್ ಅದ್ವಿತೀಯ ಸಾಧನೆ ಮಾಡಿದೆ. ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ೮೬ ಕ್ಲಬ್‌ಗಳಲ್ಲಿ ಕ್ಲಬ್‌ನ ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಮೆಮೋರೇಬಲ್ ಎನಿಸಿದೆ ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಕ್ಲಬ್‌ಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು, ಹೊಸ ಸದಸ್ಯರಾದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ|ಶ್ರೀಧರ್ ನಾಕ್ ಬಿ, ವಿವೇಕಾನಂದ ಕಾಲೇಜಿನ ಆಡಳಿತ ಸಿಬ್ಬಂದಿ ಮೋಹನ್ ಎಂ, ಸುದಾನ ಶಾಲೆಯ ಸಂಚಾಲಕ ವಂ|ವಿಜಯ ಹಾರ್ವಿನ್‌ರವರ ಪುತ್ರ ಮೆಕ್ಯಾನಿಕಲ್ ಇಂಜಿನಿಯರ್ ಸುಶಾಂತ್ ಹಾರ್ವಿನ್, ಈಶ ವಿದ್ಯಾಲಯದ ಪ್ರಾಂಶುಪಾಲ ಎಂ.ಗೋಪಾಲಕೃಷ್ಣ, ಪ್ರಗತಿಪರ ಕೃಷಿಕ ಮಾಧವ ಗೌಡ ಬೆಳ್ಳಾರೆ, ಸಾಪ್ಟ್‌ವೇರ್ ಇಂಜಿನಿಯರ್ ಶ್ರೀವಿದ್ಯಾ ಬನ್ನೂರು, ಇಂದ್ರಪ್ರಸ್ಥ ವಿದ್ಯಾಲಯದ ಚಿತ್ರಕಲಾವಿದ ಶಿಕ್ಷಕ ಸದಾಶಿವ ಶಿವಗಿರಿ ಕಲ್ಲಡ್ಕರವರಿಗೆ ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈಯವರು ರೋಟರಿ ಪಿನ್ ತೊಡಿಸಿ, ಪ್ರಮಾಣವಚನ ಬೋಧಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಕಾರ್ತಿಕ್ ಸುಂದರ್ ಕಾರ್ಯಕ್ರಮ ನಿರ್ವಹಿಸಿದರು.

ರೋಟರ್‍ಯಾಕ್ಟ್ ಎಲೈಟ್ ಪದಪ್ರದಾನ:
ಯೂತ್ ಸರ್ವಿಸ್‌ನಡಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಎಲೈಟ್ ಪ್ರಾಯೋಜಿಸಿದ ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಎಲೈಟ್ ಇದರ ಪದಪ್ರದಾನ ಕಾರ್ಯಕ್ರಮ ನಡೆದಿದ್ದು, ಪದ ಪ್ರದಾನ ಅಧಿಕಾರಿ ರೋಟರಿ ಜಿಲ್ಲೆ ೩೧೮೧ ಇದರ ಡಿಆರ್‌ಸಿಸಿ ರತ್ನಾಕರ್ ರೈ ಕೆದಂಬಾಡಿಗುತ್ತುರವರು ರೋಟರ್‍ಯಾಕ್ಟ್ ಎಲೈಟ್ ನೂತನ ಅಧ್ಯಕ್ಷ ಅರ್ಝಾನ್‌ರವರಿಗೆ ಕೊರಳಪಟ್ಟಿ ತೊಡಿಸಿ, ರೋಟರಿ ದಂಡ ನೀಡಿ ಪದ ಪ್ರದಾನ ನೆರವೇರಿಸಿ ಹೊಸ ತಂಡಕ್ಕೆ ಪ್ರಮಾಣವಚನ ಬೋಧಿಸಿದರು. ಬಳಿಕ ಮಾತನಾಡಿದ ರತ್ನಾಕರ್ ರೈಯವರು, ರೋಟರ್‍ಯಾಕ್ಟ್ ಕ್ಲಲಬ್ ಸದಸ್ಯರು ಸಮಾಜದಲ್ಲಿ ಸಂಘಟಿತರಾಗಿ ಕೆಲಸ ಮಾಡಿ ಉತ್ತಮ ಹೆಸರು ಗಳಿಸುವಂತಾಗಲಿ ಮಾತ್ರವಲ್ಲದೆ ಭವಿಷ್ಯದ ರೊಟೇರಿಯನ್ಸ್‌ಗಳಾಗಿ ಸೇವೆ ನಿಡಲು ಉತ್ಸುಕರಾಗಿ ಎಂದರು. ನಿರ್ಗಮಿತ ಅಧ್ಯಕ್ಷ ನಿಹಾಲ್‌ರವರು ಕೃತಜ್ಞತೆ ಸಲ್ಲಿಸಿದರು. ರೋಟರ್‍ಯಾಕ್ಟ್ ಕ್ಲಬ್ ಚೇರ್‌ಮ್ಯಾನ್ ಆಸ್ಕರ್ ಆನಂದ್, ಝಡ್‌ಆರ್‌ಆರ್ ಸಿಯಾಕ್, ನೂತನ ಕಾರ್ಯದರ್ಶಿ ಪ್ರಣಿತ್ ಕುಂದರ್ ಉಪಸ್ಥಿತರಿದ್ದರು.

ಜಿಲ್ಲಾ ಸಮಿತಿಗೆ ಅಭಿನಂದನೆ:
ರೋಟರಿ ಜಿಲ್ಲಾ ಸಮಿತಿಯಲ್ಲಿ ವಿವಿಧ ಹುದ್ದೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ರೋಟರಿ ಎಲೈಟ್ ಸದಸ್ಯರಾದ ಆಸ್ಕರ್ ಆನಂದ್(ರೋಟರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಚೇರ್‌ಮ್ಯಾನ್), ಅಶ್ವಿನ್ ಎಲ್.ಶೆಟ್ಟಿ(ವೈಸ್ ಚೇರ್‌ಮ್ಯಾನ್ ಟೋಸ್ಟ್ ಮಾಸ್ಟರ್‍ಸ್ ಕನೆಕ್ಟ್), ಈಶ್ವರ್ ಬೆಡೇಕರ್(ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಕೋ-ಆರ್ಡಿನೇಟರ್, ಮೌನೇಶ್ ವಿಶ್ವಕರ್ಮ(ಡಿಸ್ಟ್ರಿಕ್ಟ್ ಸಾಂಸ್ಕೃತಿಕ ಕಾರ್ಯಕ್ರಮಗಳ ಕೋ-ಆರ್ಡಿನೇಟರ್), ಕಾರ್ಯಪ್ಪ ವಿ.ಪಿ(ಟ್ರಿ ಪ್ಲಾಂಟೇಶನ್ ವೈಸ್ ಚೇರ್‌ಮ್ಯಾನ್), ರಂಜಿತ್ ಮಾಥಾಯಿಸ್(ಫೋರ್ ವೇ ಟೆಸ್ಟ್ ಕೋ-ಆರ್ಡಿನೇಟರ್), ವಂ|ವಿಜಯ ಹಾರ್ವಿನ್(ಸೋಶಿಯಲ್ ಮೀಡಿಯಾ ಕೋ-ಆರ್ಡಿನೇಟರ್), ಮನ್ಸೂರ್(ಹ್ಯಾಪಿ ಸ್ಕೂಲ್ ಕೋ-ಆರ್ಡಿನೇಟರ್)ರವರನ್ನು ಈ ಸಂದರ್ಭದಲ್ಲಿ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಹೂ ನೀಡಿ ಅಭಿನಂದಿಸಿದರು.

ಇಂಟರ್‍ಯಾಕ್ಟ್ ಕ್ಲಬ್ ಪದಾಧಿಕಾರಿಗಳಿಗೆ ಅಭಿನಂದನೆ:
ರೋಟರಿ ಕ್ಲಬ್ ಪುತ್ತೂರು ಎಲೈಟ್ ಪ್ರಾಯೋಜಿಸಿದ ಇಂಟರ್‍ಯಾಕ್ಟ್ ಕ್ಲಬ್ ಪದಾಧಿಕಾರಿಗಳಾದ ಅಧ್ಯಕ್ಷೆ ವಿಖ್ಯಾತಿ ನಾರಾಯಣ್, ಕಾರ್ಯದರ್ಶಿ ಅಭಿನವ್, ಚೇರ್‌ಮ್ಯಾನ್‌ಗಳಾದ ರೋಟರಿ ಎಲೈಟ್ ಕ್ಲಬ್ ಸದಸ್ಯೆ ಲವೀನಾ ಹನ್ಸ್ ಹಾಗೂ ವಿನಯ ರೈಯವರಿಗೆ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಹೂ ನೀಡಿ ಗೌರವಿಸಿದರು.

ಎಸೆಸ್ಸೆಲ್ಸಿ ರ್‍ಯಾಂಕ್ ವಿಜೇತರಿಗೆ ಅಭಿನಂದನೆ:
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ೨ನೇ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳಾದ ಅರ್ಪಿತಾ ಶೇಟ್(೬೨೪ ಅಂಕ)), ಮೂರನೇ ರ್‍ಯಾಂಕ್ ಗಳಿಸಿದ ಧನ್ವಿನಿ ಜೆ(೬೨೩), ಫಾತಿಮಾ ಇಶಾನಾ(೬೨೩), ತನ್ವಿತಾ ಎಂ(೬೨೩), ನಾಲ್ಕನೇ ರ್‍ಯಾಂಕ್ ಗಳಿಸಿದ ಯು.ಪ್ರತಿಕ್ಷಾ ಕಿಣಿ(೬೨೨), ಅನನ್ಯ ಎಸ್.ಜೈನ್(೬೨೨), ಏಳನೇ ರ್‍ಯಾಂಕ್ ಗಳಿಸಿದ ಗಣ್ಯಶ್ರೀ ಜಿ.ಎರವರನ್ನು ಮತ್ತು ಆನೆಟ್ ರಿಯಾನ್ನಾರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಸನ್ಮಾನ:
ಪದ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿ ಪದ ಪ್ರದಾನವನ್ನು ನೆರವೇರಿಸಿದ ಪಿಡಿಜಿ ಜೋಸೆಫ್ ಮ್ಯಾಥ್ಯೂರವರಿಗೆ ಪತ್ರಕರ್ತ ಮೌನೇಶ್ ವಿಶ್ವಕರ್ಮರವರು ರಚಿಸಿದ ಜೋಸೆಫ್ ಮ್ಯಾಥ್ಯೂರವರ ಭಾವಚಿತ್ರವಿರುವ ಫ್ರೇಮ್‌ನೊಂದಿಗೆ ಸನ್ಮಾನಿಸಲಾಯಿತು. ಮತ್ತು ೨೦೨೧-೨೨ನೇ ಸಾಲಿನಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಉತ್ತಮ ಸಾಧನೆ ನಿರ್ವಹಿಸಿ ಕ್ಲಬ್ ಉತ್ತುಂಗಕ್ಕೆ ಶ್ರಮಿಸಿದ ನಿರ್ಗಮಿತ ಅಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ರಂಜಿತ್ ಮಥಾಯಿಸ್‌ರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಪಿಎಚ್‌ಎಫ್‌ಗೆ ಸೇರ್ಪಡೆ:
ಇಂಟರ್‌ನ್ಯಾಷನಲ್ ಸರ್ವಿಸ್ ವತಿಯಿಂದ ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿಎಚ್‌ಎಫ್ ಪದವಿಗೆ ಪಾತ್ರರಾದ ಸದಸ್ಯ ಸಿಲ್ವೆಸ್ತರ್ ಡಿ’ಸೋಜರವರಿಗೆ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಅಭಿನಂದಿಸಿದರು. ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕ ಕಾರ್ಯಪ್ಪ ವಿ.ಪಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಕೊನೆಗೆ ಲಕ್ಕಿ ಡ್ರಾ ನಡೆಸಲಾಗಿದ್ದು, ಇದರಲ್ಲಿ ವೇದಾವತಿ ನಾಕ್‌ರವರು ವಿಜೇತರಾಗಿ ಕೊಡೆಯೊಂದನ್ನು ಬಹುಮಾನವಾಗಿ ಪಡೆದರು. ನೂತನ ಕಾರ್ಯದರ್ಶಿ ಸಿಲ್ವಿಯಾ ಡಿ’ಸೋಜ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ರಂಜಿತ್ ಮಥಾಯಿಸ್ ರವರು ವರದಿ ಮಂಡಿಸಿ, ಪಿಡಿಜಿ ಜೋಸೆಫ್ ಮ್ಯಾಥ್ಯೂರವರ, ನೂತನ ಸದಸ್ಯೆ ಹರಿಣಿ ಪುತ್ತೂರಾಯರವರು ನೂತನ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ರವರ ಪರಿಚಯ ಮಾಡಿದರು. ಕ್ಲಬ್ ಸದಸ್ಯರಾದ ಲವೀನಾ ಹನ್ಸ್ ಹಾಗೂ ರಾಮ ಕೆ ಕಾರ್ಯಕ್ರಮ ನಿರೂಪಿಸಿದರು.

ಚಾರಿಟೇಬಲ್ ಟ್ರಸ್ಟ್ ಲೋಕಾರ್ಪಣೆ…
ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ರೋಟರಿ ಎಲೈಟ್‌ನ ಕನಸಿನ ಪ್ರಾಜೆಕ್ಟ್ ಎನಿಸಿದ ರೋಟರಿ ಎಲೈಟ್ ಚಾರಿಟೇಬಲ್ ಟ್ರಸ್ಟ್‌ನ ವಾಹನ ಅನ್ನು ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಲೋಕಾರ್ಪಣೆಗೊಳಿಸಿದರು. ರೋಟರಿ ಎಲೈಟ್ ಚಾರಿಟೇಬಲ್ ಟ್ರಸ್ಟ್‌ನ ಚೇರ್‌ಮ್ಯಾನ್ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ವೈಸ್ ಚೇರ್‌ಮ್ಯಾನ್ ಡಾ|ಅಶ್ವಿನ್ ಎಲ್.ಶೆಟ್ಟಿ, ಕಾರ್ಯದರ್ಶಿ ಆಸ್ಕರ್ ಆನಂದ್, ಜೊತೆ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ, ಕೋಶಾಧಿಕಾರಿ ಸಿಲ್ವಿಯಾ ಡಿ’ಸೋಜ, ಟ್ರಸ್ಟಿ ಸದಸ್ಯರಾದ ವಂ|ವಿಜಯ ಹಾರ್ವಿನ್, ರಾಮ ಕೆ, ತೋಮಸ್ ಫೆರ್ನಾಂಡೀಸ್, ಸುಧೀರ್ ಬಿ, ಸಿಲ್ವೆಸ್ತರ್ ಡಿ’ಸೋಜ, ಮನ್ಸೂರ್‌ರವರಿಗೆ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಹೂ ನೀಡಿ ಗೌರವಿಸಿದರು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸುಧೀರ್ ಬಿ.ರವರು ಕಾರ್ಯಕ್ರಮ ನಿರ್ವಹಿಸಿದರು.

ಯೋಜನೆಗಳು…
ಹಲವು ರೋಗಗಳಿಗೆ ಮನೆಮದ್ದು ಮೂಲಕ ಚಿಕಿತ್ಸೆ ನೀಡುವ ಹಾಗೂ ಪಾರಂಪಾರಿಕವಾಗಿ ಮದ್ದು ನೀಡುತ್ತಾ ಬಂದಿರುವವರನ್ನು ಮತ್ತು ವೃತ್ತಿ ಕುಶಲಕರ್ಮಿಗಳು ಯಾರಿದ್ದಾರೋ ಅಂಥವರನ್ನು ಗುರುತಿಸಿ ಒಂದೆಡೆ ಸೇರಿಸಿ ಅದ್ದೂರಿ ಕಾರ್ಯಕ್ರಮ ಮಾಡುವ ಯೋಜನೆಯಿದೆ ಎಂದು ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್‌ರವರು ಈ ಸಂದರ್ಭದಲ್ಲಿ ಹೇಳಿದರು.

ನೂತನ ಪದಾಧಿಕಾರಿಗಳ ಪದ ಪ್ರದಾನ…
ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್‌ರವರಿಗೆ ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಕೊರಳಪಟ್ಟಿಯನ್ನು ಹಾಕಿ, ರೋಟರಿ ದಂಡ ನೀಡಿ ಪದ ಪ್ರದಾನವನ್ನು ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಸಿಲ್ವಿಯಾ ಡಿ’ಸೋಜ, ಕೋಶಾಧಿಕಾರಿ ಮೌನೇಶ್ ವಿಶ್ವಕರ್ಮ, ನಿಯೋಜಿತ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್‍ಸ್, ಸಾರ್ಜಂಟ್ ಎಟ್ ಆರ್ಮ್ಸ್ ಬಾಲು ಬಿ.ನಾಕ್, ಬುಲೆಟಿನ್ ಎಡಿಟರ್ ಪದ್ಮಾವತಿ, ನಿರ್ದೇಶಕರುಗಳಾಗಿ ಕ್ಲಬ್ ಸರ್ವಿಸ್ ಆಸ್ಕರ್ ಆನಂದ್, ವೊಕೇಶನಲ್ ಸರ್ವಿಸ್ ತುಷಾರ್ ಕರ್ಕೇರಾ, ಕಮ್ಯೂನಿಟಿ ಸರ್ವಿಸ್ ಸುಧೀರ್ ಬಿ, ಇಂಟರ್‌ನ್ಯಾಷನಲ್ ಸರ್ವಿಸ್ ಕಾರ್ಯಪ್ಪ ವಿ.ಪಿ, ಯೂತ್ ಸರ್ವಿಸ್ ಸಿಯಾಕ್ ಮೊಹಮದ್, ಚೇರ್‌ಮ್ಯಾನ್‌ಗಳಾಗಿ ಮೆಂಬರ್‌ಶಿಪ್ ಡೆವಲಪ್‌ಮೆಂಟ್‌ಗೆ ರಾಮ ಕೆ, ಪಬ್ಲಿಕ್ ಇಮೇಜ್‌ಗೆ ಈಶ್ವರ್ ಬೆಡೇಕರ್, ರೋಟರಿ ಫೌಂಡೇಶನ್(ಟಿಆರ್‌ಎಫ್)ಗೆ ಶಮೀರುದ್ದೀನ್, ಟೀಚ್‌ಗೆ ಲವೀನಾ ಹನ್ಸ್, ವಿನ್ಸ್‌ಗೆ ನಿಧೀಶ್ ಉಡುಪ, ವೆಬ್‌ಗೆ ರಂಜಿತ್ ಮಥಾಯಿಸ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್‌ಗೆ ಸಿಲ್ವೆಸ್ತರ್ ಡಿ’ಸೋಜ, ಪಲ್ಸ್ ಪೋಲಿಯೋಗೆ ಡಾ|ವಿಖ್ಯಾತ್ ನಾರಾಯಣ್, ಕ್ರೀಡೆಗೆ ಮೊಹಮದ್ ಕೆ.ಶಾಕೀರ್, ಸಾಂಸ್ಕೃತಿಕ ಇವೆಂಟ್ಸ್‌ಗೆ ಸುಪ್ರೀತ್ ಮನೋರಾಜ್, ವಾಟರ್ ಆಂಡ್ ಸ್ಯಾನಿಟೇಶನ್‌ಗೆ ಶ್ರೇಯಸ್ ಆನಂದ್, ಸಿಎಲ್‌ಸಿಸಿಗೆ ಜೋಯೆಲ್ ಕುಟಿನ್ಹಾರವರನ್ನು ಪಿಡಿಜಿ ಜೋಸೆಫ್ ಮ್ಯಾಥ್ಯೂರವರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here